ಬಾಯಿಗೆ 'ಬೆಣೆ' ಬಡಿದುಕೊಂಡಿರುವ ಸಂಸದರು ಈಗ 'ಕಣಿʼ ಹೇಳುತ್ತಿದ್ದಾರೆ: ಜೆಡಿಎಸ್ ತರಾಟೆ

ಶಿರಾ ವಿಧಾನಸಭಾ ಉಪಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ರಾಜಕೀಯ ಪಕ್ಷಗಳ ಕೆಸರೆರಚಾಟ ಆರಂಭವಾಗಿದೆ. ತಮ್ಮ ಸ್ಥಾನವನ್ನು ಕಳೆದುಕೊಳ್ಳಲು ಇಚ್ಚಿಸದ ಜೆಡಿಎಸ್‌ ನಾಯಕರು, ಈಗ ಬಿಜೆಪಿ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಬಾಯಿಗೆ 'ಬೆಣೆ' ಬಡಿದುಕೊಂಡಿರುವ ಸಂಸದರು ಈಗ 'ಕಣಿʼ ಹೇಳುತ್ತಿದ್ದಾರೆ: ಜೆಡಿಎಸ್ ತರಾಟೆ

ಅಧಿಕಾರಕ್ಕಾಗಿ 'ಅಡ್ಡ’ ದಾರಿ ಹಿಡಿಯುವ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಅಡ್ಡಾದಿಡ್ಡಿಯಾಗಿ ‘ನೆರೆ ಉಕ್ಕಿ' ರಾಜ್ಯದ ಜನತೆಯ ಬದುಕು ಮೂರಾಬಟ್ಟೆ ಆಗುತ್ತದೆ. ಹೊಲ ಗದ್ದೆ ಮನೆ-ಮಠ ಕಳೆದುಕೊಂಡು ಜನತೆ ಬೀದಿಗೆ ಬೀಳುತ್ತಿದ್ದಾರೆ, ಎಂದು ಜೆಡಿಎಸ್‌ ಶಾಸಕರಾದ ಸಾರಾ ಮಹೇಶ್‌ ಹಾಗೂ ಗೌರಿಶಂಕರ್‌ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ಬಾಯಿಗೆ 'ಬೆಣೆ' ಬಡಿದುಕೊಂಡಿರುವ ಸಂಸದರು ಈಗ 'ಕಣಿʼ ಹೇಳುತ್ತಿದ್ದಾರೆ: ಜೆಡಿಎಸ್ ತರಾಟೆ
ವ್ಯಕ್ತಿಗಳ ಪಾಲಿಗಲ್ಲದಿದ್ದರೂ ಈ ಉಪಚುನಾವಣೆ ಪಕ್ಷಗಳ ಪಾಲಿಗೆ ಪ್ರತಿಷ್ಠೆಯೇ!

ತಮ್ಮ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಾಸಕದ್ವಯರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸತತ ಎರಡು ವರ್ಷ ರಾಜ್ಯ ನೆರೆಪೀಡಿತ ವಾಗಿದ್ದು, ಸಂಕಷ್ಟಕ್ಕೆ ಸಿಕ್ಕ ರೈತರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದರೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣಕಾಸು ನೆರವು ಕೇಳಲು ಬಾಯಿಗೆ ಬೆಣೆ ಪಡೆದುಕೊಂಡಿರುವ ಈ ಸಂಸದರು ವೇದಿಕೆ ಸಿಕ್ಕರೆ ನಾಲಿಗೆ ಹರಿಯ ಬಿಡುವುದರಲ್ಲಿ ನಿಸ್ಸೀಮರು, ಎಂದು ಮಾತಿನ ಚಾಟಿ ಬೀಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದ ಕೊಡಗಿನ ಜನರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಲಾ 10.30 ಲಕ್ಷ ರೂಪಾಯಿ ವೆಚ್ಚದಲ್ಲಿ 900 ಮನೆಗಳ ನಿರ್ಮಾಣ ಮಾಡಿಕೊಡಲಾಗಿದೆ. ಸಂತ್ರಸ್ತರಿಗೆ 12 ಲಕ್ಷ ರೂಪಾಯಿಗಳ ನೀಡಲಾಗಿದೆ. ತಾನು ಪ್ರತಿನಿಧಿಸುವ ಕ್ಷೇತ್ರದ ಜನರಿಗೆ ಕಿಂಚಿತ್ತೂ ಸ್ಪಂದಿಸದ ಸಂಸದ ಪ್ರತಾಪ ಸಿಂಹ, ನಳಿನ್ ಕುಮಾರ್ ಕಣ್ಣೀರು ಸುರಿಸುವ, ಒರೆಸುವ ಪ್ರಾಸಬದ್ಧ ಮಾತುಗಳನ್ನು ಉಲಿಯುವ ಮೂಲಕ ಎಲ್ಲವನ್ನೂ ಮರೆಸುವ ಬೀದಿನಾಟಕ ಶುರು ಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಬಾಯಿಗೆ 'ಬೆಣೆ' ಬಡಿದುಕೊಂಡಿರುವ ಸಂಸದರು ಈಗ 'ಕಣಿʼ ಹೇಳುತ್ತಿದ್ದಾರೆ: ಜೆಡಿಎಸ್ ತರಾಟೆ
ಸಚಿವ ರವಿ, ಸಿಂಹ, ಸೂರ್ಯರ ಬಳಗ ಸೇರಲು ಸೋಮಶೇಖರ್ ರೆಡ್ಡಿ ಹಾತೊರೆವುದೇಕೆ?

“ಇದನ್ನು ಕಂಡು ಮಾತೃ ಹೃದಯದ ನಮ್ಮ ನಾಯಕ ಕುಮಾರಸ್ವಾಮಿ ಮರುಗಿ ಕಣ್ಣೀರಿಟ್ಟರೆ ಲೇವಡಿ ಮಾಡುವ ನೀಚ ಮನಸ್ಥಿತಿಯ ಸಂಸದ ಪ್ರತಾಪ ಸಿಂಹ, ಜನರ ಸಂಕಷ್ಟದ ಕಣ್ಣೀರನ್ನೇ ಸೀಮೆಎಣ್ಣೆ ಎಂದುಕೊಂಡು ಬೆಂಕಿ ಹಚ್ಚುವ ಚಾಳಿಯ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ 'ಹನುಮಂತನೇ ಹಗ್ಗ ಕಡಿಯುವಾಗ ಪೂಜಾರಿ ಶಾವಿಗೆ ಕೇಳಿದನಂತೆ' ಎಂಬ ಜಾಯಮಾನದವರು,” ಎಂದು ಹೇಳಿದ್ದಾರೆ.

ಬಾಯಿಗೆ 'ಬೆಣೆ' ಬಡಿದುಕೊಂಡಿರುವ ಸಂಸದರು ಈಗ 'ಕಣಿʼ ಹೇಳುತ್ತಿದ್ದಾರೆ: ಜೆಡಿಎಸ್ ತರಾಟೆ
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಕಾಂಗ್ರೆಸ್‌ನಿಂದ ಟಿ.ಬಿ ಜಯಚಂದ್ರ ಕಣಕ್ಕೆ

“ಸಂಕಷ್ಟಕ್ಕೆ ಒಳಗಾದ ಕೊಡಗಿನ ಜನರಿಗೆ 'ಪೇಪರ್ ಸಿಂಹ'ನ ಕೊಡುಗೆ ಏನು? ನೆರೆಹಾವಳಿಯಿಂದ ಸಂತ್ರಸ್ತರಾದ ಜನ ಸೂರಿಲ್ಲದೆ, ಆಸರೆಗಾಗಿ ಕರೋನಾ ಸಂಕಷ್ಟದಲ್ಲಿ ಮೊರೆ ಇಡುತ್ತಿರುವಾಗ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಶಿರಾದಲ್ಲಿ ಮತಯಾಚನೆಗೆ ಮುಂದಾಗಿದ್ದೀರಿ,” ಎಂದು ಸಾರಾ ಮಹೇಶ್ ಹಾಗೂ ಗೌರಿಶಂಕರ್ ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com