ಸಚಿವ ಶ್ರೀರಾಮುಲು ಕೋವಿಡ್‌ನಿಂದ ಗುಣಮುಖ
ರಾಜ್ಯ

ಸಚಿವ ಶ್ರೀರಾಮುಲು ಕೋವಿಡ್‌ನಿಂದ ಗುಣಮುಖ

ಬೌರಿಂಗ್ ಆಸ್ಪತ್ರೆಯಿಂದ ಸಚಿವ ಶ್ರೀರಾಮುಲು ಬಿಡುಗಡೆಗೊಂಡಿದ್ದು, ತಮಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಪ್ರತಿಧ್ವನಿ ವರದಿ

ಕರ್ನಾಟಕ ಆರೋಗ್ಯ ಮಂತ್ರಿ ಬಿ ಶ್ರೀರಾಮುಲು ಅವರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಆಗಸ್ಟ್‌ 9ರಂದು ಕೋವಿಡ್‌ ಸೋಂಕು ಧೃಢಪಟ್ಟ ನಂತರ ನಗರದ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಇಂದು (ಭಾನುವಾರ) ಅವರು ಬೌರಿಂಗ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ತಮಗೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಬೌರಿಂಗ್‌ ಆಸ್ಪತ್ರೆಯ ಸಿಬ್ಬಂದಿಗಳ ಪ್ರೀತಿ ಆರೈಕೆ ನನ್ನನ್ನು ಮೂಕನನ್ನಾಗಿಸಿದೆ ಎಂದು, ಬೌರಿಂಗ್‌ ಆಸ್ಪತ್ರೆಯ ಸಿಬ್ಬಂದಿಗಳನ್ನು ಹಾಡಿ ಹೊಗಳಿದ್ದಾರೆ.

ಇದೇ ವೇಳೆ, ಸಿಎಂ ಸೇರಿದಂತೆ ಎಲ್ಲರಿಗೂ ಸಚಿವ ಶ್ರಿರಾಮುಲು ಧನ್ಯವಾದ ಅರ್ಪಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com