ರಾಗಿಣಿ ರಕ್ಷಣೆಗೆ ಒತ್ತಡ: ಸಾಕಷ್ಟು ಅನುಮಾನಗಳಿಗೆ ಕಾರಣವಾಯ್ತು ಸಿ.ಟಿ ರವಿ ಹೇಳಿಕೆ

ನಟಿ ರಾಗಿಣಿಯನ್ನು ಬಂಧನದಿಂದ ತಪ್ಪಿಸಲು ಭಾರೀ ಸರ್ಕಸ್‌ ನಡೆಯುತ್ತಿದೆ. ಆದರೆ ಯಾವುದೇ ಕಾರಣಕ್ಕೂ ರಾಗಿಣಿ ರಕ್ಷಣೆ ಆಗಬಾರದು ಎನ್ನುವುದು ಬೇರೊಂದು ಗುಂಪಿನ ಪ್ರಯತ್ನವಾಗಿದ್ದು, ರಕ್ಷಣೆಗೆ ಬಂದವರಿಗೆ ಹಿನ್ನಡೆಯಾಗಿದೆ. ಆದೇ ಕಾರಣಕ್ಕಾಗಿ ಸಚಿವ ಸಿ.ಟಿ ರವಿ ಈ ರೀತಿ ಹೇಳಿಕೆ ಕೊಟ್ಟಿರುವುದು.
ರಾಗಿಣಿ ರಕ್ಷಣೆಗೆ ಒತ್ತಡ: ಸಾಕಷ್ಟು ಅನುಮಾನಗಳಿಗೆ ಕಾರಣವಾಯ್ತು ಸಿ.ಟಿ ರವಿ ಹೇಳಿಕೆ

ರಾಜ್ಯದಲ್ಲಿ ಡ್ರಗ್ಸ್‌ ವಿಚಾರ ಭಾರೀ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಸ್ಟಾರ್‌ ನಟಿ ರಾಗಿಣಿ ದ್ವಿವೇದಿ. ನಟಿ ರಾಗಿಣಿ ಆಪ್ತ ರವಿ ಶಂಕರ್‌ ಹಾಗೂ ನಟಿ ಸಂಜನಾ ಗಾಂಧಿ ಆಪ್ತ ರಾಹುಲ್‌ ಬಂಧನ ಮಾಡಲಾಗಿದೆ. ರಾಗಿಣಿ ಆಪ್ತ ಸರ್ಕಾರಿ ನೌಕರನಾಗಿದ್ದು, ಡ್ರಗ್ಸ್ ದಂಧೆಯಲ್ಲಿ ರವಿಶಂಕರ್ ಬಂಧನ ವಿಚಾರ ಖಚಿತವಾದ ಬಳಿಕ ಸೇವೆಯಿಂದ ಅಮಾನತು ಮಾಡಿ ಸಾರಿಗೆ ಇಲಾಖೆ ಆದೇಶ ಮಾಡಿದೆ. ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ದುರ್ನಡತೆ ಆಧಾರದಲ್ಲಿ ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಜಯನಗರ ಸಾರಿಗೆ ಕಚೇರಿಯಲ್ಲಿ SDA ಆಗಿದ್ದ ರವಿಶಂಕರ್ ನನ್ನು ಸೆಪ್ಟೆಂಬರ್ 4 ರಂದು ಕಚೇರಿಯಲ್ಲಿ ಇದ್ದಾಗಲೇ ವಿಚಾರಣೆಗೆಂದು ಸಿಸಿಬಿ ಪೊಲೀಸರು ಕರೆತಂದು ತದನಂತರ ಬಂಧನ ಮಾಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸ್ಯಾಂಡಲ್‌ ವುಡ್‌ ನ ನಟಿ ರಾಗಿಣಿ ದ್ವಿವೇದಿ ಬಂಧನ ಆಗಿರುವ ಕಾರಣ ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸಾಕಷ್ಟು ಘಟಾನುಘಟಿ ನಾಯಕರ ಮಕ್ಕಳು, ಪ್ರಭಾವಿ ಮುಖಂಡರು ಈ ಪ್ರಕರಣದಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ. ನಟಿ ರಾಗಿಣಿ ಅವರ ಸ್ನೇಹಬಳಗ ದೊಡ್ಡದಿದ್ದು ಬಂಧನ ಒಳಗಾಗಿರುವ ಕೋಪದಲ್ಲಿ ಯಾರೆಲ್ಲರ ಹೆಸರನ್ನು ಹೇಳಲಿದ್ದರೋ ಎನ್ನುವ ಆತಂಕ ಸ್ನೇಹಿತರ ಬಳಗದಲ್ಲಿ ಮನೆ ಮಾಡಿದೆ. ಈಗಾಗಲೇ ಸಾಕಷ್ಟು ಪೇಜ್‌ - 3 ಪಾರ್ಟಿ ಸ್ನೇಹಿತರು ಮೊಬೈಲ್‌ ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡು ಬೆಂಗಳೂರು ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ರಾಗಿಣಿ ಬಂಧನದ ಬಳಿಕ ಸಾಕಷ್ಟು ಜನರು ಸಿಕ್ಕಿಬೀಳುತ್ತಾರೆ ಎನ್ನುವ ಮಾತುಗಳ ನಡುವೆ ಸಚಿವ ಸಿ.ಟಿ ರವಿ ʼಒತ್ತಡʼದ ಬಗ್ಗೆ ಮಾತನಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಡ್ರಗ್ಸ್‌ ಮಾಫಿಯಾ ಇವತ್ತು, ನಿನ್ನೆಯದ್ದಲ್ಲ. ಆಗಾಗ ನಿಯಂತ್ರಿಸುತ್ತಿದ್ದರೂ ಕೂಡ ಬೇರು ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಈಗ ಸರ್ಕಾರ ಡ್ರಗ್ಸ್‌ ಮಾಫಿಯಾವನ್ನ ಗಂಭೀರವಾಗಿ ಪರಿಗಣಿಸಿದೆ. 84ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡುವ ಕೆಲಸ ಆಗಿದೆ. ಈ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಂಡಿಲ್ಲ. ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹೊರರಾಜ್ಯ, ಹೊರದೇಶಗಳ ಸಂಪರ್ಕ ಕೂಡ ಇದೆ ಎಂದಿದ್ದಾರೆ. ಇನ್ನೂ ಈ ಮಾಫಿಯಾ ಕೆಲವೆಡೆ ಭಯೋತ್ಪಾದಕರ ಜೊತೆ ತಳುಕು ಹಾಕಿಕೊಂಡಿದೆ. ಇನ್ನೂ ಕೆಲವೆಡೆ ರಾಜಕಾರಣಿಗಳ ಜೊತೆಯೂ ತಳುಕು ಹಾಕಿದೆ. ಸಿನಿಮಾ ನಟ-ನಟಿಯರನ್ನು ತಳುಕು ಹಾಕಿಕೊಂಡಿದೆ. ಮಾಫಿಯಾದಲ್ಲಿ ಯಾರೇ ಇದ್ರು ಸರಿಯೇ, ಗಂಭೀರವಾಗಿ ತನಿಖೆಯಾಗುತ್ತಿದೆ. ಯುವ ಜನರನ್ನ ಈ ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ತನಿಖಾ ತಂಡದ ಮೇಲೆ ಒತ್ತಡ ತರುವಂತಹ ಕೆಲಸ ನಡೆಯುತ್ತಿದೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದಿದ್ದಾರೆ.

ಡ್ರಗ್ಸ್‌ ಪೆಡ್ಲರ್‌ ಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಗಳ ಮೇಲೆ ಒತ್ತಡ ಇದೆ ಎಂಬ ಸಚಿವ ಸಿ ಟಿ ರವಿ ಹೇಳಿಕೆಗೆ ಕಾಂಗ್ರೆಸ್‌ ವ್ಯಂಗ್ಯವಾಡಿದ್ದು, ಸಿ ಟಿ ರವಿಯವರು ಯಾರ ಮೇಲೆ, ಯಾರಿಂದ ಒತ್ತಡ ಇದೆ ಅಂತ ಬಹಿರಂಗ ಪಡಿಸಲಿ. ಎಂದು ಸವಾಲು ಹಾಕಿದ್ದಾರೆ. ಸಿ ಟಿ ರವಿ ಮೈ ಮೇಲೆ ಎಣ್ಣೆ ಹಾಕಿ ಕೊಳ್ಳುವ ರೀತಿಯಲ್ಲಿ ಹೇಳಿಕೆ ಕೊಡಬಾರದು. ಸಿ ಟಿ ರವಿಯವರು ಆಡಳಿತ ಪಕ್ಷದ ಮಂತ್ರಿಯಾಗಿ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಮಾಹಿತಿ ಇದ್ದರೆ ಬಹಿರಂಗ ಪಡಿಸಲಿ. ಅಥವಾ ಸಿ ಟಿ ರವಿಯವರೇ ಖಾಸಗಿಯಾಗಿ ಗೃಹ ಸಚಿವರನ್ನು ಭೇಟಿ ಮಾಡಿ ಮಾಹಿತಿ ಕೊಡಲಿ. ಯಾರ ಒತ್ತಡ ಇದೆ, ಯಾಕೆ ಒತ್ತಡ ಇದೆ ಅಂತ ಸಿ ಟಿ ರವಿಯವರೇ ಹೇಳಬೇಕು. ಇಂತಹ ದೊಡ್ಡ ಸುದ್ದಿ ಆದ ಮೇಲೆ ಸಿ ಟಿ ರವಿ ತಮ್ಮ ಹೇಳಿಕೆಗೆ ಸೂಕ್ತ ಮಾಹಿತಿ ಕೊಡಬೇಕು. ಸಿ.ಟಿ ರವಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಸಿ.ಟಿ ರವಿ ಉಡಾಫೆಯ ಹೇಳಿಕೆ ಕೊಡೋದಲ್ಲ. ಸಿಸಿಬಿ, ಪೊಲೀಸರು, ಗೃಹ ಸಚಿವರ ಬಳಿ ಹೇಳಲಿ. ಮಾಹಿತಿ ಗೊತ್ತಿದ್ದು ಮುಚ್ಚಿಟ್ಟರೆ ಅದು ಸಹ ತಪ್ಪು. ಯಾರೇ ಶಾಮೀಲಾಗಿದ್ರೂ ತನಿಖೆಯಾಗಿ ಕ್ರಮ ಆಗಲಿ. ಅವರಿವರ ಮಕ್ಕಳು, ರಾಜಕಾರಣಿಗಳ ಮಕ್ಕಳಿದ್ದಾರೆ ಅಂತೆಲ್ಲ ಮಾಹಿತಿ ಕೇಳಿಬರ್ತಿದೆ. ಯಾರೇ ಇದ್ದರೂ ತನಿಖಾಗಲಿ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ ಮಾಡಿದ್ದಾರೆ.

ರಾಗಿಣಿ ರಕ್ಷಣೆಗೆ ಒತ್ತಡ: ಸಾಕಷ್ಟು ಅನುಮಾನಗಳಿಗೆ ಕಾರಣವಾಯ್ತು ಸಿ.ಟಿ ರವಿ ಹೇಳಿಕೆ
ಸ್ಯಾಂಡಲ್‌ವುಡ್‌ ಡ್ರಗ್‌ ಪ್ರಕರಣ: ವಿಚಾರಣೆಯ ಬಳಿಕ ರಾಗಿಣಿ ಬಂಧನ

ಸಿ ಟಿ ರವಿ ಹೇಳಿಕೆಗೆ ಸಾಥ್‌ ಕೊಟ್ಟ ಸಲೀಂ..!

ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಡ್ರಗ್ಸ್‌ ವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿ ಮೇಲೆ ಒತ್ತಡ ಇದೆ ಎಂದಿರುವ ಹೇಳಿಕೆಗೆ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸಾಥ್‌ ಕೊಟ್ಟಿದ್ದಾರೆ. ಅವರ ಪಕ್ಷ (ಬಿಜೆಪಿ)ದವರಿಂದಲೇ ತನಿಖಾಧಿಕಾರಿಗಳ ಮೇಲೆ ಒತ್ತಡ ಇದ್ದರೂ ಇರಬಹುದು. ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಪಕ್ಷದ ಸರ್ಕಾರ ಇದೆ. ತನಿಖೆ ಮಾಡಿಸಲಿ. ಬಿಜೆಪಿ ಪಕ್ಷದ ಮುಖಂಡರಿಂದಲೇ ಕೇಸ್ ಮುಚ್ಚಿ ಹಾಕುವ ಒತ್ತಡ ಇದೆ ಎಂಬ ಮಾಹಿತಿ ನಮ್ಮ ಬಳಿ ಇದೆ ಎಂದಿದ್ದಾರೆ. ಸಿ ಟಿ ರವಿ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಅವರದ್ದೇ ಪಕ್ಷದ ಮುಖಂಡರ ಒತ್ತಡ ಇದೆ ಎಂದಿದ್ದಾರೆ.

ಸಿಟಿ ರವಿ ಟಾರ್ಗೆಟ್‌ ಮಾಡಿದ್ದು ಯಾರನ್ನು..?

ನಟಿ ರಾಗಿಣಿಯನ್ನು ಬಂಧನದಿಂದ ತಪ್ಪಿಸಲು ಭಾರೀ ಸರ್ಕಸ್‌ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಯಾವುದೇ ಕಾರಣಕ್ಕೂ ರಾಗಿಣಿ ರಕ್ಷಣೆ ಆಗಬಾರದು ಎನ್ನುವುದು ಬೇರೊಂದು ಗುಂಪಿನ ಪ್ರಯತ್ನವಾಗಿದ್ದು, ರಕ್ಷಣೆಗೆ ಬಂದವರಿಗೆ ಹಿನ್ನಡೆಯಾಗಿದೆ. ಆದೇ ಕಾರಣಕ್ಕಾಗಿ ಸಚಿವ ಸಿ.ಟಿ ರವಿ ಈ ರೀತಿ ಹೇಳಿಕೆ ಕೊಟ್ಟಿರುವುದು. ಆದರೆ ಕಾಂಗ್ರೆಸ್‌ ಅಥವಾ ಬಿಜೆಪಿ ನಾಯಕರೋ ಬೇರೆ ಪಕ್ಷದ ನಾಯಕರೋ..? ಅಥವಾ ರಾಜಕಿಯೇತರ ಮುಖಂಡರು ಯತ್ನ ಮಾಡುತ್ತಿದ್ದಾರೋ ಎನ್ನುವುದು ಬಹಿರಂಗವಾಗಿಲ್ಲ. ಆದರೆ ನಟಿ ರಾಗಿಣಿ ಇತ್ತೀಚಿಗೆ ಬಿಜೆಪಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವಿಡಿಯೋವೊಂದು ವೈರಲ್‌ ಆಗಿದೆ. ಆ ವಿಡಿಯೋ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎನ್ನುವುದು ಮಾತ್ರ ಸತ್ಯ.

ರಾಗಿಣಿ ರಕ್ಷಣೆಗೆ ಒತ್ತಡ: ಸಾಕಷ್ಟು ಅನುಮಾನಗಳಿಗೆ ಕಾರಣವಾಯ್ತು ಸಿ.ಟಿ ರವಿ ಹೇಳಿಕೆ
ಡ್ರಗ್ಸ್‌ ಜಾಲ: ಮೂವರು ಸ್ಯಾಂಡಲ್‌ವುಡ್‌ ನಟಿಯರ ಆಪ್ತರನ್ನು ವಶಕ್ಕೆ ಪಡೆದ ಸಿಸಿಬಿ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com