ಮೈಸೂರು- ಕರೋನಾ ವಾರಿಯರ್ಸ್‌ ಹೋರಾಟ: ಸರ್ಕಾರಕ್ಕೆ ಸಂಕಷ್ಟ !
ರಾಜ್ಯ

ಮೈಸೂರು- ಕರೋನಾ ವಾರಿಯರ್ಸ್‌ ಹೋರಾಟ: ಸರ್ಕಾರಕ್ಕೆ ಸಂಕಷ್ಟ !

ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ ನಾಗೇಂದ್ರ ಸಾವಿಗೆ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಪ್ರಶಾಂತ್ ಮಿಶ್ರಾ ಅವರು ಕಾರಣ ಅವರನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಸಿಇಒ ಅಮಾನತು ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.

ಕೃಷ್ಣಮಣಿ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ವೈದ್ಯಾಧಿಕಾರಿ ಡಾ. ನಾಗೇಂದ್ರ ಸಾವಿನ ಬಗ್ಗೆ ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಗುರುವಾರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಅವರೇ ಕಾರಣ ಎಂದು ಸರ್ಕಾರದ ವಿರುದ್ಧ ಶುರುವಾದ ಹೋರಾಟ ಇನ್ನೂ ಕೂಡ ಮುಂದುವರಿಸಿದ್ದಾರೆ. ಅದೇ ಕಾರಣದಿಂದ ಶುಕ್ರವಾರ ಹಾಗೂ ಶನಿವಾರದ ಕರೋನಾ ಹೆಲ್ತ್‌ ಬುಲೆಟಿನ್‌ನಲ್ಲಿ ಖಾಲಿ ಕಾಲಂ ಕಾಣಿಸಿಕೊಂಡಿದೆ. ವೈದ್ಯ ಸಂಘದ ಮಾಜಿ ಅಧ್ಯಕ್ಷ ಡಾ ರವೀಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಲೇ ಇದೆ. ಆದರೆ ಪ್ರತಿಭಟನೆ ಉದ್ದೇಶ ಏನು ಎನ್ನುವುದು ಮಾತ್ರ ಅರ್ಥವಾಗಿಲ್ಲ.

ಆತ್ಮಹತ್ಯೆ ಬಳಿಕ ಸರ್ಕಾರ ಜವಾಬ್ದಾರಿ ನಿರ್ವಹಿಸಿದೆ..!

ಒಂದು ತಾಲೂಕು ವೈದ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಎದುರಾಗಿದ್ದು ಆಡಳಿತ ಮಾಡುತ್ತಿರುವವರ ವೈಫಲ್ಯ ಎನ್ನುವುದು ತಪ್ಪೇನು ಅಲ್ಲ. ಆದರೆ ಆತ್ಮಹತ್ಯೆಗೂ ಮುನ್ನ ಆ ವೈದ್ಯರು ತನ್ನ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯಾರ ಗಮನಕ್ಕಾದರೂ ತಂದಿದ್ದಾರೆಯೇ ಎನ್ನುವುದು ಪ್ರಮುಖವಾಗುತ್ತದೆ. ಆದರೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶೇಷ ಪ್ರಕರಣ ಎಂದು ಪರಿಗಣಿಸಿ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಮೈಸೂರು ಪ್ರಾದೇಶಿಕ ಆಯುಕ್ತರು ಮಾಡಲಿದ್ದು, ಕೇವಲ ಒಂದೇ ವಾರದಲ್ಲಿ ವರದಿ ಕೊಡಬೇಕು ಎಂದು ಆದೇಶ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಭಟನಾನಿರತ ವೈದ್ಯರ ಬೇಡಿಕೆ ಏನು..?

ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ ನಾಗೇಂದ್ರ ಸಾವಿಗೆ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಪ್ರಶಾಂತ್ ಮಿಶ್ರಾ ಅವರು ಕಾರಣ ಅವರನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಸಿಇಒ ಅಮಾನತು ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ. ಆದರೆ ರಾಜ್ಯ ಸರ್ಕಾರ ಮೈಸೂರು ಸಿಇಒ ಪ್ರಶಾಂತ್‌ ಮಿಶ್ರಾ ಅವರನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ. ವರ್ಗಾವಣೆ ಆದರೂ ಪ್ರತಿಭಟನೆ ಮುಂದುವರಿಕೆ ಮಾಡಿದ್ದು, ಸಿಇಒ ಅಮಾನತು ಆಗುವವರೆಗು ಪ್ರತಿಭಟನೆ ಕೈ ಬಿಡೋಲ್ಲ ಎಂದು ಮೈಸೂರು ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ದೇವಿ ಆನಂದ್ ಸ್ಪಷ್ಟಪಡಿಸಿದ್ದಾರೆ. ಸಿಇಒ ವರ್ಗಾವಣೆ ಶಿಕ್ಷೆಯಲ್ಲ, ಅಮಾನತು ಮಾಡಿದರೆ ಮಾತ್ರ ಪ್ರತಿಭಟನೆ ಕೈಬಿಡುತ್ತೇವೆ. ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದಿದ್ದಾರೆ.

ರಾಜ್ಯ ವೈದ್ಯರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರವೀಂದ್ರ ಮಾತನಾಡಿ ನಮ್ಮ ಹೋರಾಟಕ್ಕೆ ಮೃತ ನಾಗೇಂದ್ರ ಕುಟುಂಬ ಬೆಂಬಲ ನೀಡಲಿ, ಬಿಡಲಿ ಮುಷ್ಕರ ಮುಂದುವರಿಯುತ್ತದೆ. ನಮಗೆ ವೈದ್ಯರು, ಸಿಬ್ಬಂದಿಗಳ ರಕ್ಷಣೆ ಮುಖ್ಯ. ಅದಕ್ಕಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಪ್ರಶಾಂತ್ ಕುಮಾರ್ ಮಿಶ್ರಾರನ್ನ ಉಳಿಸಿಕೊಳ್ಳುವ ಪ್ರಯತ್ನ ಬೇಡ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಡಿಸಿ‌ಅಭಿರಾಂ ಜಿ. ಶಂಕರ್ ಜೊತೆಗಿನ ಸಂಭಾಷಣೆ ಆಡಿಯೋ ವಿಚಾರದ ಬಗ್ಗೆ ಮಾತನಾಡಿ, ಡಿಸಿ ಅಭಿರಾಂ ಜಿ.ಶಂಕರ್ ಕಳೆದ ಹದಿನೈದು ದಿನಗಳ ಹಿಂದೆ ಮಾತನಾಡಿರುವ ಆಡಿಯೋ ಅದು. ಆದರೆ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಜೊತೆಗಿನ ಸಂಭಾಷಣೆ ಆಡಿಯೋ ಇದೆ. ಮೊಬೈಲ್‌ಚೆಕ್ ಮಾಡಿದ್ರೆ ಎಲ್ಲವೂ ಬಯಲಾಗುತ್ತೆ. ಡಿಸಿ ಆಡಿಯೋ ಆಗಲಿ, ಇನ್ನೊಬ್ಬರ ಆಡಿಯೋ ಆಗಲಿ ತಪ್ಪು ತಪ್ಪೆ. ನಮ್ಮ ಬೇಡಿಕೆ ಒಂದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸಿಇಓ ಅಮಾನರು ಆಗಬೇಕು ಎಂದಿದ್ದಾರೆ.

ಡಾ ನಾಗೇಂದ್ರ ತಂದೆ ನನ್ನ ಮಗನ ಮೇಲೆ ಒತ್ತಡವಿತ್ತು ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಪೊಲೀಸ್‌ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್‌ ಕೂಡ ದಾಖಲಾಗಿದೆ. ಆದರೂ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದು ಕರೋನಾ ಸೋಂಕು ಹಾಗೂ ಇತರೆ ಸಮಸ್ಯೆ ಇಂದು ಬಳಲುತ್ತಿರುವ ಜನರನ್ನು ಕಂಗಾಲಾಗುವಂತೆ ಮಾಡಿದೆ. ಈ ನಡುವೆ ಸರ್ಕಾರ ನಮ್ಮ ಬೇಡಿಕೆಗೆ ಬಗ್ಗೆದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವಿಚಾರೆವಾಗಿ ಕುಟುಂಬಸ್ಥರು ಇಲ್ಲೀವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಡಾ ನಾಗೇಂದ್ರ ಅವರ ಪತ್ನಿ ಕೂಡ ತನ್ನ ಗಂಡನಿಗೆ ಒತ್ತಡವಿತ್ತು ಎಂದು ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ. ಆದರೆ ಡಾ ಕಲಾವತಿ ಎಂಬುವರು ಮಾತ್ರ ಡಾ ಸುಧಾಕರ್‌ ಜೊತೆ ರೋಷಾವೇಶದಲ್ಲಿ ಮಾತನಾಡಿ ಕೊಂದುಬಿಟ್ರಲ್ಲಾ..! ನಾಗೇಂದ್ರ ನನಗೆ ಬೇಕು, ನಿಮ್ಮ ಹಣವಲ್ಲ ಎಂದು ಕಿಡಿಕಾರಿದ್ದರು. ಆದರೆ ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಅವರೇ ಡಾ ನಾಗೇಂದ್ರ ಪತ್ನಿ ಎಂಬ ತಪ್ಪು ಅಭಿಪ್ರಾಯ ಮೂಡಿದೆ. ಆದರೆ ಡಾ ಕಲಾವತಿ, ಮೃತ ಡಾ ನಾಗೇಂದ್ರ ಅವರ ಸಹೋದ್ಯೋಗಿ ಅಷ್ಟೆ. ಕುಟುಂಬಸ್ಥರು ಪ್ರತಿಭಟನೆಗೆ ಬಂದಿಲ್ಲ ಎನ್ನುವ ಕಾರಣಕ್ಕೇ ಡಾ ರವೀಂದ್ರ ಹಾಗೆ ಹೇಳಿರುವುದು. ಕುಟುಂಬಸ್ಥರು ಬರಲಿ ಬಾರದೇ ಇರಲಿ ನಾವು ಹೋರಾಟ ಮಾಡುತ್ತೇವೆ ಎಂದು. ಮುಂದಿನ ದಿನಗಳಲ್ಲಿ ಸರ್ಕಾರ ಏನು ಮಾಡುತ್ತೆ ಕಾದು ನೋಡಬೇಕು

Click here to follow us on Facebook , Twitter, YouTube, Telegram

Pratidhvani
www.pratidhvani.com