ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಚಿವ ಜಗದೀಶ್‌ ಶೆಟ್ಟರ್‌

ಪ್ರತಿಷ್ಟಿತ ACCF ಯೋಜನೆ ಬೆಂಗಳೂರಿನ ಕೈತಪ್ಪಿದ್ದರ ಕುರಿತು ಪ್ರತಿಧ್ವನಿ ಈ ಹಿಂದೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದೇ ಯೋಜನೆಯ ಕುರಿತುಆಗಿ ಸದನದಲ್ಲಿ ಕೇಳಲಾದ ಪ್ರಶ್ನೆಗೆ ಜಗದೀಶ್‌ ಶೆಟ್ಟರ್‌ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಹಲವಾರು ...
ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಚಿವ ಜಗದೀಶ್‌ ಶೆಟ್ಟರ್‌

KIADB ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜಕಾರಣಿಗಳ ಮೊಂಡುತನದಿಂದ ಬೆಂಗಳೂರಿನ ಕೈತಪ್ಪಿದ್ದ ACCF (Aerospace Common Finishing Facility) ಯೋಜನೆಯ ಕುರಿತು ತನಿಖೆ ನಡೆಸುವುದಾಗಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಸದನದಲ್ಲಿ ಹೇಳಿದ್ದಾರೆ. ಇದರೊಂದಿಗೆ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಲಿಖಿತವಾಗಿ ನೀಡುರುವ ಉತ್ತರದಲ್ಲಿ ತಪ್ಪು ಮಾಹಿತಿಯನ್ನು ನೀಡಿರುವ ಅಪವಾದಕ್ಕೆ ಶೆಟ್ಟರ್‌ ಗುರಿಯಾಗಿದ್ದಾರೆ. ಪ್ರತಿಷ್ಟಿತ ACCF ಯೋಜನೆ ಬೆಂಗಳೂರಿನ ಕೈತಪ್ಪಿದ್ದರ ಕುರಿತು ʼಪ್ರತಿಧ್ವನಿʼ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಚಿವ ಜಗದೀಶ್‌ ಶೆಟ್ಟರ್‌
KIADB ಅಧಿಕಾರಿಗಳ ದಿವ್ಯ ನಿರ್ಲ್ಯಕ್ಷ; ಬೆಂಗಳೂರಿನ ಕೈ ತಪ್ಪಿದ ಮಹತ್ವದ ಯೋಜನೆ

ಸೆಪ್ಟೆಂಬರ್‌ 22ರಂದು ಮರಿತಿಬ್ಬೇಗೌಡ ಅವರು ಎಸಿಸಿಎಫ್‌ ಕುರಿತು ಪ್ರಶ್ನೆ ಕೇಳಿದ್ದರು. ಕೇಂದ್ರ ಸರ್ಕಾರ ಈ ಯೋಜನೆಗೆ ನೀಡಿದ ಹಣವನ್ನು ಹಿಂಪಡೆಯಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಜಗದೀಶ್‌ ಶೆಟ್ಟರ್‌ ಅವರು, 2017 ಸೆಪ್ಟೆಂಬರ್‌ 22ರಂದು ನಡೆದ ಎಸಿಸಿಎಫ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ, ತಾಂತ್ರಿಕ ಸಮಿತಿಯನ್ನು ಪುನರ್‌ ರಚಿಸಿ, ಸಮಗ್ರ ಯೋಜನೆಯನ್ನು ಪುನರ್‌ ಪರಿಶೀಲಿಸುವ ವರೆಗೂ, ಕಾಮಾಗಾರಿಗಳನ್ನು ಕೂಡಲೇ ನಿಲ್ಲಿಸುವಂತೆ ನಿರ್ದೇಶಿಸಲಾಗಿತ್ತು ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಆರ್‌ ವಿ ದೇಶ್‌ಪಾಂಡೆ ಅವರು ಕೈಗಾರಿಕಾ ಮಂತ್ರಿಯಾಗಿದ್ದಾಗ, 2018ರ ಫೆಬ್ರುವರಿಯಲ್ಲಿ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಸೆಪ್ಟೆಂಬರ್‌ 22, 2017ರಂದು ನಡೆದ ಸಭೆಯ ನಂತರ ಇನ್ನೊಂದು ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಫೆಬ್ರಯವರಿಯಲ್ಲಿ ಭೂಮಿ ಪೂಜೆ ನೆರವೇರಿಸುವ ಕುರಿತು ತೀರ್ಮಾನವನ್ನು ಕೂಡಾ ಕೈಗೊಳ್ಳಲಾಗಿತ್ತು. ಈ ವಿಚಾರವನ್ನು ಜಗದೀಶ್‌ ಶೆಟ್ಟರ್‌ ಅವರು ತಮ್ಮ ಉತ್ತರದಲ್ಲಿ ದಾಖಲಿಸಲಿಲ್ಲ.

2018ರ ಫ್ರಬ್ರುವರಿಯಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಆರ್‌ ವಿ ದೇಶಪಾಂಡೆ ಪಾಲ್ಗೊಂಡಿದ್ದರು
2018ರ ಫ್ರಬ್ರುವರಿಯಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಆರ್‌ ವಿ ದೇಶಪಾಂಡೆ ಪಾಲ್ಗೊಂಡಿದ್ದರು

ಇದರೊಂದಿಗೆ, ಈ ಯೋಜನೆಯ ಹಣಕಾಸಿನ ಸಂಪೂರ್ಣ ವಿವರಗಳ ಕುರಿತು ಕೂಡಾ ಮರಿತಿಬ್ಬೇಗೌಡ ಅವರು ಮಾಹಿತಿಯನ್ನು ಕೇಳಿದ್ದರು. ಇಲ್ಲಿಯೂ ಕೂಡಾ ತಪ್ಪು ಲೆಕ್ಕವನ್ನು ನೀಡಿರುವ ಮಧ್ಯಮ ಮತ್ತು ಬೃಹತ್‌ ಕೈಗಾರಿಕಾ ಮಂತ್ರಿ ಅವರು ಕೇಂದ್ರದ ಅನುದಾನ ಹಾಗೂ ರಾಜ್ಯ ಸರ್ಕಾರ ನೀಡಿದ ಹಣದ ವಿವರವನ್ನು ಸಂಪೂರ್ಣವಾಗಿ ದಾಖಲಿಸಲಿಲ್ಲ.

Reply - 26(242) - MarithibbeGowda - Starred.pdf
download

ರಾಜ್ಯ ಸರ್ಕಾರವು ಈ ಯೋಜನೆಯ ಅನುಷ್ಟಾನಕ್ಕಾಗಿ ರೂ. 20 ಕೋಟಿಗಳಷ್ಟು ಮೊತ್ತವನ್ನು ನೀಡಿತ್ತು. ಕೇಂದ್ರ ಸರ್ಕಾರ ನೀಡಿದ್ದ ರೂ. 12.80 ಕೋಟಿ ಅನುದಾನಕ್ಕೆ ರೂ. 2.74 ಕೋಟಿಯಷ್ಟು ಬಡ್ಡಿಯನ್ನು ಸೇರಿಸಿ ಒಟ್ಟು ರೂ. 15.55 ಕೋಟಿಯನ್ನು ಕೇಂದ್ರಕ್ಕೆ ವಾಪಾಸ್‌ ನೀಡಲಾಗಿತ್ತು.

KIADBಯಿಂದ ಕೇಂದ್ರ ಸರ್ಕಾರಕ್ಕೆ ವಾಪಾಸ್‌ ನೀಡಲಾದ ಹಣದ ವಿವರ
KIADBಯಿಂದ ಕೇಂದ್ರ ಸರ್ಕಾರಕ್ಕೆ ವಾಪಾಸ್‌ ನೀಡಲಾದ ಹಣದ ವಿವರ

KIADB ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಸುಮಾರು ರೂ. 5 ಕೋಟಿಗಳಷ್ಟು ASIDE Fund ಕೂಡಾ ಈ ಯೋಜನೆಗಾಗಿ ಕೇಂದ್ರ ಸರ್ಕಾರ ನೀಡಿತ್ತು. ಈ ನಿಧಿಯ ಕುರಿತಾಗಿ ಕೂಡಾ ಸದನದಲ್ಲಿ ನೀಡಿದ ಉತ್ತರದಲ್ಲಿ ದಾಖಲಿಸಲಾಗಿಲ್ಲ.

ಇನ್ನು, ಈ ಯೋಜನೆ ಹಿಂದಿನ ಸರ್ಕಾರದ ಸಮಯದಲ್ಲಿ ಆಗಿದ್ದರಿಂದ ನಮ್ಮದೇನೂ ತಪ್ಪಿಲ್ಲ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. ಈ ಯೋಜನೆ ಹಿಂಪಡೆಯುವಂತಾಗಲು ಕಾರಣರಾದ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಕುರಿತು ಸದನದಲ್ಲಿ ಹೇಳಿದ್ದಾರೆ.

ಏನಿದು ACCF ಯೋಜನೆ?

ವಿಮಾನಯಾನಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳನ್ನು ಒಂದೇ ಸೂರಿನಡಿಯಲ್ಲಿ ತರುವಂತಹ ಯೋಜನೆ ಇದು. ವಿಮಾನದ ಬಿಡಿ ಭಾಗಗಳ ತಯಾರಿಕೆಯಿಂದ ಹಿಡಿದು ಆ ಭಾಗಗಳ ವಿಶೇಷ ಸಂಸ್ಕರಣೆ ಮಾಡುವವರೆಗೂ ಎಲ್ಲಾ ಕೆಲಸಗಳನ್ನು ಬೆಂಗಳೂರಿನ ಏರೋಸ್ಪೇಸ್‌ ಪಾರ್ಕ್‌ನಲ್ಲಿಯೇ ಮಾಡಬೇಕೆಂಬ ಮಹತ್ವದ ಯೋಜನೆ ACFF. ಈ ಯೋಜನೆಯಲ್ಲಿ ಪಾಲ್ಗೊಳ್ಳಲು 18 ಅಕ್ಟೋಬರ್‌ 2016ರಲ್ಲಿ ಟೆಂಡರ್‌ ಕೂಡಾ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿಗಳಲ್ಲಿ ನಾಲ್ಕು ಕಂಪನಿಗಳನ್ನು ಆಯ್ಕೆ ಮಾಡಿ ಅವುಗಳಿಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಕೂಡಾ ನೀಡುವ ಭರವಸೆಯನ್ನು KIADB ನೀಡಿತ್ತು.

ಈ ಯೋಜನೆಗೆ ತಗಲುವ ವೆಚ್ಚ 90.50 ಕೋಟಿ. ಈ ಯೋಜನೆಗೆ ಕೇಂದ್ರ ಸರ್ಕಾರವು 42.69 ಕೋಟಿ ಹಾಗೂ ರಾಜ್ಯ ಸರ್ಕಾರವು 47.81 ಕೋಟಿ ನೀಡುವುದಾಗಿ ಘೋಷಿಸಲಾಗಿತ್ತು. ಕೇಂದ್ರ ಸರ್ಕಾರವು ಮೊದಲ ಹಂತದ ಹಣವನ್ನು ಬಿಡುಗಡೆ ಮಾಡಿತ್ತು ಕೂಡ. ಇದರೊಂದಿಗೆ ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿತ್ತು. ಈ ಯೋಜನೆಯು ಸರಾಗವಾಗಿ ಸಾಗಲು ಬೇಕಾದ ಅನುದಾನವು ಅದಾಗಲೇ KIADBಯ ಬೊಕ್ಕಸಕ್ಕೆ ತಲುಪಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com