ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ

ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ತನ್ನ ಮನವಿಯನ್ನು ಸ್ವೀಕರಿಸಿದ್ದಾರೆ. ಹಾಗಾಗಿ ಶೀಘ್ರದಲ್ಲೇ NIA ವಿಭಾಗವೊಂದನ್ನು ಬೆಂಗಳೂರಿನಲ್ಲಿ ಸ್ಥಾಪನೆಯಾಗುವುದಾಗಿ ತೇಜಸ್ವಿ ಸೂರ್ಯ ಹೇಳಿದ್ದರು.
ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ

ಬೆಂಗಳೂರು ಭಯೋತ್ಪಾದಕರ ಕೇಂದ್ರ ಬಿಂದುವಾಗುತ್ತಿದೆ ಎಂದು ಹೇಳಿಕೆ ನೀಡಿ ಬೆಂಗಳೂರಿಗರ ಆಕ್ರೋಶಕ್ಕೆ ತುತ್ತಾಗಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಶೀಘ್ರದಲ್ಲೇ ಬೆಂಗಳೂರಿಗೆ NIA ವಿಭಾಗ ಬರಲಿದೆ ಎಂದು ಹೇಳಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಂತೆ ಕೇಂದ್ರ ಗೃಹಮಂತ್ರಿ ಅಮಿತ್‌ ಶಾರಿಗೆ ಮನವಿ ಮಾಡಿರುವುದಾಗಿ ತಿಳಿಸಿದ ತೇಜಸ್ವಿ, ಅಮಿತ್‌ ಶಾ ತನ್ನ ಮನವಿಯನ್ನು ಸ್ವೀಕರಿಸಿದ್ದಾರೆ. ಶೀಘ್ರದಲ್ಲೇ NIA ವಿಭಾಗವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸುವುದಾಗಿ ಹೇಳಿದ್ದರು.

ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ
ಸಂಸದ ತೇಜಸ್ವಿ ಸೂರ್ಯ ಕನ್ನಡ ವಿರೋಧಿ ಧೋರಣೆ ಮತ್ತೊಮ್ಮೆ ಬಯಲು!

ಕಳೆದ ಕೆಲವು ವರ್ಷಗಳಲ್ಲಿ, ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ನಗರದ ತನಿಖಾ ಸಂಸ್ಥೆ ಮಾಡಿದ ಅನೇಕ ಬಂಧನಗಳು ಮತ್ತು ಭಯೋತ್ಪಾದಕ ಸ್ಲೀಪರ್ ಸೆಲ್‌ಗಳ ಮೂಲಕ ಇದು ಸಾಬೀತಾಗಿದೆ ಎಂದ ತೇಜಸ್ವಿ, ಎಸ್‌ಪಿ ಹುದ್ದೆಯ ಅಧಿಕಾರಿಯೊಬ್ಬರು ಶೀಘ್ರದಲ್ಲಿಯೇ ಶಾಶ್ವತ ಸ್ಟೇಷನ್ ಹೌಸ್ ಸ್ಥಾಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದಿದ್ದರು.

ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ
ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದು: ತೇಜಸ್ವಿ ಸೂರ್ಯ

ಬೆಂಗಳೂರನ್ನು ಭಯೋತ್ಪಾದಕರ ಕೇಂದ್ರ ತಾಣ ಎಂದಿರುವ ತೇಜಸ್ವಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣಿಗರು ಟೀಕಿಸಿದ್ದರು. ಕುಮಾರಸ್ವಾಮಿ, ಡಿಕೆಶಿ, ಸೌಮ್ಯಾ ರೆಡ್ಡಿ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವು ರಾಜಕೀಯ ನಾಯಕರೂ ಈ ಹೇಳಿಕೆಯನ್ನು ಖಂಡಿಸಿದ್ದರು.

ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ
ಬೆಂಗಳೂರು ಕುರಿತ ಅವಹೇಳನಕಾರಿ ಹೇಳಿಕೆ: ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ

ಇದೀಗ ಎನ್‌ಐಎ ಹೊಸ ಮೂರು ಘಟಕಗಳನ್ನು ಮಂಜೂರು ಮಾಡಿದ್ದು, ಸಂಸ್ಥೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕದ ಅಥವಾ ಬೆಂಗಳೂರಿನ ಹೆಸರು ಇಲ್ಲ. ಅಂದರೆ ಬೆಂಗಳೂರಿನಲ್ಲಿ ಎನ್‌ಐಎ ಕೇಂದ್ರದ ಆರಂಭಕ್ಕೆ ಯಾವುದೇ ಸ್ಪಷ್ಟ ಸೂಚನೆ ದೊರೆತಿಲ್ಲ.

ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ
ಮುಳುವಾದ ತೇಜಸ್ವಿ ಸೂರ್ಯ ʼಮಹಿಳಾ ವಿರೋಧಿʼ ಟ್ವೀಟ್;‌ ಟ್ವಿಟ್ಟರ್‌ನಿಂದಲೇ ಮುಕ್ತಿ ಕೊಡಿಸಿದ ಕೇಂದ್ರ ಸರಕಾರ

ಇಲ್ಲಿ ತೇಜಸ್ವಿ ಸೂರ್ಯರ ಹೇಳಿಕೆಯನ್ನು ಪ್ರಶ್ನಿಸುವಂತಹ ಅಂಶವನ್ನು ಎನ್‌ಐಎಯೇ ಒದಗಿಸಿದೆ. ಒಂದು ವೇಳೆ ಬೆಂಗಳೂರು ಭಯೋತ್ಪಾದಕರ ಕೇಂದ್ರಬಿಂದುವಾಗುತ್ತಿದೆ ಎಂಬ ತೇಜಸ್ವಿ ಹೇಳಿಕೆಯಲ್ಲಿ ಹುರುಳಿದ್ದಿದ್ದೇ ಆಗಿದ್ದರೆ, ಎನ್‌ಐಎ ಬೆಂಗಳೂರಿನಲ್ಲಿ ತನ್ನ ವಿಭಾಗವನ್ನು ತೆರೆಯಲು ಆದ್ಯತೆ ನೀಡಬೇಕಿತ್ತು. ಆದರೆ, ಈಗಾಗಲೇ ದೇಶದಾದ್ಯಂತ ಒಂಭತ್ತು ವಿಭಾಗಗಳನ್ನು ಹೊಂದಿರುವ ಎನ್‌ಐಎ ಹೊಸ ಮೂರು ವಿಭಾಗಗಳನ್ನು ಚೆನ್ನೈ, ಇಂಫಾಲ ಮತ್ತು ರಾಂಚಿಯಲ್ಲಿ ತೆರೆಯಲು ಉದ್ದೇಶಿಸಿದೆ. ಅಂದರೆ, ಬೆಂಗಳೂರಿನಲ್ಲಿ ಎನ್‌ಐಎ ಕೇಂದ್ರ ತರಾತುರಿಯಲ್ಲಿ ತೆರೆಯಬೇಕಾದ ಅಗತ್ಯತೆ ಎನ್‌ಐಎಗೆ ಕಂಡುಬಂದಿಲ್ಲ. ಹೀಗಿರುವಾಗ ಬೆಂಗಳೂರನ್ನು ಏಕಾಏಕಿ ಭಯೋತ್ಪಾದಕರ ತಾಣ ಎಂಬಂತೆ ಬಿಂಬಿಸಿದ್ದು ಚೊಚ್ಚಲ ಬಾರಿಗೆ ಸಂಸದರಾಗಿರುವ ತೇಜಸ್ವಿಯವರ ಅಪ್ರಬುದ್ಧ ಅಥವಾ ಹಪಾಹಪಿಯ ಹೇಳಿಕೆಯಲ್ಲದೆ ಮತ್ತೇನು?

ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ
ಭಾರತದ ಅಂತರಾಷ್ಟ್ರೀಯ ಸಂಬಂಧಕ್ಕೆ ಹುಳಿ ಹಿಂಡಿದ ತೇಜಸ್ವಿ ಸೂರ್ಯ ʼಮಹಿಳಾ ವಿರೋಧಿʼ ಟ್ವೀಟ್!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com