ಮಾಸ್ಕ್‌ ದಂಡ ಕಡಿತಗೊಳಿಸಿದ ಸರ್ಕಾರ

ಈ ಕುರಿತಾಗಿ ಪ್ರತಿಧ್ವನಿಯು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಮಾಸ್ಕ್‌ ಹಾಕದೇ ಇರುವುದಕ್ಕೆ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸುವುದು ಸರಿಯಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದರು.
ಮಾಸ್ಕ್‌ ದಂಡ ಕಡಿತಗೊಳಿಸಿದ ಸರ್ಕಾರ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಹಾಕದೇ ಇರುವುದಕ್ಕೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರೂ. 1000 ದಂಡ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೂ. 500 ದಂಡ ಎಂದು ಆದೇಶ ಹೊರಡಿಸಿದ್ದ ಸರ್ಕಾರ ಈಗ ದಂಡದ ಮೊತ್ತವನ್ನು ಕಡಿತಗೊಳಿಸಿದೆ. ಸಾರ್ವಜನಿಕರಿಂದ ಟೀಕೆಗೆ ಕೊನೆಗೂ ಸರ್ಕಾರ ಬಗ್ಗಿದೆ.

ಬುಧವಾರ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಇದರ ಪ್ರಕಾರ 1000 ರೂ. ಇದ್ದಲ್ಲಿ 250 ಹಾಗೂ 500 ಇದ್ದಲ್ಲಿ 100 ರೂ. ದಂಡ ವಿಧಿಸಲು ಅವಕಾಶ ನೀಡಲಾಗಿದೆ.

ಈ ಕುರಿತಾಗಿ ಪ್ರತಿಧ್ವನಿಯು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಜನರಿಗೆ ಕೆಲಸವೇ ಇಲ್ಲದ ಸಂದರ್ಭದಲ್ಲಿ 1000 ರೂ. ದಂಡ ಕಟ್ಟಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು. ಇನ್ನೊಬ್ಬರು, ಮೊದಲು ಸರ್ಕಾರ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲಿ, ಆಮೇಲೆ ಜನರಿಗೆ ಬುದ್ದಿ ಹೇಳಲಿ. ಅವರೇ ಕೆಲಸ ಮಾಡಲ್ಲ, ಇನ್ನು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಹೇಳಿದ್ದರು.

ಸಾರ್ವಜನಿಕರ ಅಭಿಪ್ರಾಯದ ಸಂಪೂರ್ಣ ವೀಡಿಯೋ ಇಲ್ಲಿದೆ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com