ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ವೀರೇನ್ ಖನ್ನಾ ಕುರಿತ ಸಂಪೂರ್ಣ ಮಾಹಿತಿ

ಚಂದನವನದಲ್ಲಿ ಬಿರುಗಾಳಿಯೆಬ್ಬಿಸಿದ ಡ್ರಗ್ಸ್‌ ಪ್ರಕರಣ ದಿನಗಳೆದಂತೆ ಕಾವು ಪಡೆಯುತ್ತಿದೆ. ಇದೀಗ ಪೊಲೀಸರು ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ವೀರೇನ್‌ ಖನ್ನಾ ಎಂಬಾತನನ್ನು ಬಂಧಿಸಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ವೀರೇನ್ ಖನ್ನಾ ಕುರಿತ ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ‌ ಡ್ರಗ್ಸ್ ಜಾಲ ಭಾರೀ ಅವಾಂತರ ಸೃಷ್ಠಿಸಿದೆ ನಟಿ ರಾಗಿಣಿ ಆಪ್ತ ರವಿಶಂಕರ್ ಹಾಗೂ ನಟಿ ಸಂಜನಾ ಗಲ್ರಾಣಿ ಆಪ್ತ ರಾಹುಲ್ ಬಂಧನದ ಬಳಿಕ ನಟಿ ರಾಗಿಣಿ ಕೂಡ ಅರೆಸ್ಟ್ ಆಗಿದ್ದಾರೆ. ಜೊತೆಗೆ ಡ್ರಗ್ಸ್ ಜಾಲದಲ್ಲಿ ಸಿಸಿಬಿ ಅಧಿಕಾರಿಗಳು ವೀರೇನ್ ಖನ್ನಾ ಎಂಬಾತನಿಗೆ ಬಲೆ ಬೀಸಿದ್ದಾರೆ. ರವಿಶಂಕರ್​ ಕೊಟ್ಟ ಮಾಹಿತಿ ಮೇರೆಗೆ ಇತ್ತ ಒಂದು ತಂಡ ನಟಿ ರಾಗಿಣಿ ಬೆನ್ನು ಬಿದ್ದಿದ್ದರೆ, ಇನ್ನು ಉಳಿದ 5 ತಂಡಗಳು ಬೇರೆ ಬೇರೆ ದಿಕ್ಕುಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುವ ಕೆಲಸ ಮಾಡಿವೆ. ದೆಹಲಿಯ ವೀರೇನ್ ಖನ್ನಾ, ಬೆಂಗಳೂರಿನಲ್ಲೇ ವಾಸವಾಗಿದ್ದನು. ಆದರೆ ಡ್ರಗ್ಸ್​ ವಿಚಾರ ಬಯಲಾಗುತ್ತಿದ್ದ ಹಾಗೆ ದೆಹಲಿಗೆ ಹಾರಿದ್ದ ವಿರೇನ್‌ ಖನ್ನಾನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವೀರೇನ್ ಖನ್ನಾ ದೊಡ್ಡ ಮಟ್ಟದ ಪಾರ್ಟಿ ಆಯೋಜಕನಾಗಿದ್ದು, ಆತನ ಪಾರ್ಟಿಗಳಲ್ಲಿ ಡ್ರಗ್ಸ್ ಸಾಮಾನ್ಯ ಎಂಬಂತಾಗಿತ್ತು. ಆ ಪಾರ್ಟಿಗೆ ಹೋಗಬೇಕಂದರೆ ಲಕ್ಷ ಹಣ ಪಾವತಿಸಬೇಕಿತ್ತು ಎನ್ನಲಾಗಿದೆ. ವೀರೇನ್​ಗೆ ಅಂತಾರಾಷ್ಟ್ರೀಯ ಡ್ರಗ್‌ ಡೀಲರ್‌ಗಳ ಜೊತೆಗ ಸಂಬಂಧ ಕೂಡ ಇತ್ತು ಎನ್ನುವ ಮಾಹಿತಿ ಹೊರಬಿದ್ದಿದೆ. ರೆಸಾರ್ಟ್, ಫಾರ್ಮ್ ಹೌಸ್, ಸ್ಟಾರ್ ಹೋಟೆಲ್​​ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದು, ಈ ಪಾರ್ಟಿಗಳಿಗೆ ಶ್ರೀಮಂತರ ಮಕ್ಕಳು, ರಾಜಕಾರಣಿ ಮಕ್ಕಳು, ಫಿಲ್ಮ್ ಇಂಡಸ್ಟ್ರಿಯವರು, ಉದ್ಯಮಿಗಳ ಮಕ್ಕಳು ಬರುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. 35 ವರ್ಷ ವಯಸ್ಸಿನ ಅವಿವಾಹಿತ ಖನ್ನಾ, ಪಿಯುಸಿವರೆಗೂ ದೆಹಲಿಯಲ್ಲೇ ವ್ಯಾಸಂಗ ಮಾಡಿದ್ದನು. ಆ ಬಳಿಕ ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾನೆ.

ವಿವಿಕೆ ಈವೆಂಟ್ಸ್ ಹೆಸರಲ್ಲಿ ಬ್ಯುಸಿನಸ್ ಶುರು ಮಾಡಿದ್ದ ವಿನೇಶ್‌ ಖನ್ನಾ, ಆನ್​ಲೈನ್​ನಲ್ಲೇ ಪಾರ್ಟಿ ಯೋಜನೆ ರೂಪಿಸುತ್ತಿದ್ದನು. ಯಾವಾಗ ಬೆಂಗಳೂರಿನಲ್ಲಿ ಡ್ರಗ್ಸ್‌ ಬಗ್ಗೆ ಭಾರೀ ಸದ್ದಾಗಲು ಶುರುವಾಯಿತೋ ತಕ್ಷಣ ದೆಹಲಿಗೆ ಪರಾರಿ ಆಗಿದ್ದನು. ವಿರೇನ್ ಖನ್ನಾ ಬೆಂಗಳೂರಿನಲ್ಲಿ ಈವೆಂಟ್ ಮಾಡಿ ಹೆಸರುವಾಸಿ ಆಗಿದ್ದರೆ ಅತ್ತ ಸಹೋದರ ರಾಜ್ ಖನ್ನಾ ನ್ಯೂಜಿಲೆಂಡ್​ನಲ್ಲಿ ಈವೆಂಟ್ಸ್ ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗಿದೆ. ನ್ಯೂಜಿಲ್ಯಾಂಡ್​ ಮಾದರಿಯಲ್ಲೇ ಬೆಂಗಳೂರಿನಲ್ಲಿ ಹೈಟೆಕ್​ ಪಾರ್ಟಿ ಆಯೋಜನೆ ಮಾಡುತ್ತಿದ್ದನು ಎನ್ನುವುದು ಇದೀಗ ಸಿಸಿಬಿಗೆ ಸಿಕ್ಕಿರೋ ಮಾಹಿತಿ. ವಿರೇನ್‌ ಖನ್ನಾ ಬಂಧನಕ್ಕೆ ತೆರಳಿದಾಗ ದೆಹಲಿ ನಿವಾಸದಲ್ಲೇ ಇದ್ದ ವಿರೇನ್‌ ಖನ್ನಾ ಪೋಷಕರು ಖನ್ನಾ ಮನೆಯಲ್ಲಿ ಇಲ್ಲ ಎಂದು ಹೇಳಿದ್ದರು. ಆದರೆ ಪಟ್ಟು ಬಿಡದ ಕರ್ನಾಟಕ ಪೊಲೀಸ್ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಗಿಣಿ ರಕ್ಷಣೆಗೆ ಒತ್ತಡ ಇರೋದು ಸತ್ಯನಾ..?

ಸಚಿವ ಸಿ.ಟಿ ರವಿ ಹೇಳಿರುವುದು ಸರಿಯಾಗಿಯೇ ಇದೆ ಎನ್ನುವ ಮೂಲಕ ರಾಗಿಣಿ ರಕ್ಷಣೆಗೆ ಒತ್ತಡ ಬರುತ್ತಿದೆ ಎಂದಿದ್ದ ಸಿ.ಟಿ ರವಿ ಅವರ ಮಾತನ್ನು ಭಾಗಶಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಒಪ್ಪಿಕೊಂಡಿದ್ದಾರೆ. ಹೈ ಪ್ರೊಫೈಲ್‌ ಕೇಸ್‌ ಗಳಲ್ಲಿ ಸಾಕಷ್ಟು ಒತ್ತಡ ಬರುವುದು ಖಚಿತ. ಆದರೆ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಕಾಟನ್ ಪೇಟೆಯಲ್ಲಿ ಎಫ್‌ ಐ ಆರ್ ದಾಖಲಾಗಿದ್ದು, ಓರ್ವ ವಿದೇಶಿ ಪ್ರಜೆ ಸೇರಿ ಒಟ್ಟು 12 ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿದೆ. ಕ್ರಮವಾಗಿ ಶಿವ ಪ್ರಕಾಶ್ (ಚಿಪ್ಪಿ ), ರಾಗಿಣಿ ದ್ವಿವೇದಿ, ವಿರೇನ್ ಖನ್ನಾ, ಪ್ರಶಾಂತ್ ರಾಂಕಾ, ವೈಭವ್ ಜೈನ್ , ಆದಿತ್ಯಾ ಆಳ್ವಾ, ಲೂಮ್ ಪೆಪ್ಪರ್ (ಡಕಾರ್), ಸೈಮನ್, ಪ್ರಶಾಂತ ಬಾಬು, ಅಶ್ವಿನ್ ಅಲಿಯಾಸ್ ಬೂಗಿ, ರಾಹುಲ್ ತೋನ್ಸೆ, ವಿನಯ್ ಹಾಗೂ ಇತರರು ಎಂದು ದಾಖಲು ಮಾಡಿಕೊಳ್ಳಲಾಗಿದೆ.

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ವೀರೇನ್ ಖನ್ನಾ ಕುರಿತ ಸಂಪೂರ್ಣ ಮಾಹಿತಿ
ರಾಗಿಣಿ ರಕ್ಷಣೆಗೆ ಒತ್ತಡ: ಸಾಕಷ್ಟು ಅನುಮಾನಗಳಿಗೆ ಕಾರಣವಾಯ್ತು ಸಿ.ಟಿ ರವಿ ಹೇಳಿಕೆ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com