ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ; ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಅರ್ಜಿದಾರರಾದ ನಾಗರಾಜ ಶೇಷಪ್ಪ ಹೊನಗಲ್ ಅವರು, ಭೂ ಸುಧಾರಣ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ; ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿರುವ ಕೋರ್ಟ್‌, ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೇಳಿದೆ.

1961ರ ಭೂ ಸುಧಾರಣಾ ಕಾಯ್ದೆಯ 79A, 79B ಮತ್ತು 79C ಸೆಕ್ಷನ್‌ಗಳನ್ನು ತೆಗೆದುಹಾಕುವ ಸುಗ್ರೀವಾಜ್ಞೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿತ್ತು. ಇದರ ವಿರುದ್ದವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈಗ ಮುಖ್ಯ ನ್ಯಾಯಾಧೀಶರಾದ ಅಭಯ್‌ ಶ್ರೀನಿವಾಸ್‌ ಓಕಾ ಅವರಿದ್ದ ವಿಭಾಗೀಯ ಪೀಠವು, ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿದೆ.

ಸೆಕ್ಷನ್‌ 63ರ ಅಡಿಯಲ್ಲಿ ಮಾಡಲಾಗಿರುವ ತಿದ್ದುಪಡಿಯು, ಕೃಷಿ ಉತ್ಪಾದನೆಗೆ ಮಾರಕವಾಗುವ ಸಂಭವಗಳಿವೆ. ಕೃಷಿ ಹಿನ್ನೆಲೆ ಇಲ್ಲದವರು ಕೂಡ ಕೃಷಿ ಭೂಮಿಯನ್ನು ಖರೀದಿಸಲು ಇರುವಂತಹ ನಿರ್ಬಂಧವನ್ನು ಸಡಿಲಿಸಿರುವುದು ಭೂ ಸುಧಾರಣಾ ಕಾಯ್ದೆಯ ಮೂಲ ಆಶಯಗಳಿಗೆ ವಿರುದ್ದವಾಗಿದೆ, ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ತಿದ್ದುಪಡಿಯಿಂದ ರೈತರು ಕೃಷಿ ಭೂಮಿಯ್ನು ಮಾರಾಟ ಮಾಡುವ ಒತ್ತಡಕ್ಕೆ ಒಳಗಾಗುತ್ತಾರೆ ಹಾಗೂ ಹೆಚ್ಚಿದ ಕೃಷಿ ಬಂಡವಾಳದಿಂದ ರೈತರು ಕೃಷಿ ಭೂಮಿಯನ್ನು ಖರೀದಿಸಲೂ ಮುಂದೆ ಬರುವುದಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

“ತಿದ್ದುಪಡಿಯು ರಾಜ್ಯದಲ್ಲಿ ಮತ್ತೆ ಜಮೀನ್ದಾರಿ ಪದ್ದತಿಯನ್ನು ಜಾರಿಗೆ ಬರುವಂತೆ ಮಾಡುತ್ತದೆ. ರೈತರಿಂದ ಬಿಡಿಗಾಸಿಗೆ ಕೃಷಿ ಭೂಮಿಯನ್ನು ಪಡೆಯುವ ಹುನ್ನಾರ ಇದು,” ಎಂದು ಅರ್ಜಿಯಲ್ಲಿ ದಾಖಲಿಸಲಾಗಿದೆ.

ಈ ಎಲ್ಲಾ ಕಾರಣಗಳನ್ನು ನೀಡಿ, ಅರ್ಜಿದಾರರಾದ ನಾಗರಾಜ ಶೇಷಪ್ಪ ಹೊನಗಲ್‌ ಅವರು, ಭೂ ಸುಧಾರಣ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯವು ಈಗ ಸರ್ಕಾರದಿಂದ ಉತ್ತವನ್ನು ಕೇಳಿದ್ದು, ಸರ್ಕಾರದ ಪ್ರತಿಕ್ರಿಯೆ ಏನಾಗಿರಬಹುದೆಂದು ಕಾದು ನೋಡಬೇಕಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com