ತೇಜಸ್ವಿ ಸೂರ್ಯ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ HM ವೆಂಕಟೇಶ್

ಕಳೆದ ವಾರ ತೇಜಸ್ವಿ ಸೂರ್ಯ ನೀಡಿದ ವಿವಾದಾತ್ಮಕ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಒಳಗಾಗಿತ್ತು.
ತೇಜಸ್ವಿ ಸೂರ್ಯ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ HM ವೆಂಕಟೇಶ್

ಬೆಂಗಳೂರನ್ನು ಭಯೋತ್ಪಾದಕರ ಕೇಂದ್ರು ಬಿಂದು ಎಂದಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಹೆಚ್‌ ಎಂ ವೆಂಕಟೇಶ್‌ ಎಂಬವರು ಬೆಂಗಳೂರು ಪೊಲೀಶ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ಕಳೆದ ವಾರ ತೇಜಸ್ವಿ ಸೂರ್ಯ ನೀಡಿದ ವಿವಾದಾತ್ಮಕ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಒಳಗಾಗಿತ್ತು. ಮುಖ್ಯವಾಗಿ ಬೆಂಗಳೂರು ನಗರದ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಸಂಸದರು ನೀಡಿದ್ದಾರೆಂದು ಪ್ರತಿಪಕ್ಷಗಳು ಸೇರಿದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿಯ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ತೇಜಸ್ವಿ ಸೂರ್ಯ, ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ ಹಾಗಾಗಿ ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಶಾಶ್ವತ ವಿಭಾಗವನ್ನು ಸ್ಥಾಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದರು.

ತೇಜಸ್ವಿ ಸೂರ್ಯ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ HM ವೆಂಕಟೇಶ್
ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದು: ತೇಜಸ್ವಿ ಸೂರ್ಯ

“ನಗರದ ನಾಗರಿಕರ ನೆಮ್ಮದಿಯ ಜೀವನಕ್ಕೆ ಭಂಗ ತರುವಂತೆ ಭಯದ ವಾತಾವರಣವನ್ನು ಸೃಷ್ಟಿಸಿ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕನ್ನು ಸಾಗಿಸುತ್ತಿರುವ ನಾಗರಿಕರಿಗೆ ಬೆಂಗಳೂರು ನಗರ ಭಯೋತ್ಪಾದಕರ ಚಟುವಟಿಕೆ ಕೇಂದ್ರಬಿಂದುವಾಗಿದೆ ಎಂಬ ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಅವರ ಟ್ವಿಟ್ಟರ್ ಖಾತೆ ಮತ್ತು ಮಾಧ್ಯಮಗಳ ವರದಿಗಳ ಮೂಲಕ ನೋಡಿದ ನಾಗರಿಕರಿಗೆ ಬೆಂಗಳೂರು ನಗರದಲ್ಲಿ ಎಲ್ಲಿ ಯಾವಾಗ ಭಯೋತ್ಪಾದಕರು ನಾಗರಿಕರ ಮೇಲೆ ದಾಳಿ ಮಾಡುತ್ತಾರೆ ಎಂಬ ಆತಂಕಕ್ಕೆ ಒಳಗಾಗಿರುವುದರಿಂದ ಮುಕ್ತವಾಗಿ ಸಂಚರಿಸಲು ಮತ್ತು ನೆಮ್ಮದಿಯ ಜೀವನ ನಡೆಸುವುದರ ಜೊತೆಗೆ ನೆಮ್ಮದಿಯ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ತಾವುಗಳು ತೇಜಸ್ವಿ ಸೂರ್ಯ ಅವರ ಟ್ವಿಟ್ಟರ್ ಖಾತೆ ಮತ್ತು ಅವರ ಇನ್ನಿತರ ಮಾಹಿತಿಗಳನ್ನು ಮತ್ತು ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ಪರಿಶೀಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವುದರ ಮೂಲಕ ಬೆಂಗಳೂರು ಮಹಾನಗರದ ನಿವಾಸಿಗಳಿಗೆ ನೆಮ್ಮದಿಯ ಮತ್ತು ಶಾಂತಿಯುತ ಜೀವನ ನಡೆಸಲು ತೇಜಸ್ವಿ ಸೂರ್ಯರವರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ದೂರಿನಲ್ಲಿ ವೆಂಕಟೇಶ್‌ ಅವರು ವಿನಂತಿಸಿಕೊಂಡಿದ್ದಾರೆ.

ತೇಜಸ್ವಿ ಸೂರ್ಯ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ HM ವೆಂಕಟೇಶ್
ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ

ಗೌರವಾನ್ವಿತ ಪೊಲೀಸ್ ಆಯುಕ್ತರಾದ ತಾವುಗಳು ತಕ್ಷಣ ತೇಜಸ್ವಿ ಸೂರ್ಯ ಮೇಲೆ ಎಫ್.ಐ.ಆರ್ (ಪ್ರಥಮ ವರ್ತಮಾನ ವರದಿ) ದಾಖಲಿಸಿ ಬೆಂಗಳೂರು ನಗರದಲ್ಲಿ ಎಲ್ಲೆಲ್ಲಿ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಗಳಿವೆ ಎಂಬ ಮಾಹಿತಿಯನ್ನು ಪಡೆದು ಅವರೊಂದಿಗೆ ಭಯೋತ್ಪಾದಕರ ಅಡಗುತಾಣಗಳಿಗೆ ಹೋಗಿ ದಾಳಿ ನಡೆಸಿ ಭಯೋತ್ಪಾದಕರನ್ನು ಬಂಧಿಸಿ ತನಿಖೆ ಮಾಡುವ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ಮಾನ್ಯ ಪೊಲೀಸ್ ಆಯುಕ್ತರಾದ ತಾವುಗಳು ಬೆಂಗಳೂರು ನಗರದ ನಿವಾಸಿಗಳಿಗೆ ಕೊಡಬೇಕಾಗಿ ವಿನಂತಿಸುತ್ತೇನೆ ಎಂದು ಅವರು ದೂರಿನಲ್ಲಿ ಕೇಳಿಕೊಂಡಿದ್ದಾರೆ.

CamScanner 10-03-2020 13.01.23.pdf
download

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com