ಮಂಗಳೂರು ವಿಮಾನ ನಿಲ್ದಾಣ ಹುಸಿ ಬಾಂಬ್ ಕರೆ: ಆರೋಪಿ ಬಂಧನ
ರಾಜ್ಯ

ಮಂಗಳೂರು ವಿಮಾನ ನಿಲ್ದಾಣ ಹುಸಿ ಬಾಂಬ್ ಕರೆ: ಆರೋಪಿ ಬಂಧನ

ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ ಆರ್‌ ವಾಸುದೇವರಿಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇದೆಯೆಂದು ಹುಸಿ ಬೆದರಿಕೆ ಹಾಕಿದ್ದ, ಉಡುಪಿ ಪೊಲೀಸರ ನೆರವು ಪಡೆದು ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರತಿಧ್ವನಿ ವರದಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರುವುದಾಗಿ ಹುಸಿ ಕರೆ ಮಾಡಿ ಹೆದರಿಸಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮ ನಿವಾಸಿ 33 ವರ್ಷದ ವಸಂತ್‌ ಎಂದು ಗುರುತಿಸಲಾಗಿದೆ.

ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ ಆರ್‌ ವಾಸುದೇವರಿಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇದೆಯೆಂದು ಹುಸಿ ಬೆದರಿಕೆ ಹಾಕಿದ್ದ, ಉಡುಪಿ ಪೊಲೀಸರ ನೆರವು ಪಡೆದು ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬುಧವಾರ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ್ ರಾವ್ ಅವರಿಗೆ ಕರೆ ಮಾಡಿದ್ದ ವಸಂತ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಿದ್ದನು. ಈ ಬಗ್ಗೆ ವಾಸುದೇವ್ ರಾವ್ ಅವರು ಏರ್ ಪೋರ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆ ತಕ್ಷಣ ಕಾರ್ಯಾಚರಣೆಗೆ ಇಳಿದ ಸಿಐಎಸ್ಎಫ್ ಸಿಬ್ಬಂದಿ ಹಾಗೂ ಪೊಲೀಸರು ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತಪಾಸಣೆ ನಡೆಸಿದರು. ಆದರೆ ಯಾವುದೇ ಬಾಂಬ್ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿತ್ತು.

Click here to follow us on Facebook , Twitter, YouTube, Telegram

Pratidhvani
www.pratidhvani.com