ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಜೂನ್‌ ಮಧ್ಯದಲ್ಲೇ ಆರೋಪಿಗಳಿಗೆ ಸಿಕ್ಕಿತ್ತು ದಾಳಿಯ ಮಾಹಿತಿ
ರಾಜ್ಯ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಜೂನ್‌ ಮಧ್ಯದಲ್ಲೇ ಆರೋಪಿಗಳಿಗೆ ಸಿಕ್ಕಿತ್ತು ದಾಳಿಯ ಮಾಹಿತಿ

ಡ್ರಗ್ ದಂಧೆ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡುವ ವಿಚಾರ ಜೂನ್ ಮಧ್ಯದಲ್ಲೇ ಮಾಹಿತಿ ಸಿಕ್ಕಿದ್ದು, ಅಂದಿನಿಂದಲೇ ಆರೋಪಿಗಳು ಜಾಗೃತರಾಗಿದ್ದಾರೆ ಎನ್ನುವ ವಿಚಾರ ಬಯಲಾಗಿದೆ. ರವಿಶಂಕರ್ ಸ್ನೇಹಿತ ಪ್ರಶಾಂತ್ ರಾಂಕಾ ನಡುವೆ ಮೆಸೇಜ್ ಮಾತುಕತೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ

ಕೃಷ್ಣಮಣಿ

ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ, ಡ್ರಗ್ಸ್ ಸಿಕ್ಕಿದ ಬಳಿಕ ಸ್ಯಾಂಡಲ್‌ವುಡ್ ಕಡೆಗೆ ನಶೆಯ ಗಾಳಿ ಬೀಸಿತ್ತು. ಸ್ವತಃ ಸಿನಿಮಾ ನಟಿಯರು ಡ್ರಗ್ಸ್ ಸೇವನೆ ಹಾಗೂ ಮಾರಾಟ ಆರೋಪಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಸಿಟಿ ಕ್ರೈಂ ಬ್ರಾಂಚ್ ಗೆ ಪ್ರಕರಣ ವರ್ಗಾವಣೆ ಆಗಿದ್ದು, ಜಾಲದಲ್ಲಿ ಇರುವ‌ ಆರೋಪದಲ್ಲಿ ಒಬ್ಬಬ್ಬೊರನ್ನೇ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಸರ್ಕಾರ ಕೂಡ ಯಾರನ್ನೂ ಬಿಡುವುದಿಲ್ಲ, ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ, ಎಲ್ಲರ ಬಣ್ಣ ಬಯಲಾಗುತ್ತೆ ನೋಡುತ್ತಿರಿ ಎಂದು ಸ್ವಯಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳ ಮೂಲಕ ಎದೆಯುಬ್ಬಿಸಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈ ನಡುವೆ ಪತ್ರಕರ್ತರಿಗೆ ಸಿಕ್ಕಿರುವ ಸುದ್ದಿ ಇಡೀ ಪೊಲೀಸ್ ಇಲಾಖೆಯನ್ನೇ ಅವಮಾನಕ್ಕೆ ದೂಡುವಂತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸ್ಯಾಂಡಲ್‌ವುಡ್ ನಟಿಯರು ಎಷ್ಟೊಂದು ಪ್ರಭಾವಿಯಾಗಿದ್ದಾರೆ ಇದ್ದಾರೆ ಎನ್ನುವುದಕ್ಕೆ ಇಲ್ಲೊಂದು ನಿದರ್ಶನವಿದೆ. ಡ್ರಗ್ ದಂಧೆ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡುವ ವಿಚಾರ ಜೂನ್ ಮಧ್ಯದಲ್ಲೇ ಮಾಹಿತಿ ಸಿಕ್ಕಿದ್ದು, ಅಂದಿನಿಂದಲೇ ಆರೋಪಿಗಳು ಜಾಗೃತರಾಗಿದ್ದಾರೆ ಎನ್ನುವ ವಿಚಾರ ಬಯಲಾಗಿದೆ. ರವಿಶಂಕರ್ ಸ್ನೇಹಿತ ಪ್ರಶಾಂತ್ ರಾಂಕಾ ನಡುವೆ ಮೆಸೇಜ್ ಮಾತುಕತೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇನ್ನುಮೇಲೆ ಪೆಡ್ಲರ್ ಗಳಿಗೆ ಕರೆ ಮಾಡಬೇಡ, ನಮ್ಮನ್ನು ಪೊಲೀಸರು ಟ್ರ್ಯಾಕ್ ಮಾಡುತ್ತಿದ್ದಾರೆ ಎನ್ನುತ್ತಾನೆ. ಅದಕ್ಕೆ ಹೇಗೆ ಗೊತ್ತಾಯ್ತು ಎಂದಿದ್ದಕ್ಕೆ, ತುಂಬಾ ಸಮಯದಲ್ಲಿ ನಿಗಾ ವಹಿಸಿದ್ದಾರೆ, ಸಂದೀಪ್ ಪಾಟೀಲ್ ಸರ್ ಎಂದು ಉತ್ತರಿಸಿದ್ದಾನೆ. ಅಂದರೆ ನಟಿ ರಾಗಿಣಿ ಆಪ್ತ ರವಿಶಂಕರ್ ಗೆ ಪೊಲೀಸರು ದಾಳಿ ಮಾಡೋ ವಿಚಾರ ಮೊದಲೇ ತಿಳಿದಿತ್ತು ಎನ್ನುವುದು ಬಯಲಾಗಿದೆ.

admin

ಪೊಲೀಸರು ಡ್ರಗ್ಸ್ ಕೇಸ್ ಮೇಲೆ ನಿಗಾ ವಹಿಸಿದ್ದಾರೆ ಎನ್ನುವ ಮಾಹಿತಿ ಆರೋಪಿಗಳಿಗೆ ಸಿಕ್ಕಿದೆ ಎಂದಾದರೆ ಅಂದಿನಿಂದ ಇಲ್ಲಿಯವರೆಗೂ ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದಿಲ್ಲ. ಇದೀಗ ಗುರುವಾರ (10/09/2020) ಸಿಸಿಬಿ ಪೊಲೀಸರು ಡೋಪಿಂಗ್ ಟೆಸ್ಟ್, ಹೇರ್ ಫಾಲಿಕಲ್‌ ಟೆಸ್ಟ್ ಮಾಡಿಸುತ್ತಿದ್ದಾರೆ. ಆದರೆ ಯಾವುದನ್ನೇ ಪರೀಕ್ಷೆ ಮಾಡಿದರೂ ಫಲಪ್ರದ ಆಗುವುದು ತೀರಾ ಕಡಿಮೆ ಎನ್ನಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯುವ ಮುನ್ನ ನ್ಯಾಯಾಧೀಶರಿಗೆ ಮನವಿ ಮಾಡಿದ್ದ ಪತ್ರದಲ್ಲಿ ಸಿಸಿಬಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.

ಯಾವುದೇ ಡ್ರಗ್ಸ್ ಸೇವಿಸಿದ್ದರೂ ಮೂತ್ರ ಪರೀಕ್ಷೆಯನ್ನು 10 ರಿಂದ 12 ದಿನದ ಒಳಗೆ ಮಾಡಿದರೆ ಮಾತ್ರ ಪತ್ತೆಯಾಗುತ್ತದೆ. ರಕ್ತ ಪರೀಕ್ಷೆಯನ್ನು 24 ಗಂಟೆಯೊಳಗೆ ಮಾಡಬೇಕು. ಎಂಜಲು ಮಾದರಿ ಟೆಸ್ಟ್ 4 ದಿನದಲ್ಲಿ ಮಾಡಿದರೆ ಮಾತ್ರ ಫಲಿತಾಂಶ ಸಿಗುತ್ತದೆ ಇಲ್ಲದಿದ್ದರೆ ಪತ್ತೆ ಮಾಡುವುದು ಕಷ್ಟ. ಇನ್ನೂ ಹೇರ್ ಫಾಲಿಕಲ್ ಟೆಸ್ಟ್ ನಲ್ಲಿ 90 ದಿನಗಳ ಹಿಂದೆ ಡ್ರಗ್ಸ್ ಸೇವನೆ ಮಾಡಿದ್ದರೂ ಪತ್ತೆ ಮಾಡಬಹುದು. ಆದರೆ ಬೆಂಗಳೂರಿನ FSLನಲ್ಲಿ ಕೂದಲು ಮಾದರಿ ಪರೀಕ್ಷೆ ಮಾಡುವ ಸೌಲಭ್ಯ ಇಲ್ಲ. ಹೈದರಾಬಾದ್ FSL ಟೀಂ ಸಂಪರ್ಕಿಸುವ ಬಗ್ಗೆ ಸಿಸಿಬಿ ಪೊಲೀಸರು ಚಿಂತಿಸುತ್ತಿದ್ದಾರೆ. ಹೇರ್ ಕಲೆಕ್ಟ್ ಮಾಡಲು ಲ್ಯಾಬ್ ಟೆಕ್ನಿಶಿಯನ್ಸ್ ಕೂಡ ಅವರೇ ಬರಬೇಕಿದ್ದು, ಎಲ್ಲಿ ಪರೀಕ್ಷೆ ಮಾಡುತ್ತಾರೆ ಅವರ ಜೊತೆ ಸಂಪರ್ಕ ಸಾಧಿಸಿ ನಂತರ ಹೇರ್ ಫಾಲಿಕಲ್ ಟೆಸ್ಟ್ ಮಾಡಬೇಕಿದೆ. ಆದರೆ ಅದಕ್ಕೂ 90 ದಿನಗಳ ಕಾಲಾವಧಿ ಇರಲಿದ್ದು, ಕೂದಲು ಮಾದರಿ ಟೆಸ್ಟ್ ಮಾಡುವ ವೇಳೆಗೆ ಆ ಗಡುವು ಕೂಡ ಮುಗಿಯಲಿದೆ ಎನ್ನಲಾಗುತ್ತಿದೆ.

ಒಟ್ಟಾರೆ, ರಾಜಕಾರಣಿಗಳನ್ನು ಉಳಿಸುವುದಕ್ಕಾಗಿ ಹೀಗೆ ಮಾಡಿದ್ದರೋ ಅಥವಾ ಚಿತ್ರನಟಿಯರನ್ನೇ ಪಾರು ಮಾಡಲು ಮಾಹಿತಿ ಸೋರಿಕೆ ಮಾಡಿದ್ದಾರೋ ಎನ್ನುವುದು ಮತ್ತೊಂದು ತನಿಖೆ ಮೂಲಕ ಬಯಲಾಗಬೇಕಿದೆ.

DRUG CASE REMAND REPORT.pdf
Preview

Click here to follow us on Facebook , Twitter, YouTube, Telegram

Pratidhvani
www.pratidhvani.com