ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ವಿರೋಧಿಸಿ 'ಪರ್ಯಾಯ ಜನತಾ ಅಧಿವೇಶನ'

ಕೇಂದ್ರ, ರಾಜ್ಯ ಸರ್ಕಾರಗಳು ತರಲು ಹೊರಟಿರುವ ಹೊಸ ನೀತಿಗಳ ಹಾಗೂ ಸುಗ್ರೀವಾಜ್ಞೆಗಳ ವಿರುದ್ಧ ಸೆಪ್ಟಂಬರ್‌ 21 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ  ನೀತಿಗಳನ್ನು ವಿರೋಧಿಸಿ 'ಪರ್ಯಾಯ ಜನತಾ ಅಧಿವೇಶನ'

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಾಗೂ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಹೊಸ ನೀತಿಗಳನ್ನು ವಿರೋಧಿಸಿ ಕರ್ನಾಟಕ ರೈತ, ದಲಿತ, ಕಾರ್ಮಿಕ ಚಳುವಳಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ವೇದಿಕೆ ಸೆಪ್ಟಂಬರ್‌ 21ರಂದು ಬೆಂಗಳೂರಿನಲ್ಲಿ ಬೃಹತ್‌ ರ‍್ಯಾಲಿ ಹಾಗೂ ಚಳವಳಿಗಳ ಪರ್ಯಾಯ ಜನತಾ ಅಧಿವೇಶನವನ್ನು ಆಯೋಜಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಂತೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಐಕ್ಯ ಹೋರಾಟ ಸಮಿತಿ, ರಾಜ್ಯ ಸರ್ಕಾರ ತನ್ನ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಗಳಿಗೆ ಸದನದ ಅಂಗೀಕಾರ ಪಡೆಯಲು ಸೆಪ್ಟೆಂಬರ್‌ 21 ರಂದು ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಿದರ ವಿರೋಧವಾಗಿ ಕರ್ನಾಟಕ ರೈತ, ದಲಿತ, ಕಾರ್ಮಿಕ ಚಳುವಳಿಗಳು ಹಾಗೂ ಪ್ರಗತಿಪರ ಸಂಘಟನೆಗಳು, ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮಿತಿ ಹಾಗೂ ರಾಷ್ಟ್ರೀಯ ಕಿಸಾನ್‌ ಮಹಾಸಂಘ ಎಲ್ಲರೂ ಜಂಟಿಯಾಗಿ ಬೃಹತ್ ಸಮಾವೇಶವನ್ನು ಸೆಪ್ಟಂಬರ್‌ 21 ಕ್ಕೆ ಆಯೋಜಿಸಿದ್ದರು, ರ‍್ಯಾಲಿಬೆಳಗ್ಗೆ 11 ಕ್ಕೆ ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ನಡೆಯಲಿದೆ ಎಂದು ಹೇಳಿದೆ.

ಕರ್ನಾಟಕದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕೂಲಂಕುಶ ಚರ್ಚೆ ನಡೆಯುವ ʼಚಳವಳಿಗಳ ಪರ್ಯಾಯ ಜನತಾ ಅಧಿವೇಶನ ಸೆಪ್ಟಂಬರ್‌ 21 ರಿಂದ 30 ರವರೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಲಿದ್ದು, ಸಮಾವೇಶದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌ ಎಸ್‌ ದೊರೆಸ್ವಾಮಿ, ಯೋಗೇಂದ್ರ ಯಾದವ್‌, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌, ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಮೊದಲಾದವರು ಉಪಸ್ಥಿತಿಯಲ್ಲಿರುತ್ತಾರೆ ಎಂದು ತಿಳಿಸಿದೆ.

ಮುಖ್ಯವಾಗಿ, ಭೂ ಸುಧಾರಣಾ ಮತ್ತು ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯಚ್ಛತ್ತಿ ಖಾಸಗೀಕರಣ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಸರ್ಕಾರಿ- ಸಹಕಾರಿ-ಸಾರ್ವಜನಿಕ ಉದ್ದಿಮೆಗಳು- ಬ್ಯಾಂಕ್‌ಗಳ ಮಾರಾಟ, ಜಿಎಸ್‌ಟಿ, ಸಿಎಎ, ಎನ್‌ಆರ್‌ಸಿ, ರಾಷ್ರೀಯ ಶಿಕ್ಷಣ ನೀತಿ 2020, ಮೇಲ್ವರ್ಗಕ್ಕೆ ಶೇ. 10 ಮೀಸಲಾತಿ, ಕಾರ್ಮಿಕರ ಉದ್ಯೋಗನಷ್ಟ, ಗುಂಪು ಥಳಿತ, ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ, ಅತ್ಯಾಚಾರ, ದಲಿತರ ಕೊಲೆ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿರಾಕರಣೆ, ಕಾರ್ಪೊರೇಟ್‌ ಉದ್ದಿಮೆದಾರರ ಸಾಲ ಮನ್ನಾ ಮೊದಲಾದುವುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಯಲಿದೆ.

Aikya horata leaflet.pdf
download

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com