ಕರ್ತವ್ಯಕ್ಕೆ ಮತ್ತೆ ಸೇರಿಕೊಂಡ ʼIAS ಅಧಿಕಾರಿಗಳ ದುರಾಡಳಿತದಿಂದ ನೊಂದʼ ವೈದ್ಯಾಧಿಕಾರಿ
ರಾಜ್ಯ

ಕರ್ತವ್ಯಕ್ಕೆ ಮತ್ತೆ ಸೇರಿಕೊಂಡ ʼIAS ಅಧಿಕಾರಿಗಳ ದುರಾಡಳಿತದಿಂದ ನೊಂದʼ ವೈದ್ಯಾಧಿಕಾರಿ

'ಐಎಎಸ್‌ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವʼ ಎಂದು ಆಟೋ ರಿಕ್ಷಾದ ಮೇಲೆ ಬರೆದುಕೊಂಡು ಸುದ್ದಿಯಲ್ಲಿದ್ದ ದಾವಣಗೆರೆಯ ಡಾ. ಎಂ ಹೆಚ್‌ ರವೀಂದ್ರನಾಥ್‌ ಕಡೆಗೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಪ್ರತಿಧ್ವನಿ ವರದಿ

ʼಐಎಎಸ್‌ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವʼ ಎಂದು ಆಟೋ ರಿಕ್ಷಾದ ಮೇಲೆ ಬರೆದುಕೊಂಡು ಸುದ್ದಿಯಲ್ಲಿದ್ದ ದಾವಣಗೆರೆಯ ಡಾ. ಎಂ ಹೆಚ್‌ ರವೀಂದ್ರನಾಥ್‌ ಕಡೆಗೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾದ ಡಾ. ರವೀಂದ್ರನಾಥ್‌, ಕರ್ತವ್ಯಕ್ಕೆ ಹಾಜರಾಗಿರುವುದನ್ನು ಸ್ವತಃ ಸ್ಪಷ್ಟ ಪಡಿಸಿದ್ದಾರೆ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಳ್ಳಾರಿಯಲ್ಲಿ 24 ವರ್ಷಗಳ ಕಾಲ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರನಾಥ್‌ ಅವರು ಐಎಎಸ್‌ ಅಧಿಕಾರಿಗಳ ಲಾಬಿಯ ಕಾರಣದಿಂದಾಗಿ ತಮ್ಮ ಕೆಲಸ ಮತ್ತು ಸಂಬಳ ಎರಡನ್ನೂ ಕಳೆದುಕೊಂಡಿದ್ದೇನೆ ಎಂದು ಆರೋಪಿಸಿದ್ದರು. ಅಲ್ಲದೆ ಕೆಲಸ ಕಳೆದುಕೊಂಢು ಜೀವನೋಪಾಯಕ್ಕಾಗಿ ಆಟೋ ಚಾಲಕರಾಗಿ ದುಡಿಮೆ ಆರಂಭಿಸಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಆರೋಗ್ಯ ಮಂತ್ರಿ ಶ್ರೀರಾಮುಲು ಮತ್ತೆ ಕರ್ತವ್ಯಕ್ಕೆ ಸೇರಿಸಿಕೊಳ್ಳುವುದಾಗಿ ಅಭಯನೀಡಿ, ಅದೇಶ ಹೊರಡಿಸಿದ್ದರು. ಅದರಂತೆ ಶುಕ್ರವಾರದಂದು ರವೀಂದ್ರನಾಠ್‌ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com