ಭಾರತದ ʼಸ್ಕಾಟ್ಲೆಂಡ್ʼ ಕೊಡಗಿಗೂ ಹಬ್ಬಿರುವ ಮಾದಕ ವಸ್ತು ಜಾಲ

ಈ ಡ್ರಗ್ಸ್ ಜಾಲದ ಬಂಧನದಿಂದಾಗಿ ಶಾಂತಿಪ್ರಿಯ ಜಿಲ್ಲೆಯಲ್ಲೂ ಮಾದಕ ವಸ್ತುಗಳ ಜಾಲ ತನ್ನ ಕಬಂಧ ಬಾಹುವನ್ನು ಹರಡಿರುವುದು ಸ್ಪಷ್ಟವಾಗಿದೆ. ಕೊಡಗಿನಲ್ಲಿ ಇಂತಹ ಜಾಲ ಇನ್ನೂ ಕಾರ್ಯಾಚರಿಸುತ್ತಿದೆ ಎಂದು ಹೇಳಲಾಗಿದೆ.
ಭಾರತದ ʼಸ್ಕಾಟ್ಲೆಂಡ್ʼ ಕೊಡಗಿಗೂ ಹಬ್ಬಿರುವ ಮಾದಕ ವಸ್ತು ಜಾಲ

ರಾಜ್ಯದ ವಿಶಿಷ್ಟ ಸಂಸ್ಕೃತಿಯ ಪುಟ್ಟ ಜಿಲ್ಲೆ ಕೊಡಗು ಜಿಲ್ಲೆ ತನ್ನ ಪ್ರಕೃತಿ ಸೌಂದರ್ಯ ಮತ್ತು ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ ಕೊಡಗು ಪ್ರವಾಸಿಗರ ದಟ್ಟಣೆಗೂ ಕಾರಣವಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕೊಡಗಿನಲ್ಲಿ ಎರಡು ಮೂರು ದಶಕಗಳ ಹಿಂದೆ ಕಣ್ಣು ಹಾಯಿಸಿದಷ್ಟೂ ಕಾಣುತಿದ್ದ ಹಚ್ಚ ಹಸಿರಿನ ಪ್ರಕೃತಿಯ ನೋಟ ಈಗ ಕಂಡು ಬರುವುದಿಲ್ಲ. ಏಕೆಂದರೆ ಆ ದೂರದ ಬೆಟ್ಟ ಗುಡ್ಡಗಳಲ್ಲಿ ಹೋಂ ಸ್ಟೇ ಗಳು ರೆಸಾರ್ಟ್ ತಲೆ ಎತ್ತಿವೆ. ಕೊಡಗಿನಲ್ಲಿ ಇಂದು ಅಂದಾಜು ಎರಡು ಸಾವಿರಕ್ಕೂ ಹೆಚ್ಚು ಹೋಂ ಸ್ಟೇ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅಂದಾಜಿಸಲಾಗಿದೆ.

ಆದರೆ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿರುವುದು 800 ರಷ್ಟು ಮಾತ್ರ. ಈ ಅನಧಿಕೃತ ಹೋಂ ಸ್ಟೇ ಗಳಲ್ಲಿನ ಬಹು ದೊಡ್ಡ ಸಮಸ್ಯೆ ಎಂದರೆ ಇವು ಸರ್ಕಾರದ ಪರಿಮಿತಿಯಲ್ಲಿ ಇಲ್ಲವಾದ್ದರಿಂದ ಇಲ್ಲಿಗೆ ಬರುವ ಹೋಗುವವರ ಯಾವುದೇ ದಾಖಲಾತಿ ಲಭ್ಯವಿರುವುದಿಲ್ಲ. ಎಲ್ಲ ಹೋಂ ಸ್ಟೇ ಗಳೂ ಕಡ್ಡಯವಾಗಿ ಸಿಸಿ ಕ್ಯಾಮೆರ ಅಳವಡಿಸಬೇಕಾಗಿದ್ದರೆ ಈ ಹೋಂ ಸ್ಟೇ ಗಳಲ್ಲಿ ಸಿಸಿ ಕ್ಯಾಮೆರಾ ಕೂಡ ಇರುವುದಿಲ್ಲ. ಈ ಹೋಂ ಸ್ಟೇ ಗಳು ಬಹುತೇಕ ಬಾಡಿಗೆಗೆ ಪಡೆದು ನಡೆಸುತ್ತಿರುವಂತಹುದ್ದಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೋಂ ಸ್ಟೇ ನಿಯಮಾವಳಿ ಪ್ರಕಾರ ಹೋಂ ಸ್ಟೇ ಗಳನ್ನು ಆಯಾ ಜಾಗದ ಮಾಲಿಕರೇ ನಡೆಸಬೇಕು ಮತ್ತು ಮಾಲೀಕರು ಅಲ್ಲಿಯೇ ವಾಸ ಮಾಡುತ್ತಿರಬೇಕು. ಆದರೆ ಅನಧಿಕೃತ ಹೋಂ ಸ್ಟೇ ಗಳಲ್ಲಿ ಇದೆಲ್ಲವನ್ನೂ ಗಾಳಿಗೆ ತೂರಲಾಗುತ್ತಿದೆ. ಕಳೆದ ವರ್ಷ ದಕ್ಷಿಣ ಕೊಡಗಿನ ನಲ್ಲೂರು ಎಂಬಲ್ಲಿ ಹೋಂ ಸ್ಟೇ ಯೊಂದರಲ್ಲಿ ನಡೆದಿದ್ದ ರೇವ್ ಪಾರ್ಟಿಗೆ ಹೈದರಾಬಾದ್, ಬೆಂಗಳೂರು, ಚೆನ್ನೈ ಊರುಗಳಿಂದಲೂ ವ್ಯಸನಿಗಳು ಭಾಗವಹಿಸಿದ್ದರು. ಮಾಹಿತಿ ಪಡೆದ ಅಂದಿನ ಖಡಕ್ ಎಸ್ ಪಿ ಸುಮನ್ ಪನ್ನೇಕರ್ ಅವರು ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿಗಳನ್ನು ರಾತ್ರಿ ಕಳಿಸಿ ರೇಡ್ ಮಾಡಿ ಪಾರ್ಟಿ ಆಯೋಜಿಸಿದ್ದ ಸ್ಥಳಿಯ ವ್ಯಕ್ತಿಯನ್ನೂ ಆತನ ಸಹಚರರನ್ನೂ ಬಂಧಿಸಿ ಹೆಡೆಮುರಿ ಕಟ್ಟಿದ್ದರು. ಆಗ ಸ್ಥಳದಲ್ಲಿ ಎರಡು ಲಕ್ಷ ರೂಪಾಯಿ ಹಣ, ಗಾಂಜಾ ಕೂಡ ಪತ್ತೆ ಅಗಿತ್ತು. ಇತ್ತೀಚೆಗೆ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ, ಪಾರ್ಟಿಗಳ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೆ ಕೊಡಗಿನಲ್ಲೂ ಪೋಲೀಸ್ ಇಲಾಖೆ ಬಿಗಿ ತಪಾಸಣೆ ಮಾಡುತಿತ್ತು.

ಆಗ ಕಳೆದ. ಆಗಸ್ಟ್ 28 ರ ಮುಂಜಾನೆ ಮಡಿಕೇರಿಯಲ್ಲಿ ಎರಡು ಕಾರುಗಳಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದ ಆರೋಪಿಗಳು ಪತ್ತೆ ಆಗಿದ್ದರು. ಆದರೆ ಆರೋಪಿಗಳಲ್ಲಿ ಮೂವರು ಪರಾರಿ ಆಗಿದ್ದರು. ಪೋಲೀಸರು ಕುಶಾಲನಗರದವರೆಗೆ ಆರೋಪಿಗಳ ಕಾರನ್ನು ಬೆನ್ನತ್ತಿದರೂ ಅರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿ ಆಗಿದ್ದರು. ಅಚ್ಚರಿಯ ಸಂಗತಿ ಎಂದರೆ ಪರಾರಿ ಆಗಿದ್ದ ಆರೋಪಿಗಳಲ್ಲಿ ಓರ್ವ ಆಫ್ರಿಕನ್ ಪ್ರಜೆಯೂ ಸೇರಿದ್ದ.

ಸಾಕಷ್ಟು ಶೋಧ ನಡೆಸಿ ಪೊಲೀಸರು ಕುಶಾಲನಗರದಿಂದ ಪರಾರಿಯಾಗಿದ್ದ ಪಶ್ಚಿಮ ಆಫ್ರಿಕಾದ ಘಾನ ದೇಶ ಎಕರೆ ರಾಜ್ಯ ಕುಂಸ್ಸೆ ಗ್ರಾಮ ಮೂಲದ ಆರೋಪಿ ಒಪೊಂಗ್ ಸ್ಯಾಮ್ಸನ್ (29) ಎಂಬಾತನನ್ನು ಬುಧವಾರ ಬೆಂಗಳೂರಿನ ಹೊರಮಾವು ಬಳಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇದರೊಂದಿಗೆ ಈ ದಂಧೆಯಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆರೋಪಿಯೊಂದಿಗೆ ಕುಶಾಲನಗರಕ್ಕೆ ಬಂದ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿ, ಸಿಬ್ಬಂದಿಗಳ ತಂಡ ಆತ ಮತ್ತು ಇಬ್ಬರು ಮಹಿಳೆಯರು ಉಳಿದುಕೊಂಡಿದ್ದ ಮೈಸೂರು ರಸ್ತೆಯ ಹೊಟೇಲಿಗೆ ಕರೆತಂದಿದ್ದು, ಮಹಜರು ನಡೆಸಿದ್ದಾರೆ. ಮಡಿಕೇರಿ ರಾಜಾಸೀಟ್ ಮಾರ್ಗದಲ್ಲಿ ಮಾದಕ ವಸ್ತು ಡ್ರಗ್ ಮಾರಾಟ ಸಂದರ್ಭ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಎರಡು ಕಾರುಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದರು.

ಅಪರಾಧ ಪತ್ತೆ ದಳದ ಪೊಲೀಸರು ಪರಾರಿಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸಿ ತಾ. 16 ರಂದು ಓರ್ವ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿದ್ದರು. ಚಿಕ್ಕಮಗಳೂರಿನ ತರಿಕೆರೆ ಮಹಿಳೆ ಸಾರ ಹಾಗೂ ಬೆಂಗಳೂರು ಬಾಣಸವಾಡಿಯ ಫೈಸಲ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರನೇ ಹಾಗೂ ಪ್ರಮುಖ ಆರೋಪಿಯಾಗಿರುವ ಒಪೊಂಗ್ ಸ್ಯಾಮ್ಸನ್ ಪೊಲೀಸರ ವಶವಾಗಿದ್ದು, ಅ. 5 ರ ವರೆಗೆ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಭಾರತದ ʼಸ್ಕಾಟ್ಲೆಂಡ್ʼ ಕೊಡಗಿಗೂ ಹಬ್ಬಿರುವ ಮಾದಕ ವಸ್ತು ಜಾಲ
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದ ಸಂಪೂರ್ಣ ಡೀಟೈಲ್ಸ್

ಆರೋಪಿಗಳು ಕಾರು ಬಿಟ್ಟು ಪರಾರಿ ಅಗಿದ್ದು ಕಾರಿನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿತ್ತು. ಅಂದು ಆರೋಪಿಗಳನ್ನು ಮುಂಜಾನೆ ಮೂರು ಗಂಟೆಯಿಂದ 8 ಗಂಟೆ ತನಕ ಜಿಲ್ಲೆಯ ಗಡಿಭಾಗದ ಕೊಪ್ಪ ಆವರ್ತಿ ವ್ಯಾಪ್ತಿಯಲ್ಲಿ ಹುಡುಕಾಟದಲ್ಲಿ ತೊಡಗಿದ್ದರು. ವಿಶೇಷವೆಂದರೆ ಈ ಆರೋಪಿಗಳು ಕಾರು ಬಿಟ್ಟು ನಂತರ ಕುಶಾಲನಗರದ ಮೈಸೂರು ರಸ್ತೆಯ ಲಾಡ್ಜ್ ಒಂದರಲ್ಲಿ ಮುಂಜಾನೆ ಮೂರು ಗಂಟೆಗೆ ರೂಂ ಮಾಡಿ ತಂಗುವ ಮೂಲಕ ತಲೆತಪ್ಪಿಸಿಕೊಂಡಿದ್ದರು. ಆದಿಲ್ ಖಾನ್ ಹೆಸರಿನಲ್ಲಿ ಪ್ರಮುಖ ಆರೋಪಿ ಲಾಡ್ಜ್‌ನಲ್ಲಿ ರೂಂ ಮಾಡಿದ್ದು ಇವನೊಂದಿಗೆ ಇಬ್ಬರು ಮಹಿಳೆಯರು ಕೂಡ ಇದ್ದರು ಎನ್ನುವ ಮಾಹಿತಿ ಹೊರಬಿದ್ದಿತು. ಆಗಸ್ಟ್ 28 ರಂದು 11 ಗಂಟೆವರೆಗೆ ಲಾಡ್ಜ್ ನಲ್ಲಿದ್ದ ಈ ತಂಡ ಪೊಲೀಸರ ಬಂಧನದ ಭೀತಿಯಿಂದ ದಿಢೀರನೆ ರೂಂ ಖಾಲಿ ಮಾಡಿ ಬೆಂಗಳೂರಿನತ್ತ ತೆರಳಿರುವುದು ಖಚಿತವಾಗಿತು.

ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಯನ್ನು ಸೇರಿದಂತೆ ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದ ಸಂದರ್ಭ ಇವರೆಲ್ಲ ಲಾಡ್ಜ್ನ ರೂಂ ನಂ 104 ರಲ್ಲಿ ತಂಗಿದ್ದರು ಎಂದು ಗೊತ್ತಾಗಿದೆ. ಆರೋಪಿಗಳ ಕಾರ್ಯಾಚರಣೆಗೆ ವಿಶೇಷ ತಂಡ ರಚನೆಯಾಗಿದ್ದು ಕುಶಾಲನಗರದ ಲಾಡ್ಜ್ನಲ್ಲಿದ್ದ ಸಿಬ್ಬಂದಿಗಳು ಮಾಹಿತಿ ನೀಡಿದ ಮೇರೆಗೆ ಪೊಲೀಸರಿಗೆ ಪ್ರಕರಣದ ಕಿಂಗ್ಪಿನ್ ಆರೋಪಿಯ ಪತ್ತೆ ಕಾರ್ಯಕ್ಕೆ ಸಂಪೂರ್ಣ ಸಹಕಾರಿಯಾಗಿದೆ. ಈ ಹಿಂದೆ ಬಂಧಿತಳಾಗಿದ್ದ ಆರೋಪಿ ಮಹಿಳೆಯನ್ನು ಕುಶಾಲನಗರ ಮತ್ತು ಮಡಿಕೇರಿಯ ಲಾಡ್ಜ್ ಗಳಿಗೆ ಕರೆತಂದ ಪೊಲೀಸರ ತಂಡ ಮಹಜರು ನಡೆಸಿದಾಗ ಮಹಿಳೆಯ ಗುರುತನ್ನು ಕೂಡ ಲಾಡ್ಜ್ ನ ಸಿಬ್ಬಂದಿಗಳು ಖಚಿತಪಡಿಸಿದ್ದಾರೆ. ಈಕೆಯಿಂದ ದೊರೆತ ಮಹತ್ತರ ಸುಳಿವಿನ ಬೆನ್ನಲ್ಲೇ ಪ್ರಕರಣದ ಕಿಂಗ್ಪಿನ್ ಸ್ಯಾಮ್ಸನ್ ಬಂಧನವಾಗಿದ್ದು ಮಾದಕ ವಸ್ತು ದಂಧೆ ವಿರುದ್ಧ ಕೊಡಗು ಪೊಲೀಸರ ಆಪರೇಷನ್ ಡ್ರಗ್ ಕಾರ್ಯಾಚರಣೆಗೆ ಯಶಸ್ಸು ದೊರಕಿದೆ ಎನ್ನಬಹುದು.

ಭಾರತದ ʼಸ್ಕಾಟ್ಲೆಂಡ್ʼ ಕೊಡಗಿಗೂ ಹಬ್ಬಿರುವ ಮಾದಕ ವಸ್ತು ಜಾಲ
ವೈಫಲ್ಯ ಮುಚ್ಚಿಹಾಕಲು ಡ್ರಗ್ಸ್ ಪ್ರಕರಣದ ಮೊರೆ ಹೋಗಿದೆಯೇ ರಾಜ್ಯ ಸರ್ಕಾರ?

ಈ ಡ್ರಗ್ಸ್ ಜಾಲದ ಬಂಧನದಿಂದಾಗಿ ಶಾಂತಪ್ರಿಯ ಜಿಲ್ಲೆಯಲ್ಲೂ ಮಾದಕ ವಸ್ತುಗಳ ಜಾಲ ತನ್ನ ಕಬಂಧ ಬಾಹುವನ್ನು ಹರಡಿರುವುದು ಸ್ಪಷ್ಟವಾಗಿದೆ. ಕೊಡಗಿನಲ್ಲಿ ಇಂತಹ ಜಾಲ ಇನ್ನೂ ಕಾರ್ಯಾಚರಿಸುತ್ತಿದೆ ಎಂದು ಹೇಳಲಾಗಿದೆ. ಇಲ್ಲಿಯ ಐಷಾರಾಮಿ ಹೋಂ ಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ತಂಗುವ ಹೊರಗಿನ ಶ್ರೀಮಂತ ವ್ಯಕ್ತಿಗಳು ಮಾದಕ ವಸ್ತುಗಳಿಗೆ ದಾಸರಾಗಿದ್ದು ಅವರನ್ನು ಸೆಳೆಯಲು ಡ್ರಗ್ಸ್ ಮಾರಾಟಗಾರರು ಮುಂದಾಗಿದ್ದಾರೆ ಎನ್ನಲಾಗಿದೆ. ಶ್ರೀಮಂತ ಯುವ ಜನಾಂಗ ಮತ್ತು ಐಟಿ ಬಿಟಿ ಕ್ಷೇತ್ರದಲ್ಲಿ ಉನ್ನತ ಉದ್ಯೋಗದಲ್ಲಿರುವವರು ಬೆಂಗಳುರು, ಮೈಸೂರಿನಲ್ಲಿ ಪಾರ್ಟಿಗಳು ಅಪಾಯಕರ ಎಂದು ಭಾವಿಸಿ ಕೊಡಗಿಗೆ ಬರುತಿದ್ದಾರೆ ಎಂದು ಹೇಳಲಾಗಿದೆ. ಏಕೆಂದರೆ ಕೊಡಗಿನ ರೆಸಾರ್ಟ್ ಗಳು ಕಾಪಿ ತೋಟಗಳ ಮದ್ಯದಲ್ಲಿದ್ದು ಇಲ್ಲಿ ಪಾರ್ಟಿಗಳನ್ನು ಆಯೋಜಿಸಿದರೆ ಹೊರಗಿನವರಿಗೆ ಗೊತ್ತಾಗುವುದಿಲ್ಲ. ಒಂದು ವೇಳೆ ಅಬ್ಬರದ ಸಂಗೀತ ಹಾಕಿದರೆ ಮಾತ್ರ ಹೊರಜಗತ್ತಿಗೆ ಗೊತ್ತಾಗುತ್ತದೆ. ಇಲ್ಲದಿದ್ದರೆ ಕೊಡಗು ಮಾದಕ ವ್ಯಸನಿಗಳಿಗೆ ಸೇಪ್ ಹೆವನ್ ಆಗಬಹುದು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com