ಕೋವಿಡ್-19: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಚೇತರಿಕೆಯ ಪ್ರಮಾಣ
ರಾಜ್ಯ

ಕೋವಿಡ್-19: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಚೇತರಿಕೆಯ ಪ್ರಮಾಣ

ರಾಜ್ಯದಲ್ಲಿ ಕರೋನಾ ಪರೀಕ್ಷೆ ನಡೆಸುವ ಸಂಖ್ಯೆ ಹೆಚ್ಚಾದ ಕಾರಣ ಕರೋನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಸರ್ಕಾರ ಹೇಳಿತ್ತು. ಕಳೆದ ತಿಂಗಳ ವರೆಗೆ ಚೇತರಿಸಿಕೊಂಡವರ ಪ್ರಮಾಣ ಒಟ್ಟು ಸೋಂಕಿತರ 30 ರಿಂದ 40 ಶೇಕಡಾದೊಳಗಿತ್ತು

ಪ್ರತಿಧ್ವನಿ ವರದಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಗಸ್ಟ್‌ 5 ರ ಸಂಜೆ ಹೊರಡಿಸಿದ ಕರೋನಾ ಸೋಂಕಿನ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 5,619 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 1,51,449 ಕ್ಕೇರಿದೆ. ಇದುವರೆಗೂ ರಾಜ್ಯದಲ್ಲಿ 74,679 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 73,958 ಸಕ್ರಿಯ ಕರೋನಾ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 1848 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 64,881 ತಲುಪಿದೆ. ಒಟ್ಟು 30,960 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕರೋನಾ ಸೋಂಕಿನಿಂದಾಗಿ ರಾಜ್ಯ ರಾಜಧಾನಿಯಲ್ಲಿ 1,163 ಮಂದಿ ಮರಣಹೊಂದಿದ್ದಾರೆ.

ರಾಜ್ಯದಲ್ಲಿ ಕರೋನಾ ಪರೀಕ್ಷೆ ನಡೆಸುವ ಸಂಖ್ಯೆ ಹೆಚ್ಚಾದ ಕಾರಣ ಕರೋನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಸರ್ಕಾರ ಹೇಳಿತ್ತು. ಕಳೆದ ತಿಂಗಳ ವರೆಗೆ ಚೇತರಿಸಿಕೊಂಡವರ ಪ್ರಮಾಣ ಒಟ್ಟು ಸೋಂಕಿತರ 30 ರಿಂದ 40 ಶೇಕಡಾದೊಳಗಿತ್ತು. ಕಳೆದ ವಾರದಿಂದ ಚೇತರಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಿದೆ. ಸದ್ಯ ಕರ್ನಾಟಕದಲ್ಲಿ 50 ಶೇಕಡಾಕ್ಕಿಂತ ಹೆಚ್ಚಿನ ಸೋಂಕಿತರು ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ.

05-08-2020 HMB Kannada (3).pdf
Preview

Click here to follow us on Facebook , Twitter, YouTube, Telegram

Pratidhvani
www.pratidhvani.com