ಕೋವಿಡ್ ಸಂಕಷ್ಟದ ಮಧ್ಯೆಯೂ ಬೆಂಗಳೂರಿನಲ್ಲಿ ಗರಿಗೆದರಿದ ಹಬ್ಬದ ವಾತಾವರಣ

ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಹೊಸತಾಗಿ ರೂಪಿಸಿರುವ ನಿಯಮಾವಳಿಗಳ ಪಾಲನೆಯೂ ಹಬ್ಬದ ಸಮಯದಲ್ಲಿ ಆಗಬೇಕಿದೆ.
ಕೋವಿಡ್ ಸಂಕಷ್ಟದ ಮಧ್ಯೆಯೂ ಬೆಂಗಳೂರಿನಲ್ಲಿ ಗರಿಗೆದರಿದ ಹಬ್ಬದ ವಾತಾವರಣ

ರಾಜ್ಯಾದ್ಯಂತ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರೋನಾ ಸಂಕಷ್ಟದಿಂದ ಈ ಬಾರಿಯ ಆಚರಣೆ ಹಿಂದೆಂದಿಗಿಂತಲೂ ಭಿನ್ನವಿದ್ದರೂ, ಜನರಲ್ಲಿ ಗಣೇಶನನ್ನು ಮತ್ತೆ ನೋಡುವ ಉತ್ಸಾಹ ಎದ್ದು ಕಾಣುತ್ತಿದೆ. ಮಾರುಕಟ್ಟೆಗಳಲ್ಲಿ ಗಣೇಶನ ವಿಗ್ರಹಗಳ ಖರೀದಿ ಜೋರಾಗಿಯೇ ಸಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವಿಗ್ರಹಗಳ ಬೆಲೆ ಮತ್ತು ಮಾರಾಟದಲ್ಲಿ ಸಾಕಷ್ಟು ವ್ಯತ್ಯಾಸವಿದ್ದರೂ, ಬೆಂಗಳೂರಿನ ಜನತೆ ವಿಗ್ರಹಗಳನ್ನು ಖರೀದಿಸುವಲ್ಲಿ ಹಿಂದೆ ಉಳಿದಿಲ್ಲ.

ಗಣೇಶನ ವಿಗ್ರಹಗಳ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರೊಬ್ಬರು, ಈ ಬಾರಿ ವಿಗ್ರಹಗಳ ಬೆಲೆ ಸಾಕಷ್ಟು ಏರಿಕೆಯಾಗಿದೆ, ಜೊತೆಯಲ್ಲಿ ಕೋವಿಡ್‌ ಸಂಕಷ್ಟದಿಂದ ಹಣಕಾಸಿನ ತೊಂದರೆಯೂ ಉಂಟಾಗಿದ್ದು, ಹಬ್ಬವನ್ನು ಸಾಮಾನ್ಯ ರೀತಿಯಲ್ಲಿ ಆಚರಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಹಲವು ರೀತಿಯ ನಿರ್ಬಂಧಗಳನ್ನು ಹೇರಿದ್ದರೂ, ಹಬ್ಬವನ್ನು ಆಚರಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. 11 ವರ್ಷಗಳಿಂದ ಗಣಪತಿಯನ್ನು ಪ್ರತಿಷ್ಟಾಪಿಸಿ ಪೂಜಿಸುತ್ತೇವೆ, ಅದರಂತೆ ಈ ಬಾರಿಯೂ ಹಬ್ಬದ ಆಚರಣೆ ನಡೆಯುತ್ತದೆ, ಎಂದು ಬೆಂಗಳೂರಿನ ನಿವಾಸಿಯಾದ ಮನು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಸರ್ಕಾರ ನಮ್ಮ ಒಳಿತಿಗಾಗಿ ಹಲವು ನಿಯಮಗಳನ್ನು ಹೇರಿದೆ. ನಾವು ಅದನ್ನು ಕೂಡಾ ಪಾಲಿಸಲೇ ಬೇಕು. ಅದರೊಂದಿಗೆ ಹಬ್ಬದ ಆಚರಣೆಯೂ ಅಗತ್ಯ,” ಎಂದು ಅವರು ಹೇಳಿದರು.

ಇನ್ನು ವಿಗ್ರಹ ಮಾರಾಟಗಾರರು ಕೂಡಾ ಈ ಬಾರಿಯ ಗಣೇಶ ಚತರ್ಥಿ ಅಷ್ಟೋಂದು ಲಾಭದಾಯವಾಗಿಲ್ಲ ಎಂದು ಹೇಳಿದ್ದಾರೆ. “ನೂರಾರು ಗಣೇಶನ ವಿಗ್ರಹಗಳು ತಯಾರಿದ್ದು, ಬೇಡಿಕೆ ಇಲ್ಲದಿರುವ ಕಾರಣದಿಂದ ಎಲ್ಲವೂ ದಾಸ್ತಾನುಗಳಲ್ಲೇ ಬಾಕಿ ಉಳಿದಿವೆ,” ವಿಗ್ರಹ ಮಾರಾಟಗಾರರಾದ ಪ್ರಭಾಕರ ಹೇಳಿದ್ದಾರೆ.

ಇನ್ನು ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಹೊಸತಾಗಿ ರೂಪಿಸಿರುವ ನಿಯಮಾವಳಿಗಳ ಪಾಲನೆಯೂ ಹಬ್ಬದ ಸಮಯದಲ್ಲಿ ಆಗಬೇಕಿದೆ. ಜನರ ಒಳಿತಿಗಾಗಿ ಹಾಗೂ ಸ್ವಾಸ್ಥ್ಯಕ್ಕಾಗಿ ರೂಪಿಸಿರುವ ಈ ನಿಯಾಮವಳಿಗಳ ಮಧ್ಯೆ ಈ ಬಾರಿ ಗಣಪ ಮತ್ತೆ ಬಂದಿದ್ದಾನೆ.

ಒಟ್ಟಿನಲ್ಲಿ, ಗಣೇಶ ಹಬ್ಬದ ಅದ್ದೂರಿ ಆಚರಣೆಗೆ ಈ ಬಾರಿ ಅವಕಾಶವಿಲ್ಲದಿದ್ದರೂ, ಹಬ್ಬದ ಸಡಗರ ಮಾತ್ರ ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಕಾಣಸಿಗುತ್ತದೆ. ಸಂಕಷ್ಟಹರ ವಿನಾಯಕ ಎಲ್ಲರಿಗೂ ಶುಭವನ್ನೇ ಮಾಡಲಿ ಎಂಬುದು ಪ್ರತಿಧ್ವನಿ ತಂಡದ ಆಶಯ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com