ಡಾ. ಸುಧಾಕರ್‌ ಹೆಗಲಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿ: ಸಂಪುಟದಲ್ಲಿ ಬದಲಾವಣೆ

ಶ್ರೀರಾಮುಲು ಅವರ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾತ್ರ ಉಳಿದಿದ್ದು, ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ
ಡಾ. ಸುಧಾಕರ್‌ ಹೆಗಲಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿ: ಸಂಪುಟದಲ್ಲಿ ಬದಲಾವಣೆ

ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಡುವೆ ಸರಿಯಾದ ಸಂವಹನ ನಡೆಯುತ್ತಿಲ್ಲ ಎಂಬ ಅಪವಾದ ಕೇಳಿಬಂದ ಕಾರಣಕ್ಕೆ ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ಡಾ. ಸುಧಾಕರ್‌ ಅವರ ಹೆಗಲಿಗೆ ನೀಡಲಾಗಿದೆ. ಈ ಎರಡೂ ಇಲಾಖೆಗಳ ನಡುವೆ ಕರೋನಾ ಸಂಕಷ್ಟ ಆರಂಭವಾದ ದಿನದಿಂದಲೂ ಜಟಾಪಟಿ ನಡೆದಿದ್ದು, ಈಗ ಶ್ರೀರಾಮುಲು ಅವರಿಂದ ಆರೋಗ್ಯ ಖಾತೆಯನ್ನು ವಾಪಾಸ್‌ ಪಡೆಯಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸುಧಾಕರ್‌ ಅವರು ಕೂಡಾ ಎರಡೂ ಖಾತೆಗಳು ಒಬ್ಬರ ಬಳಿಯೇ ಇರಬೇಕು ಎಂದು ಒತ್ತೆವನ್ನು ಹೇರಿದ್ದರು. ರಾಜ್ಯದಲ್ಲಿ ಕರೋನಾ ನಿಯಂತ್ರಣದ ವಿಚಾರ ಬಂದಾಗ ತನ್ನ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಸುಧಾಕರ್‌ ಹಾಗೂ ಶ್ರೀರಾಮುಲು ಇಬ್ಬರೂ ಪರಸ್ಪರ ಕಚ್ಚಾಡಿಕೊಂಡಿದ್ದರು. ಈ ದ್ವಂದ್ವಗಳಿಗೆ ಈಗ ತಾರ್ಕಿಕ ಸಮಾಧಾನ ದೊರೆತಿದೆ.

ಈಗ ಶ್ರೀರಾಮುಲು ಅವರ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾತ್ರ ಉಳಿದಿದ್ದು, ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ. ಈ ವಿಚಾರವನ್ನು ಸಿಎಂ ಯಡಿಯೂರಪ್ಪನವರು ದೃಢಪಡಿಸಿದ್ದಾರೆಂದು ವರದಿಯಾಗಿದೆ.

ಸಮಾಜ ಕಲ್ಯಾಣ ಇಲಾಖೆಯನ್ನು ಸದ್ಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಿಭಾಯಿಸುತ್ತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com