ರಾಜ್ಯದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಿನೆರಳು

ತನಿಖಾ ವರದಿಯನ್ನು ಪ್ರಕಟಿಸಿದ ಕಾರಣಕ್ಕೆ ಟಿವಿ ಚಾನೆಲ್‌ ಅನ್ನೇ ಮುಚ್ಚಿಸುವಂತಹ ಹೇಡಿತನದ ಕೆಲಸವನ್ನು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಟೀಕೆಗಳ ಮಹಾಪೂರವೇ ಹರಿದುಬಂದಿದೆ.
ರಾಜ್ಯದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಿನೆರಳು

ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಿರಂತರವಾಗಿ ಸಾಗುತ್ತಿದೆ. ಸರ್ಕಾರದ ಲೋಪದೋಷಗಳನ್ನು ಮತ್ತು ಹಗರಣಗಳನ್ನು ಬಹಿರಂಗಪಡಿಸುವ ಮಾಧ್ಯಮಗಳ ಪತ್ರಕರ್ತರ ಮೇಲೆ ಮೊಕದ್ದಮೆ ದಾಖಲಿಸುವುದು, ಅವರ ಮೇಲೆ ಹಲ್ಲೆ ನಡೆಸುವುದು ಹಾಗೂ ಮಾಧ್ಯಮಗಳ ವಿರುದ್ದ ದಮನಕಾರಿ ನೀತಿಯನ್ನು ಅನುಸರಿಸಿ ಅವುಗಳನ್ನು ಮುಚ್ಚಿಹಾಕುವಂತಹ ಕೆಲಸ ಆಗಿಂದಾಗ್ಗೆ ನಡೆಯುತ್ತಲೇ ಇದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಪರಿಸ್ಥಿತಿ ಉತ್ತರ ಪ್ರದೇಶದಲ್ಲಿ ಸಾಮಾನ್ಯವೆನ್ನುಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಆದರೆ, ಮೊದಲ ಬಾರಿಗೆ ಕರ್ನಾಟಕದಲ್ಲಿಯೂ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಹಗರಣವೊಂದರ ಕುರಿತು ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪವರ್‌ ಟಿವಿಯ ಪ್ರಸಾರವನ್ನೇ ಸರ್ಕಾರ ನಿಲ್ಲಿಸಿ ದಮನ ನೀತಿ ಮೆರೆದಿದೆ. ಕಳೆದ ಸುಮಾರು ಎರಡು ವಾರಗಳಿಂದ ದಾಖಲೆಗಳ ಸಮೇತ ಪವರ್‌ ಟಿವಿಯು ತನಿಖಾ ವರದಿಯನ್ನು ಪ್ರಕಟಿಸುತ್ತಿತ್ತು.

ರಾಜ್ಯದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಿನೆರಳು
ಕರೋನಾ ಸಂಧಿಗ್ಧತೆಯಲ್ಲೂ ಸ್ವತಂತ್ರ ಮಾಧ್ಯಮಗಳ ದಮನಕ್ಕೆ ಸರಕಾರದ ಆತುರ!

ಸೋಮವಾರ ಏಕಾಏಕಿ, ಸಿಸಿಬಿ ಪೊಲೀಸರು ಮಾಧ್ಯಮ ಸಂಸ್ಥೆಯ ಕಚೇರಿಗೆ ದಾಳಿ ನಡೆಸಿ ಅಲ್ಲಿದ್ದ ಸರ್ವರ್‌ ಸಿಸ್ಟಮ್‌ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿರುವ ಸಂಸ್ಥೆಯ ಸಂಪಾದಕರು, “ಇವತ್ತು ನಮ್ಮ ಚಾನೆಲನ್ನು ಮುಗಿಸಿದ್ದಾರೆ. ಮುಂದೊಂದು ದಿನ ಬೇರೆ ಚಾನೆಲ್‌ಗೂ ಇಂತಹ ಪರಿಸ್ಥಿತಿ ಬರಬಹುದು. ಪತ್ರಕರ್ತರು ಒಗ್ಗಟ್ಟಾಗುವ ಸಮಯ ಇದು. ರಾಜ್ಯದಲ್ಲಿ ಬೇಕಾದಷ್ಟು ಚಾನೆಲ್ ಬೇರೆ ಬೇರೆ ಕಾರಣಗಳಿಗೆ ಮುಚ್ಚಿಹೋಗಿದೆ. ಆದರೆ ಇಂತಹ ಕಾರಣಕ್ಕೆ ಯಾವ ಚಾನೆಲ್‌ಗಳು ಕೂಡಾ ಮುಚ್ಚಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಿನೆರಳು
ಫೇಕ್ ನ್ಯೂಸ್ ಮಾಧ್ಯಮಕ್ಕೆ ಮನ್ನಣೆ, ನೈಜ ಪತ್ರಕರ್ತರ ಮೇಲೆ FIR!

ತನಿಖಾ ವರದಿಯನ್ನು ಪ್ರಕಟಿಸಿದ ಕಾರಣಕ್ಕೆ ಟಿವಿ ಚಾನೆಲ್‌ ಅನ್ನೇ ಮುಚ್ಚಿಸುವಂತಹ ಹೇಡಿತನದ ಕೆಲಸವನ್ನು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಟೀಕೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಸುದ್ದಿ ವಾಹಿನಿಯನ್ನು ಬಲವಂತವಾಗಿ ಮುಚ್ಚಿಸುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಮಾಡಿರುವ ಧಕ್ಕೆ ಎಂಬ ಪ್ರಬಲವಾದ ಕೂಗು ಕೇಳಿ ಬರುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳೇ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ.

ರಾಜ್ಯದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಿನೆರಳು
ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯ ಭದ್ರತಾ ಪಡೆಗಳ ಅಧೀನದಲ್ಲಿದೆಯೇ?       

ಕರ್ನಾಟಕ ರಾಜ್ಯದ ಮಟ್ಟಿಗೆ ಈ ರೀತಿಯ ಘಟನೆ ನಿಜಕ್ಕೂ ಆಶ್ಚರ್ಯಕರವಾದಂತದ್ದು. ಈ ಹಿಂದೆಯೂ ರಾಜ್ಯದ ಮಾಧ್ಯಮಗಳು ತನಿಖಾ ವರದಿಯನ್ನು ಪ್ರಕಟಿಸಿದ್ದವು. ಇಂತಹ ವರದಿಗಳು ರಾಜ್ಯದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲೂ ಕಾರಣವಾಗಿದ್ದವು. ಆದರೆ, ತನಿಖಾ ವರದಿಯನ್ನು ಪ್ರಕಟ ಮಾಡಿದ ಕಾರಣಕ್ಕಾಗಿ ಒಂದು ಸುದ್ದಿ ವಾಹಿನಿಯ ಪ್ರಸಾರವನ್ನು ತಡೆ ಹಿಡಿಯುವುದು ನಿಜಕ್ಕೂ ಖಂಡನೀಯ.

ದೇಶದ ಮಟ್ಟಿಗೆ ನೋಡುವುದಾದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಕಟಿಸಿದ ವರದಿಗಾಗಿ ʼದ ವೈರ್‌ʼ ಸಂಪಾದಕರಾದ ಸಿದ್ದಾರ್ಥ್‌ ವರದರಾಜನ್‌, scroll.inನ ವರದಿಗಾರ್ತಿಯಾದ ಸುಪ್ರಿಯಾ ಶರ್ಮಾ ಅವರ ವಿರುದ್ದ ಉತ್ತರ ಪ್ರದೇಶದಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ರೀತಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಖಂಡಿಸಿ ದೇಶದ ಪ್ರಮುಖ ಪತ್ರಕರ್ತರ ಹಾಗೂ ಸಂಪಾದಕರ ಸಂಘಟನೆಗಳು ಖಂಡಿಸಿದ್ದವು.

ರಾಜ್ಯದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಿನೆರಳು
ಸುದರ್ಶನ್‌ ಟಿವಿ ʼUPSC ಜಿಹಾದ್ʼ ಕಾರ್ಯಕ್ರಮ: ಐಪಿಎಸ್‌ ಅಸೋಷಿಯೇಷನ್ ಖಂಡನೆ

ಕೆಲವು ದಿನಗಳ ಹಿಂದೆ, ದೆಹಲಿ ಮೂಲದ ಸುದರ್ಶನ್‌ ಟಿವಿ ಎನ್ನುವ ಚಾನೆಲ್‌ವೊಂದು ʼಯುಪಿಎಸ್‌ಸಿ ಜಿಹಾದ್‌ʼ ಎಂಬ ಕೋಮು ಪ್ರಚೋದಿತ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದಾಗ, ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದ ಕೇಂದ್ರ ಸರ್ಕಾರವು ಈ ಕಾರ್ಯಕ್ರಮವನ್ನು ನಡೆಸಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿತ್ತು. ನಂತರ ಸುಪ್ರಿಂ ಕೋರ್ಟ್‌ ಈ ಕಾರ್ಯಕ್ರಮದ ಪ್ರಸಾರಕ್ಕೆ ತಡೆ ನೀಡಿತ್ತು. ಕೋಮು ಪ್ರಚೋದನೆ ನೀಡುವಂತಹ ಹಾಗೂ ಒಂದು ಧರ್ಮವನ್ನು ಅವಹೇಳನ ಮಾಡುವಂತಹ ಕಾರ್ಯಕ್ರಮಗಳನ್ನು ನಡೆಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇರಲಿಲ್ಲ.

ರಾಜ್ಯದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕರಿನೆರಳು
ಲಾಕ್‌ಡೌನ್‌ ವರದಿಗಾರಿಗೆ: ಮತ್ತೋರ್ವ ಪತ್ರಕರ್ತೆಯ ಮೇಲೆ ಎಫ್‌ಐಆರ್‌

ಆದರೆ, ಒಂದು ರಾಜ್ಯದ ಮುಖ್ಯಮಂತ್ರಿ ಹಗರಣದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂಬ ತನಿಖಾ ವರದಿಯನ್ನು ಪ್ರಕಟಿಸಿದ ಸುದ್ದಿ ವಾಹಿನಿಯ ಪ್ರಸಾರವನ್ನು ಮಾತ್ರ ತಡೆಹಿಡಿಯಲಾಗುತ್ತದೆ ಎಂದರೆ ಅದು ವಿಪರ್ಯಾಸವಲ್ಲದೇ ಇನ್ನೇನು?

ಕರ್ನಾಟಕದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪರಿಪಾಠ ಆರಂಭವಾದದ್ದು ನಿಜಕ್ಕೂ ಆತಂಕಕ್ಕೆ ಕಾರಣವಾಗಿರುವ ವಿಚಾರ. ಇಂದು ಕೇವಲ ಒಂದು ಸುದ್ದಿವಾಹಿನಿ ಮುಚ್ಚಲ್ಪಟ್ಟರೆ, ನಾಳೆ ಇನ್ನೊಂದು ವಾಹಿನಿಗೆ ಅಥವಾ ಪತ್ರಿಕೆಗೆ ಇದೇ ಪರಿಸ್ಥಿತಿ ಬರಲಾರದು ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಮಾಧ್ಯಮಗಳ ವಿರುದ್ದ ಸರ್ಕಾರ ದಮನಕಾರಿ ನೀತಿ ಅನುಸರಿಸುವುದು ಸಾಂವಿಧಾನಿಕ ಆಶಯಗಳಿಗೆ ವಿರುದ್ದವಾದದ್ದು. ರಾಜ್ಯ ಸರ್ಕಾರವು ಕೂಡಾ ತಕ್ಷಣವೇ ತನ್ನ ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟು, ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಕಾರ್ಯ ಮಾಡಬೇಕಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com