ಗಜೇಂದ್ರಗಡ ಗುಡ್ಡಗಾಡು ಪ್ರದೇಶದಲ್ಲಿ ಅಮೂಲ್ಯ ಸಸ್ಯ ಪ್ರಬೇಧ ಪತ್ತೆ
ರಾಜ್ಯ

ಗಜೇಂದ್ರಗಡ ಗುಡ್ಡಗಾಡು ಪ್ರದೇಶದಲ್ಲಿ ಅಮೂಲ್ಯ ಸಸ್ಯ ಪ್ರಬೇಧ ಪತ್ತೆ

ಗಜೇಂದ್ರಗಡ ಸೇರಿ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಅಮೂಲ್ಯ ಸಸ್ಯ ಪ್ರಬೇಧಗಳು ಹುದುಗಿಕೊಂಡಿವೆ ಎಂಬುದು ಬರೀ ಮಾತಿನಲ್ಲೇ ಉಳಿದುಕೊಂಡಿತ್ತು. ಆದರೀಗ ವಿಶ್ವದ ಅತ್ಯಂತ ಅಪರೂಪದ ಸಸ್ಯ ಪ್ರಭೇದ ಪತ್ತೆಯಾಗಿದೆ

ಕೆ. ಶ್ರೀಕಾಂತ್

ಗಜೇಂದ್ರಗಡದ ಗುಡ್ಡಗಾಡು ಪ್ರದೇಶದಲ್ಲಿ ಅಮೂಲ್ಯ ಸಸ್ಯ ಪ್ರಬೇಧವೊಂದು ಪತ್ತೆಯಾಗಿದೆ. ಸೆರೋಪೆಜಿಯಾ ಸಸ್ಯವು ಅಪರೂಪದ್ದಾಗಿದೆ. ಇದು ಸರ್ಪೆಜಿನ್ ಅಂಶವು ಕ್ಯಾನ್ಸರ್ ಕಾಯಿಲೆಯ ನಿವಾರಣೆಗೆ ಉಪಯೋಗಿಸಲಾಗುತ್ತದೆ. ಈ ಸಸ್ಯ ಪ್ರಭೇಧ ಬಯಸೀಮೆಯಲ್ಲಿ ಪತ್ತೆಯಾಗುವುದು ಅಪರೂಪ.

ಹಲವು ಗಿಡಮೂಲಿಕೆ ಸಸ್ಯ ಪ್ರಭೆದಗಳನ್ನು ತನ್ನ ಒಡಲಾಳದಲ್ಲಿ ಹುದಗಿಸಿಕೊಂಡಿರುವ ಕೋಟೆ ನಾಡಿನ ಗುಡ್ಡಗಳಲ್ಲಿ ವಿಶ್ವದ ಅತ್ಯಂತ ಅದ್ಭುತ ಸಸ್ಯಗಳಲ್ಲೊಂದಾದ ಸೆರೋಪೇಜಿಯಾ ಪ್ರಭೇದಕ್ಕೆ ಸೇರಿದ ಅಪರೂಪದ ಸಸ್ಯವೊಂದು ಪತ್ತೆಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗಜೇಂದ್ರಗಡ ಸೇರಿ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಅಮೂಲ್ಯ ಸಸ್ಯ ಪ್ರಬೇಧಗಳು ಹುದುಗಿಕೊಂಡಿವೆ ಎಂಬುದು ಬರೀ ಮಾತಿನಲ್ಲೇ ಉಳಿದುಕೊಂಡಿತ್ತು. ಆದರೀಗ ವಿಶ್ವದ ಅತ್ಯಂತ ಅಪರೂಪದ ಸಸ್ಯ ಪ್ರಭೇದ ಪತ್ತೆಯಾಗಿದೆ. ಅಪೊಸೈನೆಸಿ(Apocynaceae) ಕುಟುಂಬಕ್ಕೆ ಸೇರಿದ ಸ್ವೈರಲ್ ಸೆರೋಪೆಜಿಯಾ(Spiral Ceropegia) ಅಪರೂಪದ ಸಸ್ಯ ಇದಾಗಿದೆ. ಇದನ್ನು ಕನ್ನಡದಲ್ಲಿ ಅಮೃತಾಂಜನ ಗಡ್ಡೆ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಸೆರೋಪೆಜಿಯಾ ಸ್ವೈರಾಲಿಸ್(Ceropegia spiralis). ತಿಳಿ ಹಸಿರು ಮತ್ತು ತಿಳಿ ಗುಲಾಬಿ ಮಿಶ್ರಿತ ವರ್ಣದಿಂದ ಕೂಡಿದ ಕೊಳವೆ ಆಕಾರದ ಹೂಜಿ ರಚನೆ ಹೊಂದಿರುವ ಹೂವಿನ ದಳಗಳು ನೀಳವಾಗಿ ಬೆಳೆದು ತುದಿಯಲ್ಲಿ ಸುರಳಿಗಟ್ಟುತ್ತದೆ. ಆದ್ದರಿಂದ ಇದಕ್ಕೆ ಸುರಳಿ ಸೆರೋಪೆಜಿಯಾ ಎನ್ನಲಾಗುತ್ತದೆ.

ಆಕರ್ಷಕ ಹೂವು:

ಅಮೃತಾಂಜನ ಗಡ್ಡೆ ಎಂದೆ ಕರೆಯುವ ಈ ಸಸ್ಯ ನೋಡಲು ಅತ್ಯಂತ ಸೂಕ್ಷ್ಮ ಜೊತೆಗೆ ವಿಶೇಷತೆಯಿಂದ ಕೂಡಿದೆ. ಹೂನೋಡಲು ತುಂಬಾ ಆಕರ್ಷಕವಾಗಿದ್ದು, ಸುರಳಿಗಳು ರೋಮಗಳಿಂದ ಕೂಡಿರುತ್ತವೆ. ಹೂವಿನ ವಾಸನೆ ನೊಣಗಳನ್ನು ಆಕರ್ಷಿಸಿ ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುತ್ತದೆ.

ಗಜೇಂದ್ರಗಡದ ಗುಡ್ಡಗಾಡು ಪ್ರದೇಶದಲ್ಲಿ ಅಮೂಲ್ಯ ಸಸ್ಯ ಪ್ರಬೇಧವೊಂದು ಪತ್ತೆಯಾಗಿದೆ. ಸೆರೋಪೆಜಿಯಾ ಸಸ್ಯವು ಅಪರೂಪದ್ದಾಗಿದೆ. ಇದು ಸರ್ಪೆಜಿನ್ ಅಂಶವು ಕ್ಯಾನ್ಸರ್ ಕಾಯೆಲೆಯ ನಿವಾರಣೆಗೆ ಉಪಯೋಗಿಸಲಾಗುತ್ತದೆ. ಬಯಸೀಮೆಯಲ್ಲಿ ಪತ್ತೆಯಾಗುವುದು ಅಪರೂಪ.
ಮಂಜುನಾಥ ನಾಯಕ (ಸಸ್ಯ ಪತ್ತೆ ಮಾಡಿರುವ ಜೀವವೈವಿದ್ಯ ಸಂಶೋಧಕ)

ವಿಶ್ವದಲ್ಲಿ 244 ವಿವಿಧ ಸೆರೋಪೆಜಿಯಾ ಪ್ರಭೇದಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ ಈ ಪ್ರಭೇದದ 52 ಜಾತಿಯ ಸಸ್ಯಸಂಕುಲವಿದ್ದು, ಬಹುಪಾಲು ಸೆರೋಪೆಜಿಯಾ ಪ್ರಭೇದಗಳು ಕಡಿದಾದ ಬೆಟ್ಟದ ಇಳಿಜಾರು, ಒಣ ಪತನಶೀಲ ಕಾಡುಗಳ ಹುಲ್ಲುಗಾವಲು, ಶೋಲಾ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಅಲ್ಲದೆ ಈ ಸಸ್ಯ ಹೆಚ್ಚಾಗಿ ಮಡಗಾಸ್ಕರ್, ದಕ್ಷಿಣ ಆಫ್ರಿಕಾ, ಕಿನ್ಯಾ ಮತ್ತು ಭಾರತದಲ್ಲಿ ಕಂಡುಬರುತ್ತದೆ.

ಅಲ್ಲದೆ ಇವುಗಳು ಪೂರ್ವ ಅರೇಬಿಯಾ, ಭಾರತ, ಚೀನಾ, ಆಸ್ಟ್ರೇಲಿಯಾ ಉತ್ತರ ಭಾಗ, ಕ್ಯಾನರಿ ದ್ವೀಪಗಳಲ್ಲಿ ಕಾಣಸಿಗುತ್ತವೆ. ಈ ಪ್ರಭೇದದ ಸಸ್ಯಗಳಲ್ಲಿನ 'ಸರ್ಪೆಜಿನ್' ಅಂಶವು ಕ್ಯಾನ್ಸರ್ ಕಾಯೆಲೆಯ ನಿವಾರಣೆಗೆ ಉಪಯೋಗಿಸಲಾಗುತ್ತದೆ. ಗ್ಲೈಕೋಸೈಡ್, ಪ್ಲೇವನಾಯ್ಡ್, ಟ್ಯಾನಿನ್, ಸೆಪೊನಿನ್ಸ್ (Saponins)‌ ಮತ್ತು ಸ್ಟೀರಾಯ್ಡ್‍ಗಳ ಅಂಶಗಳು ಔಷಧೀಯ ಗುಣ ಹೊಂದಿದೆ ಎನ್ನುತ್ತಾರೆ ಜೈವ ವೈವಿದ್ಯ ಸಂಶೋಧಕರು.

ರಾಜ್ಯದಲ್ಲಿ ಇಲ್ಲಿವರೆಗೆ ಈ ಜಾತಿಯ ಮೂಲಿಕೆಯನ್ನು ಹಾಸನ, ತುಮಕೂರು ಮತ್ತು ಬನ್ನೇರುಘಟ್ಟ ಗುಡ್ಡದ ಹುಲ್ಲುಗಾವಲು ಅರಣ್ಯ ಪ್ರದೇಶದಲ್ಲಿ ಗುರುತಿಸಿದ್ದು, ಇದೀಗ ಗಜೇಂದ್ರಗಡದಲ್ಲಿ ಪತ್ತೆಯಾಗಿದೆ. ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿಯೂ ಸಹ ಈ ಜಾತಿಯ ಮೂಲಿಕೆ ಹಂಚಿಕೆಯಾಗಿದೆ, ಆದರೆ ದಾಖಲಾಗಿಲ್ಲ. ಈ ಸಂಕುಲದ ಸಂಖ್ಯೆಯು ತೀರಾ ಕಡಿಮೆ ಇದೆ. ಕೃಷಿ ಮತ್ತು ಕೈಗಾರಿಕೆ ಉದ್ದೇಶಕ್ಕಾಗಿ ಗುಡ್ಡ, ಅರಣ್ಯ ಭೂಮಿಯನ್ನು ಪರಿವರ್ತಿಸುವುದರಿಂದ ಆವಾಸ ಸ್ಥಾನ ನಷ್ಟವಾಗಿ ಇಂತಹ ಅಪರೂಪದ ಮೂಲಿಕೆಗಳು ಅವಸಾನದತ್ತ ಸಾಗಿವೆ.

ಗಜೇಂದ್ರಗಡದಲ್ಲಿ ಅಮೂಲ್ಯ ಸಸ್ಯ ಪ್ರಭೇದಗಳು:

ಗಜೇಂದ್ರಗಡ ಸೇರಿ ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಔಷಧಿ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳ ಸಂಖ್ಯೆ ಹೆಚ್ಚಾಗಿವೆ ಎನ್ನುವ ಕಾರಣದಿಂದ ಔಷಧಿ ತಯಾರಿಕೆಗಾಗಿ ಹಿರಿಯರು ಗುಡ್ಡಗಳಲ್ಲಿ ಸುತ್ತಾಡಿ, ಸಸ್ಯಗಳನ್ನು ತರುತ್ತಿದ್ದರು. ಅಲ್ಲದೇ 2015ರಲ್ಲಿ ಯುರೇನಿಯಂ ಅದಿರು ನಿಕ್ಷೇಪ ಬೆಟ್ಟದಲ್ಲಿ ಇದೆ ಎನ್ನುವ ಕಾರಣಕ್ಕೆ ಕೇಂದ್ರ ರಕ್ಷಣಾ ತಂಡ ಹೆಲಿಕಾಪ್ಟರ್‍ಗೆ ಸ್ಕ್ಯಾನರ ಅಳವಡಿಸಿ, ಪರೀಕ್ಷಿಸಲಾಗಿತ್ತು. ಇಂತಹ ಅಮೂಲ್ಯ ಸಂಪತ್ತನ್ನು ಹೊಂದಿರುವ ಬೆಟ್ಟಗುಡ್ಡಗಳ ರಕ್ಷಣೆ ಸಮುದಾಯದ್ದಾಗಿದೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com