ವಿಷಲ್‌ ಬ್ಲೋವರ್ಸ್‌ ಆಕ್ಟ್‌ಗೆ ನಿಯಮಾವಳಿಗಳನ್ನು ರೂಪಿಸಲು ಮನವಿ

2014ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದಕ್ಕೆ ಸಂಬಂಧಪಟ್ಟ ನಿಯಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅನುಮತಿಯನ್ನೂ ನೀಡಲಾಗಿತ್ತು. ಆದರೆ, ಈವರೆಗೆ ನಿಯಾಮವಳಿಗಳನ್ನು ರೂಪಿಸುವ ಗೋಜಿಗೆ ಯಾವುದೇ ಸರ್ಕಾರಗಳು ಹೋಗಲಿಲ್ಲ.
ವಿಷಲ್‌ ಬ್ಲೋವರ್ಸ್‌ ಆಕ್ಟ್‌ಗೆ ನಿಯಮಾವಳಿಗಳನ್ನು ರೂಪಿಸಲು ಮನವಿ

ಭಾರತ ಸರ್ಕಾರವು 2014ರಲ್ಲಿ ಜಾರಿಗೆ ತಂದಿದ್ದ ವಿಷಲ್‌ ಬ್ಲೋವರ್ಸ್‌ ಆಕ್ಟ್‌ಗೆ ನಿಯಮಾವಳಿಗಳನ್ನು ರೂಪಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಹೆಚ್‌ ಎಂ ವೆಂಕಟೇಶ್‌ ಅವರು ಈ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಕಾಯ್ದೆಗೆ ನಿಯಮಾವಳಿಗಳನ್ನು ರೂಪಿಸುವುದರಿಂದ ಸರ್ಕಾರಿ ನೌಕರರು, ಸಾಮಾಜಿಕ ಹೋರಾಟಗಾರರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತದೆ ಎಂದು, ವೆಂಕಟೇಶ್‌ ಅವರು ತಮ್ಮ ಮನವಿಯಲ್ಲಿ ಹೇಳಿದ್ದಾರೆ.

2014ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದಕ್ಕೆ ಸಂಬಂಧಪಟ್ಟ ನಿಯಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅನುಮತಿಯನ್ನೂ ನೀಡಲಾಗಿತ್ತು. ಆದರೆ, ಈವರೆಗೆ ನಿಯಾಮವಳಿಗಳನ್ನು ರೂಪಿಸುವ ಗೋಜಿಗೆ ಯಾವುದೇ ಸರ್ಕಾರಗಳು ಹೋಗಲಿಲ್ಲ. ಈ ವಿಚಾರವು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದು, ನಿಯಮಗಳನ್ನು ರೂಪಿಸಿದಲ್ಲಿ ಹೋರಾಟಗಾರರ ಕೈ ಬಲಪಡಿಸಿದಂತಾಗುತ್ತದೆ ಎಂದು, ವೆಂಕಟೇಶ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com