ಕೊಡಗು: ಭಾರೀ ಮಳೆಗೆ ಗುಡ್ಡ ಕುಸಿತ: ನಾಲ್ವರು ನಾಪತ್ತೆ
ರಾಜ್ಯ

ಕೊಡಗು: ಭಾರೀ ಮಳೆಗೆ ಗುಡ್ಡ ಕುಸಿತ: ನಾಲ್ವರು ನಾಪತ್ತೆ

ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ ಮತ್ತು ಇಬ್ಬರು ಅಚ೯ಕರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಕುಸಿದು ಬಿದ್ದಿರುವ ಬೆಟ್ಟದ ಮಣ್ಣಿನಡಿಯಲ್ಲಿ ಇವರು ಸಿಲುಕಿರಬಹುದೆಂದು ಶಂಕಿಸಲಾಗಿದೆ.

ಪ್ರತಿಧ್ವನಿ ವರದಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗು ತತ್ತರಿಸಿದೆ. ಜಿಲ್ಲೆಯ ತಲಕಾವೇರಿ ತೀರ್ಥಕ್ಷೇತ್ರದ ಬಳಿ ಭಾರೀ ಭೂಕುಸಿತ ಸಂಭವಿಸಿದೆ. ಸುಮಾರು 6 ಕಿಮೀ ಉದ್ದಕ್ಕೂ ಬ್ರಹ್ಮಗಿರಿ ಬೆಟ್ಟದ ಸಾಲು ಕುಸಿದಿದೆ ಎನ್ನಲಾಗಿದೆ.

ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ ಮತ್ತು ಇಬ್ಬರು ಅಚ೯ಕರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಕುಸಿದು ಬಿದ್ದಿರುವ ಬೆಟ್ಟದ ಮಣ್ಣಿನಡಿಯಲ್ಲಿ ಇವರು ಸಿಲುಕಿರಬಹುದೆಂದು ಶಂಕಿಸಲಾಗಿದೆ.

ಎರಡು ಕಾರು ಸೇರಿದಂತೆ 20 ಕ್ಕೂ ಹೆಚ್ಚು ಹಸು- ಜಾನುವಾರುಗಳು ಮಣ್ಣಿನಡಿಯಲ್ಲಿ ಹೂತು ಹೋಗಿದೆ. ತೀವ್ರ ಮಳೆ ಹಾಗೂ ಮಂಜಿನಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ಸ್ಥಳೀಯರು ಹೇಳಿದ್ದಾರೆ. ಭಾಗಮಂಡಲ- ತಲಕಾವೇರಿ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ರಕ್ಷಣಾ ಕಾರ್ಯಪಡೆಯ ವಾಹನಗಳು ತಲುಪಲು ಕೆಲಹೊತ್ತು ತಡೆಯಾಗಿತ್ತು. ಅದಾಗ್ಯೂ ಎನ್‌ಡಿಆರ್‌ಎಫ್‌ ತಂಡ ವಿಪತ್ತು ಸಂಭವಿಸಿದ ಸ್ಥಳಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com