ಪ್ರವಾದಿ ನಿಂದನೆ: ಶಾಸಕ ಶ್ರೀನಿವಾಸ್ ಮನೆ ಮೇಲೆ ಕಲ್ಲು ತೂರಾಟ
ರಾಜ್ಯ

ಪ್ರವಾದಿ ನಿಂದನೆ: ಶಾಸಕ ಶ್ರೀನಿವಾಸ್ ಮನೆ ಮೇಲೆ ಕಲ್ಲು ತೂರಾಟ

ನವೀನ್‌ ಪಿ ಎಂಬ ಯುವಕ ಪ್ರವಾದಿಯನ್ನು ನಿಂದಿಸುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವುದು ಮುಸ್ಲಿಮರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆಕ್ರೋಶಿತರು ಶಾಸಕರ ಮನೆ ಹಾಗೂ ಕಛೇರಿ ಮೇಲೆ ದಾಂಧಲೆ ನಡೆಸುವ ವೀಡಿಯೋ ಚಿತ್ರಣಗಳು ವೈರಲ್‌ ಆಗಿವೆ.

Pratidhvani Media

ಕಾಂಗ್ರೆಸ್‌ ಶಾಸಕ ಶ್ರೀನಿವಾಸ್ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಶಾಸಕರ ಮನೆ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ದಾಳಿ ನಡೆಸಿದ್ದಾರೆ.

ನವೀನ್‌ ಪಿ ಎಂಬ ಯುವಕ ಪ್ರವಾದಿಯನ್ನು ನಿಂದಿಸುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವುದು ಮುಸ್ಲಿಮರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆಕ್ರೋಶಿತರು ಶಾಸಕರ ಮನೆ ಹಾಗೂ ಕಛೇರಿ ಮೇಲೆ ದಾಂಧಲೆ ನಡೆಸುವ ವೀಡಿಯೋ ಚಿತ್ರಣಗಳು ವೈರಲ್‌ ಆಗಿವೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಶ್ರೀನಿವಾಸ ಅವರ ಮನೆಗೆ ಬಂದೋಬಸ್ತ್‌ ನೀಡಿದ್ದಾರೆ. ಡಿಸಿಪಿ ಶರಣಪ್ಪ ಕೆಜಿ ಹಳ್ಳಿ ಠಾಣೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಮಾಧಾನ ಮಾಡಿಕೊಳ್ಳುವಂತೆ ಹೇಳಿದ್ದಾರೆ.

ಈಗಾಗಲೇ ಆರೋಪಿ ನವೀನ್‌ ಅನ್ನು ಬಂಧಿಸಲಾಗಿದೆ.

ಈ ಕುರಿತಂತೆ ಟ್ವೀಟ್‌ ಮಾಡಿರುವ ಚಾಮರಾಜಪೇಟೆ ಶಾಸಕ ಝಮೀರ್‌ ಅಹ್ಮದ್‌, ಕಾವಲಭೈರಸಂದ್ರದಲ್ಲಿ ನಡೆಯುತ್ತಿರುವ ಘಟನೆ ದುರದೃಷ್ಟಕರ ಎಂದಿದ್ದಾರೆ. ಜನ ಆವೇಶಕ್ಕೆ ಒಳಗಾಗದೆ ಸಂಯಮದಿಂದ ಶಾಂತಿ ಕಾಪಾಡಬೇಕೆಂದು ವಿನಂತಿಸಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com