ವಿಕಿಪೀಡಿಯಾ: ಕನ್ನಡದಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಅಂಬೇಡ್ಕರ್‌
ರಾಜ್ಯ

ವಿಕಿಪೀಡಿಯಾ: ಕನ್ನಡದಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಅಂಬೇಡ್ಕರ್‌

2020 ರ ಜನವರಿಯಿಂದ ಜೂನ್‌ವರೆಗಿನ ಅಂಕಿ ಅಂಶದ ಪ್ರಕಾರ ವೀಕಿಪೀಡಿಯಾ ಕನ್ನಡ ಆವೃತ್ತಿಯಲ್ಲಿ ಅಂಬೇಡ್ಕರ್‌ ಕುರಿತಾದ ಮಾಹಿತಿಯಿರುವ ಲೇಖನ 1,39,836 ಬಾರಿ ತೆರೆಯಲ್ಪಟ್ಟಿದೆ

ಪ್ರತಿಧ್ವನಿ ವರದಿ

ಬಹುತೇಕ ಇಂಟರ್‌ನೆಟ್‌ ಬಳಕೆದಾರರು ಮಾಹಿತಿಗಳನ್ನು ಹುಡುಕಲು ಮೊದಲ ಪ್ರಾಶಸ್ತ್ಯ ನೀಡುವುದು ವಿಕಿಪೀಡಿಯಾ ವೆಬ್‌ಸೈಟಿಗೆ. ಇಂಟರ್‌ನೆಟ್‌ ಸಲಕರಣೆಗಳಿಗೆ ಭಾರತ ಒಂದು ದೊಡ್ಡ ಮಾರುಕಟ್ಟೆ. ಹಾಗಾಗಿಯೇ ತನ್ನ ಬಳಕೆದಾರರನ್ನು ತೃಪ್ತಿಪಡಿಸಲು ವಿಕಿಪೀಡಿಯಾ ಭಾರತೀಯ ಸ್ಥಳೀಯ ಭಾಷೆಗಳಲ್ಲೂ ಮಾಹಿತಿ, ಲೇಖನಗಳನ್ನು ನೀಡುತ್ತಿವೆ. ಇತ್ತೀಚೆಗೆ ಭಾರತೀಯ ಭಾಷೆಗಳ ಆವೃತ್ತಿಯನ್ನು ಬಳಸುವ ಭಾರತೀಯರ ಪ್ರಮಾಣ ಹೆಚ್ಚುತ್ತಿದೆ.

ಲೈವ್‌ ಮಿಂಟ್‌ ನೀಡಿರುವ ವರದಿ ಪ್ರಕಾರ ವೀಕಿಪೀಡಿಯಾದಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಹುಡುಕಾಡಿರುವುದು ಡಾ. ಬಿ ಆರ್‌ ಅಂಬೇಡ್ಕರ್‌ ಕುರಿತಾದ ಮಾಹಿತಿಗಳನ್ನು. ಅಲ್ಲದೆ ಅಂಬೇಡ್ಕರ್‌ ಕುರಿತಾದ ಮಾಹಿತಿಗಳನ್ನು ಅತೀ ಹೆಚ್ಚು ಹುಡುಕಲ್ಪಟ್ಟಿರುವ ಸ್ಥಳೀಯ ಭಾಷೆಗಳಲ್ಲಿ ಕನ್ನಡವೇ ಮೊದಲ ಸ್ಥಾನದಲ್ಲಿದೆ.

Admin

2020 ರ ಜನವರಿಯಿಂದ ಜೂನ್‌ವರೆಗಿನ ಅಂಕಿ ಅಂಶದ ಪ್ರಕಾರ ವೀಕಿಪೀಡಿಯಾ ಕನ್ನಡ ಆವೃತ್ತಿಯಲ್ಲಿ ಅಂಬೇಡ್ಕರ್‌ ಕುರಿತಾದ ಮಾಹಿತಿಯಿರುವ ಲೇಖನ 1,39,836 ಬಾರಿ ತೆರೆಯಲ್ಪಟ್ಟಿದೆ. ಮಳೆಯಾಲಂ ಆವೃತ್ತಿಯಲ್ಲಿ ಕಥೆಗಾರ ವೈಕ್ಕಂ ಮಹಮ್ಮದ್‌ ಬಶೀರ್‌ ಅವರ ಬಗೆಗಿನ ಲೇಖನವನ್ನು ಅತೀ ಹೆಚ್ಚು ಓದಲಾಗಿದೆ. ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಕುರಿತಾದ ಲೇಖನ ಹೆಚ್ಚು ಓದಲ್ಪಟ್ಟಿದ್ದರೆ, ತಮಿಳುನಾಡಲ್ಲಿ ಕಾಮರಾಜರ್‌ ಕುರಿತಾದ ಲೇಖನ ಓದಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com