ಸಚಿವ ಸ್ಥಾನಕ್ಕೆ ಸಿ ಟಿ ರವಿ ರಾಜಿನಾಮೆ

ಬಿಜೆಪಿಯ ʼಒಬ್ಬರಿಗೆ ಒಂದು ಹುದ್ದೆʼ ನೀತಿಯಂತೆ ಸಿ ಟಿ ರವಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲೇ ಬೇಕಾದ ಅನಿವಾರ್ಯತೆ ಇತ್ತು.
ಸಚಿವ ಸ್ಥಾನಕ್ಕೆ ಸಿ ಟಿ ರವಿ ರಾಜಿನಾಮೆ

ನಿರೀಕ್ಷೆಯಂತೇ ರಾಜ್ಯದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ, ಪಕ್ಷದ ʼಒಬ್ಬರಿಗೆ ಒಂದು ಹುದ್ದೆʼ ನೀತಿಯಂತೆ ಸಿ ಟಿ ರವಿ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲೇ ಬೇಕಾದ ಅನಿವಾರ್ಯತೆ ಇತ್ತು.

ಸಚಿವ ಸ್ಥಾನಕ್ಕೆ ಸಿ ಟಿ ರವಿ ರಾಜಿನಾಮೆ
ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸಚಿವ ಸಿ ಟಿ ರವಿ ಆಡಿದ ಮಾತಿನ ಗುರಿ ಏನು?

“ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಭೆ ಇರುವುದರಿಂದ ದೆಹಲಿಗೆ ತೆರಳಲಿದ್ದೇನೆ,” ಎಂದು ಸಿ ಟಿ ರವಿ ಹೇಳಿದ್ದಾರೆ.

ಸಚಿವ ಸ್ಥಾನಕ್ಕೆ ಸಿ ಟಿ ರವಿ ರಾಜಿನಾಮೆ
ಸಚಿವ ಸ್ಥಾನದಿಂದ ಕೆಳಗಿಳಿಯಲಿರುವ ಸಿಟಿ ರವಿ: ಯಡಿಯೂರಪ್ಪ ನಿರಾಳ

“ಒಬ್ಬರಿಗೆ ಒಂದು ಹುದ್ದೆ ಎಂಬುದು ಪಕ್ಷದ ಅಲಿಖಿತ ನಿಯಮ. ಕೆಲವು ಸಂದರ್ಭದಲ್ಲಿ ಆ ನಿಯಮ ಕೆಲವರಿಗೆ ಅನ್ವಯವಾಗದೇ ಇರುವ ಉದಾಹರಣೆಗಳೂ ಇವೆ. ಹಾಗೇ 75 ವರ್ಷ ಮೇಲ್ಪಟ್ಟವರು ಅಧಿಕಾರ ರಾಜಕಾರಣದಿಂದ ನಿವೃತ್ತಿ ಹೊಂದಬೇಕು ಎಂಬ ಅಲಿಖಿತ ನಿಯಮವೂ ಇದೆ. ಆ ನಿಯಮ ಕೂಡ ಕೆಲವರ ವಿಷಯದಲ್ಲಿ ಬದಲಾವಣೆಯಾಗಿದೆ," ಎಂದು ಸಿ ಟಿ ರವಿ ಅವರು ಮಾರ್ಮಿಕವಾಗಿ ನುಡಿದಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com