ಸಂಸತ್ತಿನಲ್ಲಿ ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಸುಮಲತಾರಿಗೆ ವ್ಯಾಪಕ ಪ್ರಶಂಸೆ

ಸಂಸತ್ತಿನಲ್ಲಿ ಕನ್ನಡ ಪರವಾಗಿ ಮಾತನಾಡಿದ ಸುಮಲತಾರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ
ಸಂಸತ್ತಿನಲ್ಲಿ ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಸುಮಲತಾರಿಗೆ ವ್ಯಾಪಕ ಪ್ರಶಂಸೆ

ಕಳೆದ ಕೆಲವು ದಿನಗಳಿಂದ ಹಿಂದಿ ಹೇರಿಕೆ, ತ್ರಿಭಾಷಾ ಸೂತ್ರದ ವಿರುದ್ಧದ ಕಾವು ತೀವ್ರವಾಗುತ್ತಿದೆ. ಕೇಂದ್ರ ಸರ್ಕಾರ ತರಹೊರಟಿರುವ ಎನ್‌ಇಪಿ2020 ವಿರುದ್ಧ ಹಿಂದಿಯೇತರ ರಾಜ್ಯಗಳು ಸಿಡಿದೆದ್ದಿವೆ.

ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಮಂಡ್ಯದ ಸಂಸದೆ ಕೇಂದ್ರದ ಭಾಷಾ ತಾರಾತಮ್ಯದ ವಿರುದ್ಧ ದನಿಯೆತ್ತಿದ್ದಾರೆ.

ಶನಿವಾರ ಲೋಕಸಭೆ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದೆ, ನಮ್ಮ ಭಾರತ ಒಕ್ಕೂಟ ವ್ಯವಸ್ಥೆ ಹಾಗೂ ಇಲ್ಲಿನ ವೈವಿಧ್ಯಮಯ ಭಾಷಾ ಸಂಸ್ಕೃತಿಯಿಂದಾಗಿ ವಿಶ್ವದಲ್ಲೇ ಒಂದು ಗುಣಮಟ್ಟ ದೇಶವಾಗಿದೆ. ಕರ್ನಾಟಕ ರಾಜ್ಯವು ಬಹುತ್ವದ ಸಂಪ್ರದಾಯ ಹಾಗೂ ಪರಂಪರೆಯನ್ನು ಮೈಗೂಡಿಸಿಕೊಂಡಿದ್ದು, ಅದನ್ನು ನಾವೆಲ್ಲರೂ ಗೌರವಿಸುತ್ತೇವೆ. ನಮ್ಮ ಭಾಷೆ ಸಾವಿರಾರು ವರ್ಷಗಳ ಹಿಂದಿನದ್ದು ಹಾಗೂ ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವುದು.

ಹಿಂದಿಯನ್ನು ಪ್ರಮುಖ ಭಾಷೆಯನ್ನಾಗಿ ಮಾಡಿದರೆ ಕನ್ನಡ ಮಾತ್ರ ಬರುವವರಿಗೆ ಸಂವಹಿಸಲು ಕಷ್ಟವಾಗುತ್ತದೆ. ಹಾಗಾಗಿ ತ್ರಿಭಾಷಾ ಸೂತ್ರ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತವೆ.

ನಾನು ದಕ್ಷಿಣ ಭಾರತದ ಲಕ್ಷಾಂತರ ಜನರನ್ನು ಪ್ರತಿನಿಧಿಸಿ ಹೇಳುತ್ತೇನೆ. ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಾವೂ ಹಿಂದಿಯನ್ನು ಪ್ರೀತಿಸುತ್ತೇವೆ. ಆದರೆ ಅದಕ್ಕೂ ಹೆಚ್ಚು ಕನ್ನಡವನ್ನು ಪ್ರೀತಿಸುತ್ತೇವೆ. ನಾವು ಕನ್ನಡಿಗರು, ನಾವು ಭಾರತೀಯರು ಎಂದು ಸುಮಲತಾ ಅಂಬರೀಷ್‌ ಹೇಳಿದ್ದಾರೆ.

ಸಂಸತ್ತಿನಲ್ಲಿ ಕನ್ನಡ ಪರವಾಗಿ ಮಾತನಾಡಿದ ಸುಮಲತಾರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪಕ್ಷಗಳನ್ನು ಮೀರಿ ಸುಮಲತಾರನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಬೆಂಬಲಿಸಿದ್ದಾರೆ. ಅಲ್ಲದೆ ಹಿಂದಿ ಹೇರಿಕೆಯನ್ನು ವಿರೋಧಿಸದ ಉಳಿದ ಸಂಸದರ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com