ʼಗ್ಯಾಸ್ ಟ್ರಬಲ್‌ʼ: 5 ತಿಂಗಳಿಂದ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ ಅಡುಗೆ ಅನಿಲ ಸಬ್ಸಿಡಿ

ಮೇ ತಿಂಗಳಿನಿಂದ ಯಾರ ಬ್ಯಾಂಕ್ ಖಾತೆಗೂ LPG ಸಿಲಿಂಡರ್‌ನ ಸಬ್ಸಿಡಿ ಜಮೆ ಆಗಿಲ್ಲ. ಸೆ.1ರಿಂದಲೇ ಕೇಂದ್ರ ಸರ್ಕಾರ ಸಬ್ಸಿಡಿ ಸಂಪೂರ್ಣ ಸ್ಥಗಿತದ ಘೋಷಣೆ ಮಾಡಿದ್ದರಿಂದ ಉತ್ತರ ಕರ್ನಾಟಕದಲ್ಲಿ ಗ್ರಾಹಕರ ಆಕ್ರೋಶ ಹೆಚ್ಚಾಗಿದೆ. ಪ್ರವಾಹ, ಕೋವಿಡ್ ಪೆಟ ...
ʼಗ್ಯಾಸ್ ಟ್ರಬಲ್‌ʼ: 5 ತಿಂಗಳಿಂದ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ ಅಡುಗೆ ಅನಿಲ ಸಬ್ಸಿಡಿ

ದೇಶದ 50 ಕೋಟಿ ಕುಟುಂಬಗಳು ಬಳಸುವ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಮೇ ತಿಂಗಳಿನಿಂದ ಯಾರ ಬ್ಯಾಂಕ್ ಖಾತೆಗೂ ಜಮೆಯಾಗಿಲ್ಲ. ಇನ್ನೂ, ಈ ಕರೋನಾ ಸಂಕಷ್ಟದ ಸಂದರ್ಭದಲ್ಲಿ ಸೆಪ್ಟೆಂಬರ್ 1ರಿಂದಲೇ LPG ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಮಾಡಿದೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಜಾಗತಿಕ ಮಟ್ಟದಲ್ಲಿ ತೈಲ ದರ ಕುಸಿತ ಹಾಗೂ LPG ಗ್ಯಾಸ್ ಸಿಲಿಂಡರ್ ದರದಲ್ಲಿನ ನಿಯಮಿತ ಏರಿಕೆಯಿಂದಾಗಿ LPG ದರವು ಮಾರುಕಟ್ಟೆ ದರಕ್ಕೆ ಸಮವಾಗಿರುವ ಕಾರಣ, ಸಬ್ಸಿಡಿ ಮೊತ್ತವನ್ನು ಸಂಪೂರ್ಣವಾಗಿ ರದ್ದು ಮಾಡುತ್ತಿರುವುದಾಗಿ ಸರ್ಕಾರ ಘೋಷಿಸಿದ್ದು, ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಬ್ಸಿಡಿಯಿಂದ ಗ್ರಾಹಕರಿಗೆ ಅನುಕೂಲ:

ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂರ‍್ಗಿದ್ದ ಸಬ್ಸಿಡಿ ಹೊರತಾದ 450 ರೂ. ದರವನ್ನು ಪ್ರತಿ ತಿಂಗಳೂ 5, 10 ರೂ.ಗಳಂತೆ ಏರಿಸಿ 582ರಿಂದ 602ರೂ. ನಡುವೆ ನಿಗದಿಗೊಳಿಸಿದೆ.

ಹೀಗಾಗಿ ಗ್ಯಾಸ್ ಸಿಲಿಂಡರ್ ದರ ಏರಿದರೆ ಸಿಗುತ್ತಿದ್ದ ಸಬ್ಸಿಡಿ 150 ರೂ. ಖೋತಾ ಆಗಿದೆ. ಕಳೆದ ಮಾರ್ಚ್‌ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ದರ 798 ರೂ.ಗಳಾಗಿದ್ದರೆ 216.71 ರೂ. ಸಬ್ಸಿಡಿ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು.

ಎರಡು ವರ್ಷ ಹಿಂದೆ ಗ್ಯಾಸ್ ಸಿಲಿಂಡರ್‌ಗೆ 600 ರೂ. ಕೊಟ್ಟರೂ 150 ರೂ. ಸಬ್ಸಿಡಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಈಗ ಏನಿಲ್ಲ. ಕೊರೊನಾ ಸಂಕಷ್ಟ ಕಾಲದಲ್ಲಿ ಬ್ಯಾಂಕ್ ಖಾತೆಗೆ ಚಿಲ್ಲರೆ ಕಾಸು ಬಿದ್ದರೂ ನಮ್ಮಂತಹ ಬಡವರಿಗೆ ನೆರವಾಗುತ್ತಿತ್ತು
ಮುತ್ತಣ್ಣ ಭರಡಿ, ಸಮಾಜ ಸೇವಕ, ಗದಗ

ಸೆ.1 ಸಬ್ಸಿಡಿ ರದ್ದು ಓಕೆ; ಹಿಂದಿನ ಹಣ ಖಾತೆಗೆ ಜಮೆಯಾಗಿಲ್ಲ ಯಾಕೆ..?

ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರವು ದೇಶೀಯ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ ಸೆ.೧ ರಿಂದು ರದ್ದು ಮಾಡಲಾಗಿದೆ ಎಂದು ಘೋಷಿಸಿದೆ. ಇದರಿಂದ ಸಬ್ಸಿಡಿ ರಹಿತ ಮತ್ತು ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂರ‍್ಗಳ ಬೆಲೆ ಒಂದೇ ಆಗಿರುತ್ತದೆ. ಯಾವುದೇ ಗ್ರಾಹಕ ಸಿಲಿಂಡರ್ ಖರೀದಿಸಿದರೂ ಏಕರೂಪದ ಬೆಲೆ ಪಾವತಿಸಬೇಕು ಎಂದು ತಿಳಿಸಿದೆ.

ಆದರೆ, ಸರ್ಕಾರವು ಕಳೆದ ಐದು ತಿಂಗಳಿನಿಂದ ಯಾವುದೇ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಹಣವನ್ನು ಹಾಕಿರಲಿಲ್ಲ ಎಂಬ ವಿಷಯವನ್ನು ಇಲ್ಲಿ ಗಮನಿಸಬೇಕು. ಸಬ್ಸಿಡಿ ಹಣವನ್ನು ಪಾವತಿ ಮಾಡಿಲ್ಲದಿರುವುದಕ್ಕೆ ಸರ್ಕಾರ ಯಾವುದೇ ಕಾರಣವನ್ನೂ ಸಹ ನೀಡಿರಲಿಲ್ಲ. ಇದೀಗ ಏಕಾಏಕಿ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ನಿಯಮ ಜಾರಿ ಮಾಡಿದೆ.

ಏಪ್ರಿಲ್ನಲ್ಲಿ 734.30 ರೂ. ದರಕ್ಕೆ 146.24 ರೂ. ಸಬ್ಸಿಡಿ ದೊರೆತಿತ್ತು. ಮೇ(588 ರೂ.), ಜೂನ್(599.50 ರೂ.), ಜುಲೈ, ಆಗಸ್ಟ್(601.50 ರೂ.) ಸೆಪ್ಟೆಂಬರ್ (೫೯೮.೫೦) ತಿಂಗಳಲ್ಲಿನಯಾ ಪೈಸೆ ಸಬ್ಸಿಡಿ ಬ್ಯಾಂಕ್ ಖಾತೆಗೆ ಬಿದ್ದಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com