ಸಂಜನಾ ಗಲ್ರಾನಿ: ಐದು ದಿನ ಪೊಲೀಸ್‌ ಕಸ್ಟಡಿ ನೀಡಿ ಕೋರ್ಟ್‌ ಆದೇಶ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ವಿಸ್ತೀರ್ಣ ಇನ್ನಷ್ಟು ಹೆಚ್ಚಾಗುತ್ತಿದ್ದು, ಸಂಜನಾ ಅವರನ್ನು ವಿಚಾರಣೆಗಾಗಿ ಸಿಸಿಬಿ ಪೊಲೀಸರ ಕಸ್ಟಡಿಗೆ ಒಪ್ಪಿಸಿ ಕೋರ್ಟ್‌ ಆದೇಶ ನೀಡಿರುವುದರಿಂದ ಇನ್ನೆಷ್ಟು ಜನರ ಹೆಸರುಗಳು ಬಹಿರಂಗವಾಗಲಿದೆ ಎಂಬ ಕುತೂಹಲ ಕಾಡುತ್ತಿದೆ.
ಸಂಜನಾ ಗಲ್ರಾನಿ: ಐದು ದಿನ ಪೊಲೀಸ್‌ ಕಸ್ಟಡಿ ನೀಡಿ ಕೋರ್ಟ್‌ ಆದೇಶ

ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಪ್ರಕರಣದ ಉರುಳಿಗೆ ಸಿಲುಕುತ್ತಿರುವ ನಟಿಯರ ಪಟ್ಟಿಯಲ್ಲಿ ಮತ್ತೊಂದು ಹೆಸರು ಸೇರಿಕೊಂಡಿದೆ. ನಟಿ ಸಂಜನಾ ಅವರಿಗೆ ಐದು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ 8 ನೇ ಎಸಿಎಂಎ ಕೋರ್ಟ್ ಆದೇಶ ನೀಡಿದೆ. ಎಂಟು ದಿನಗಳ ಕಾಲ ಸಂಜನಾ ಅವರನ್ನು ಸಿಸಿಬಿ ಪೊಲೀಸರು ತಮ್ಮ ಕಸ್ಟಡಿಗೆ ನೀಡಬೇಕೆಂದು ಕೇಳಿದ್ದರು.

ಇದಕ್ಕೂ ಮುನ್ನ, ಸಂಜನಾ ಗಲ್ರಾನಿ ಅವರ ಮನೆಯನ್ನು ಸಂಪೂರ್ಣವಾಗಿ ಸಿಸಿಬಿ ಪೊಲೀಸರು ಜಾಲಾಡಿದ್ದರು. ನ್ಯಾಯಾಲಯದ ಅನುಮತಿ ಪಡೆದೇ, ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಜಂಟಿ ಕಮಿಷನರ್‌ ಸಂದೀಪ್‌ ಪಾಟೀಲ್‌ ಹೇಳಿದ್ದರು. ಮನೆಯೊಂದಿಗೆ ಸಂಜನಾ ಅವರ ಐಷಾರಾಮಿ ಬಿಎಂಡಬ್ಲ್ಯೂ ಕಾರ್‌ ಅನ್ನು ಕೂಡಾ ಪರಿಶೀಲನೆ ನಡೆಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗಾಗಲೇ ಸಿಸಿಬಿಯಿಂದ ಬಂಧಿತರಾಗಿರುವ ರಾಹುಲ್‌ ಶೆಟ್ಟಿ ಅವರ ಹೇಳಿಕೆಯ ಆಧಾರದ ಮೇಲೆ ಇಂದಿರಾನಗರದಲ್ಲಿರುವ ಸಂಜಜನಾ ಅವರ ಮನೆಗೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ಸಂಜನಾ ಹಾಗೂ ರಾಹುಲ್‌ ದೇಶ ವಿದೇಶಗಳಲ್ಲಿ ನಡೆದ ಖಾಸಗೀ ಪಾರ್ಟಿಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದರ ಕುರಿತು ಮಾಹಿತಿಗಳು ಕೂಡಾ ಲಭ್ಯವಾಗಿವೆ.

ಸಿಸಿಬಿ ಮೂಲಗಳು ಹೇಳಿರುವ ಪ್ರಕಾರ, ವಿಚಾರಣೆ ವೇಳೆ, ಖಾಸಗಿ ಪಾರ್ಟಿಗಳಲ್ಲಿ ಡ್ರಗ್‌ ಸರಬರಾಜು ಮಾಡಿರುವುದನ್ನು ರಾಹುಲ್‌ ಶೆಟ್ಟಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇವೆಲ್ಲಾ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ಸಂಜನಾ ಅವರ ಮನೆಯನ್ನು ಶೋಧಿಸಿದ್ದು, ನಂತರ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈಗ ಕೋರ್ಟ್‌ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ನೀಡಿದ್ದು, ವಿಚಾರಣೆಯ ವೇಳೆ ಇನ್ನೆಷ್ಟು ಹೆಸರುಗಳು ಬಹಿರಂಗವಾಗುವ ಸಾಧ್ಯತೆಗಳಿವೆ.

ಇನ್ನೋರ್ವ ನಟಿ ರಾಗಿಣಿ ದ್ವಿವೇದಿ ಕೂಡಾ ಪೊಲೀಸರ ಕಸ್ಟಡಿಯಲ್ಲೇ ಇದ್ದು, ಅವರನ್ನು ಕೂಡಾ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸ್ಯಾಂಡಲ್‌ವುಡ್‌ನ ಡ್ರಗ್‌ ಸುಳಿ ಎಷ್ಟು ಜನರನ್ನು ತನ್ನಲ್ಲಿ ಸೇರಿಸಿಕೊಂಡು ಮುಳುಗುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com