ಡಿಕೆಶಿ ಮೇಲೆ ಸಿಬಿಐ ದಾಳಿ: 50 ಲಕ್ಷ ನಗದು ವಶ

ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿದ ಸ್ಥಳದಿಂದ 50 ಲಕ್ಷ ನಗದನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಧೃಡಪಡಿಸಿದ್ದಾರೆ.
ಡಿಕೆಶಿ ಮೇಲೆ ಸಿಬಿಐ ದಾಳಿ: 50 ಲಕ್ಷ ನಗದು ವಶ

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಸೇರಿದ್ದೆನ್ನಲಾದ 14 ಸ್ಥಳಗಳಿಗೆ ಏಕಕಾಲದಲ್ಲಿ ನಡೆಸಿದ ಸಿಬಿಐ ಅಧಿಕಾರಿಗಳು 50 ಲಕ್ಷ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡಿಕೆ ಶಿವಕುಮಾರ್‌ ಸಹೋದರ ಡಿಕೆ ಸುರೇಶ್‌ ನಿವಾಸ, ಕನಕಪುರದಲ್ಲಿರುವ ಡಿಕೆಶಿ ನಿವಾಸ, ಕಛೇರಿಗಳು ಸೇರಿದಂತೆ 15 ಕ್ಕೂ ಹೆಚ್ಚು ಡಿಕೆಶಿಗೆ ಸಂಬಂಧಿಸಿದ ಸ್ಥಳಗಳಿಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆಂದು ANI ವರದಿ ಮಾಡಿತ್ತು.

ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿದ ಸ್ಥಳದಿಂದ 50 ಲಕ್ಷ ನಗದನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಧೃಡಪಡಿಸಿದ್ದಾರೆ.

ಸೋಲಾರ್‌ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ಆಯೋಜಿಸಲಾಗಿದೆ ಎಂದು ಮೂಲಗಳು ಹೇಳಿದರೂ, ಕಾಂಗ್ರೆಸ್‌ ನಾಯಕರು ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದಾರೆ.

ಈ ಹಿಂದೆ ಐಟಿ, ಇಡಿ ಇಲಾಖೆ ಡಿಕೆ ಶಿವಕುಮಾರ್‌ ಮೇಲೆ ದಾಳಿ ಮಾಡಿದ್ದವು. ಡಿಕೆಶಿ ಬಂಧನಕ್ಕೂ ಒಳಗಾಗಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com