ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಎಸಿಪಿ ಅಮಾನತು

ಎಸಿಪಿ ಮುದವಿ ಹಾಗೂ ಹೆಡ್ ಕಾನ್ಸ್ಟೆಬಲ್ ಮಲ್ಲಿಕಾರ್ಜುನ್ ಅವರು ಬಂಧಿತ ಆರೋಪಿ ಖನ್ನಾ ತನ್ನ ಸಹಾಯಕರೊಂದಿಗೆ ಮಾತನಾಡಲು ಅನೇಕ ಬಾರಿ ಮೊಬೈಲ್ ಫೋನ್ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.
ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಎಸಿಪಿ ಅಮಾನತು

ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ನಡೆಯುತ್ತಿರುವ ತನಿಖೆಯ ಕುರಿತಾದ ಗೌಪ್ಯ ಮಾಹಿತಿ ಸೋರಿಕೆಯಾಗಿದೆ ಎಂದು ಆರೋಪಿಸಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತರನ್ನು ರಾಜ್ಯ ಸರ್ಕಾರ ಬುಧವಾರ ಅಮಾನತುಗೊಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಾಹಿತಿ ಸೋರಿಕೆಯಾಗುತ್ತಿದೆ ಎಂದು ತಿಳಿದ ನಂತರ ಅಧಿಕಾರಿಗಳು ಆಂತರಿಕ ತನಿಖೆಗೆ ಚಾಲನೆ ನೀಡಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. "ವಿಚಾರಣೆಯ ಸಮಯದಲ್ಲಿ, ಅವರು ಆರೋಪಿಗಳ ಕೆಲವು ಸಹಚರರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಮಾಹಿತಿಯನ್ನು ಸೋರಿಕೆ ಮಾಡುತ್ತಿರುವುದು ಕಂಡುಬಂದಿದೆ" ಎಂದು ಅವರು ತಿಳಿಸಿದ್ದಾರೆ. “ಎಸಿಪಿ ಮುದವಿ ಅವರನ್ನು ಅಮಾನತುಗೊಳಿಸಲಾಗಿದೆ. ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಪ್ರಮುಖ ತಂಡದ ಭಾಗವಾಗಿರಲಿಲ್ಲ ” ಎಂಬುವುದನ್ನು ಸಂದೀಪ್‌ ಪಾಟೀಲ್ ಉಲ್ಲೇಖಿಸಿದ್ದಾರೆ.

ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಎಸಿಪಿ ಅಮಾನತು
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದ ಸಂಪೂರ್ಣ ಡೀಟೈಲ್ಸ್

ಹೆಡ್ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ್ ಮತ್ತು ಮುದವಿ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟೀಲ್‌ ಅವರು ಮಲ್ಲಿಕಾರ್ಜುನ್ ಅವರನ್ನು ಅಮಾನತುಗೊಳಿಸಿ ವಿವರವಾದ ವರದಿಯನ್ನು ಕಮಿಷನರ್‌ಗೆ ನೀಡಿದ್ದಾರೆ. ತನಿಖೆಯ ಭಾಗವಾಗಿರದ ಅಧಿಕಾರಿ ಮತ್ತು ಕಾನ್‌ಸ್ಟೆಬಲ್ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, ದಾಳಿಗಳು, ಸುಳಿವುಗಳು ಮತ್ತು ಶಂಕಿತರ ಹೆಸರುಗಳ ಬಗ್ಗೆ ವಿರೇನ್ ಖನ್ನಾ ಅವರ ಸಹಚರರಿಗೆ ಮಾಹಿತಿ ಸೋರಿಕೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಎಸಿಪಿ ಅಮಾನತು
ವೈಫಲ್ಯ ಮುಚ್ಚಿಹಾಕಲು ಡ್ರಗ್ಸ್ ಪ್ರಕರಣದ ಮೊರೆ ಹೋಗಿದೆಯೇ ರಾಜ್ಯ ಸರ್ಕಾರ?

ಆರೋಪಿ ಖನ್ನಾ ತನ್ನ ಸಹಾಯಕರೊಂದಿಗೆ ಮಾತನಾಡಲು ಅನೇಕ ಬಾರಿ ಮೊಬೈಲ್ ಫೋನ್ ಸಹ ಹಸ್ತಾಂತರಿಸಿದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕರೆ ಮಾಡಲು ಬಳಸಿದ ಫೋನ್ ಮತ್ತು ಕರೆ ವಿವರಗಳನ್ನು ಪರಿಶೀಲಿಸಲು ಆರೋಪಿತ ಅಧಿಕಾರಿಯ ಫೋನ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಯೊಂದಿಗೆ ಯಾರು ಸಂಪರ್ಕದಲ್ಲಿದ್ದಾರೆ ಎಂದು ಕಂಡುಹಿಡಿಯಲು ಅಧಿಕಾರಿಗಳು ಕಾಲ್ ರೆಕಾರ್ಡ್ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com