ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ 2700 ಕಿಮೀಗಳ ಸೈಕಲ್ ಜಾಥಾ ಆರಂಭ
ರಾಜ್ಯ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ 2700 ಕಿಮೀಗಳ ಸೈಕಲ್ ಜಾಥಾ ಆರಂಭ

ಕೆಆರ್‌ಎಸ್ ಪಕ್ಷದ ಸೈಕಲ್ ಜಾಥಾದ ಮೊದಲ ಹಂತ ಸೆಪ್ಟೆಂಬರ್ 18ಕ್ಕೆ ಕೊನೆಗೊಳ್ಳಲಿದ್ದು, ಎರಡನೇ ಹಂತ ಅಕ್ಟೋಬರ್ 5ರ ನಂತರ ಬಳ್ಳಾಯಿರಿಂದ ಕೂಡಲಸಂಗಮದವರೆಗೆ ಸಾಗಲಿದೆ. ಮೂರನೇ ಹಂತದಲ್ಲಿ ಬೆಳಗಾವಿಯಿಂದ ಪ್ರಾರಂಭಿಸಿ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸಮಾಪ್ತಿಯಾಗಲಿದೆ.

ಪ್ರತಿಧ್ವನಿ ವರದಿ

ಕರ್ನಾಟಕ ರಾಷ್ಟ್ರ ಸಮಿತಿಯಿಂದ ಆಯೋಜಿಸಲಾದ ಮೂರು ಹಂತಗಳ ಸೈಕಲ್ ಜಾಥಾದ ಮೊದಲ ಹಂತ ಇಂದು ಕೋಲಾರದಿಂದ ಆರಂಭವಾಗಿದೆ. ಕೆಆರ್‌ಎಸ್ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಆರಂಭವಾಗಿರುವ ಈ ಜಾಥಕ್ಕೆ ಆರಂಭದಲ್ಲಿಯೇ ಪೊಲೀಸರು ಅಡ್ಡಿಪಡಿಸಿದ್ದರು. ಆದರೆ, ಪಟ್ಟು ಹಿಡಿದ ನಿಂತ ಕೆಆರ್ ಎಸ್ ಕಾರ್ಯಕರ್ತರ ಹಠ ಕೊನೆಗೂ ಜಯಿಸಿದೆ.

ಕೋಲಾರದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರವಿಕೃಷ್ಣಾ ರೆಡ್ಡಿ, ಒಟ್ಟು 2,700 ಕಿಲೋಮೀಟರ್‌ಗಳವರೆಗೆ ನಡೆಯಲಿರುವ ಜಾಥಾದ ರೂಪು ರೇಷೆಗಳ ಕುರಿತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಾಥಾ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಆಸ್ಪತ್ರೆ ಹಾಗೂ ಇತರ ಸರ್ಕಾರಿ ಕಚೇರಿಗಳ ಭೇಟಿ ನಡೆಸಿ ಅಲ್ಲಿನ ಸ್ಥಿತಿಗತಿಗಳನ್ನು ಅರೆತು ಜನರ ಅಹವಾಲುಗಳನ್ನು ಕೂಡಾ ಸ್ವೀಕರಿಸಲಾಗುವುದು ಎಂದು ಹೇಳಿದರು.

ಇನ್ನು ಕೆಆರ್‌ಎಸ್ ಸೈಕಲ್ ಜಾಥಾದ ಮೊದಲ ಹಂತ ಸೆಪ್ಟೆಂಬರ್ 18ಕ್ಕೆ ಕೊನೆಗೊಳ್ಳಲಿದ್ದು, ಎರಡನೇ ಹಂತ ಅಕ್ಟೋಬರ್ 5ರ ನಂತರ ಬಳ್ಳಾರಿಯಿಂದ ಕೂಡಲಸಂಗಮದವರೆಗೆ ಸಾಗಲಿದೆ. ಮೂರನೇ ಹಂತದಲ್ಲಿ ಬೆಳಗಾವಿಯಿಂದ ಪ್ರಾರಂಭಿಸಿ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸಮಾಪ್ತಿಯಾಗಲಿದೆ ಎಂದು ರವಿ ಕೃಷ್ಣಾರೆಡ್ಡಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com