ಕಾಂಗ್ರೆಸ್ ನಾಯಕರು ರೈತರ ಶಾಲ್‌ ಹಾಕಿಕೊಳ್ಳುವುದು ಒಂದು ಪ್ರಹಸನ- ನಟ ಚೇತನ್‌ ಟೀಕೆ

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಎಲ್ಲಾಪಕ್ಷಗಳು ಬಂಡವಾಳಶಾಹಿಗಳಿಗೆ ತಮ್ಮನ್ನು ತಾವು ಮಾರಿಕೊಂಡಿವೆ ಎಂದಿರುವ ಚೇತನ್‌, ಈ ಎಲ್ಲಾ ಪಕ್ಷಗಳು ಜನರಿಗೆ ವಂಚಿಸುತ್ತಿವೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ರೈತರ ಶಾಲ್‌ ಹಾಕಿಕೊಳ್ಳುವುದು ಒಂದು ಪ್ರಹಸನ- ನಟ ಚೇತನ್‌ ಟೀಕೆ

ಕಾಂಗ್ರೆಸ್ ನಾಯಕರು ಹಸಿರು ಶಾಲ್ ಹಾಕಿಕೊಂಡು ರೈತ ಕಾಯ್ದೆಯನ್ನುವಿರೋಧಿಸುತ್ತಿರುವುದು ಒಂದು ಪ್ರಹಸನ ಎಂದು ಕನ್ನಡ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಎಲ್ಲಾಪಕ್ಷಗಳು ಬಂಡವಾಳಶಾಹಿಗಳಿಗೆ ತಮ್ಮನ್ನು ತಾವು ಮಾರಿಕೊಂಡಿವೆ ಎಂದಿರುವ ಚೇತನ್‌, ಈ ಎಲ್ಲಾ ಪಕ್ಷಗಳು ಜನರಿಗೆ ವಂಚಿಸುತ್ತಿವೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂದಿರುವ ಕೃಷಿ ಸಂಬಂಧಿತ ಮಸೂದೆಗಳನ್ನು ದೇಶವ್ಯಾಪಿ ರೈತರು, ಹೋರಾಟಗಾರರು ವಿರೋಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ನಡುವೆ ಚೇತನ್‌ ಸೇರಿದಂತೆ ಹಲವು ರೈತ ನಾಯಕರನ್ನು, ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು.

#Privatisation #Congress ಕರ್ನಾಟಕ ಕಾಂಗ್ರೆಸ್ ನಾಯಕರು ಹಸಿರು ಶಾಲ್ ಹಾಕಿಕೊಂಡು ನಿನ್ನೆ ರೈತ ಕಾಯ್ದೆಯನ್ನು ವಿರೋಧಿಸಿ ನಾವು ಜನರ ಪರ...

Posted by CHETAN on Tuesday, September 29, 2020

ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ನಡೆಯನ್ನು ಟೀಕಿಸಿ ಬರೆದ ಚೇತನ್‌, 1991 ರಲ್ಲಿ ಪ್ರಧಾನಮಂತ್ರಿಯಾಗಿದ್ದ ನರಸಿಂಹರಾವ್‌ ಮತ್ತು ಹಣಕಾಸು ಸಚಿವರಾಗಿದ್ದ ಮನಮೋಹನ್‌ ಸಿಂಗ್‌ ಸಾರ್ವಜನಿಕ ಆಸ್ತಿಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಿ ಖಾಸಗೀಕರಣಕ್ಕೆ ಚಾಲನೆ ಕೊಟ್ಟಿರುವುದನ್ನು ಉಲ್ಲೇಖಿಸಿ, 90 ರದಶಕದಲ್ಲಿ ಮನಮೋಹನ್‌ ಸಿಂಗ್‌ ಅವರ ಜಾಗತೀಕರಣದ ನೀತಿಯನ್ನು ಅವರು ಟೀಕಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com