ಕರ್ನಾಟಕ: 10 ಸಾವಿರದ ಗಡಿ ದಾಟಿದ ಕೋವಿಡ್‌ ಸಾವುಗಳ ಸಂಖ್ಯೆ

ಸಕ್ರಿಯವಾಗಿರುವ 1,15,776 ಸೋಂಕಿತರಲ್ಲಿ, 928 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಕರ್ನಾಟಕ: 10 ಸಾವಿರದ ಗಡಿ ದಾಟಿದ ಕೋವಿಡ್‌ ಸಾವುಗಳ ಸಂಖ್ಯೆ

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೆಪ್ಟೆಂಬರ್‌ 9ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 7,606 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ 3,498 ಹೊಸ ಪ್ರಕರಣಗಳು ಕಂಡು ಬಂದಿವೆ.

ರಾಜ್ಯದಲ್ಲಿ ಒಟ್ಟು ಕರೋನಾ ಪೀಡಿತರ ಸಂಖ್ಯೆ 7,17,915ಕ್ಕೆ ತಲುಪಿದೆ. ಸಕ್ರಿಯವಾಗಿರುವ 1,15,776 ಪ್ರಕರಣಗಳಲ್ಲಿ, 928 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದ ಇದುವರೆಗೂ 10,036 ಮಂದಿ ಅಸುನೀಗಿದ್ದಾರೆ. ಕಳೆದ 24 ಗಂಟೆಯಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com