ಕೋವಿಡ್‌ 19: ಲಾಕ್‌ಡೌನ್‌ ನಂತರವೂ ಬೆಂಗಳೂರಿನಲ್ಲಿ 2050 ಪ್ರಕರಣ ದಾಖಲು
ರಾಜ್ಯ

ಕೋವಿಡ್‌ 19: ಲಾಕ್‌ಡೌನ್‌ ನಂತರವೂ ಬೆಂಗಳೂರಿನಲ್ಲಿ 2050 ಪ್ರಕರಣ ದಾಖಲು

ಬೆಂಗಳೂರಿನ ನಂತರ ಉಡುಪಿಯಲ್ಲಿ 281, ಬೆಳಗಾವಿಯಲ್ಲಿ 219, ಕಲಬುರ್ಗಿಯಲ್ಲಿ 175, ದಕ್ಷಿಣ ಕನ್ನಡದಲ್ಲಿ 162, ಧಾರವಾಡದಲ್ಲಿ 158 ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಪ್ರತಿಧ್ವನಿ ವರದಿ

ಕಳೆದ 24 ಗಂಟೆಗಳಲ್ಲಿ 4764 ಹೊಸ ಕರೋನಾ ಪ್ರಕರಣಗಳು ಧೃಡಪಟ್ಟಿವೆ. 55 ರೋಗಿಗಳು ಕರೋನಾದಿಂದಾಗಿ ಮರಣಹೊಂದಿದ್ದು, 1780 ಸೋಂಕಿತರು ರೋಗದಿಂದ ಗುಣಮುಖರಾಗಿದ್ದಾರೆಂದು ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿದ ಅಂಕಿಅಂಶಗಳು ಹೇಳುತ್ತಿವೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,833ಕ್ಕೇರಿದೆ. ಈವರೆಗೆ 27,239 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಹೊಂದಿದ್ದು, 1519 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದ್ದು ಇಂದಿಗೆ ಆ ಸಂಖ್ಯೆ 47,069ಕ್ಕೆ ಏರಿಕೆಯಾಗಿದೆ. ಒಟ್ಟಿ 618 ಜನರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

22-07-2020 HMB English.pdf
Preview

ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಲಾಕ್‌ಡೌನ್‌ ನಂತರವೂ ಇಳಿಮುಖವಾಗಿಲ್ಲ. ಲಾಕ್‌ಡೌನ್‌ ಸಮಯದಲ್ಲೇ 10,000ದ ಗಡಿ ದಾಟಿದ್ದ ಸೋಂಕಿತರ ಸಂಖ್ಯೆಗೆ ಇಂದು 2050 ಸೋಂಕಿತರು ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ನಂತರ ಉಡುಪಿಯಲ್ಲಿ 281, ಬೆಳಗಾವಿಯಲ್ಲಿ 219, ಕಲಬುರ್ಗಿಯಲ್ಲಿ 175, ದಕ್ಷಿಣ ಕನ್ನಡದಲ್ಲಿ 162, ಧಾರವಾಡದಲ್ಲಿ 158 ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಅತೀ ಹೆಚ್ಚಿದ್ದು ಈ ವರೆಗೆ 735 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದಾದ ನಂತರ ಮೈಸೂರಿನಲ್ಲಿ 85, ಧಾರವಾಡದಲ್ಲಿ78, ದಕ್ಷಿಣ ಕನ್ನಡದಲ್ಲಿ 76 ಅತೀ ಹೆಚ್ಚು ಮರಣ ಪ್ರಮಾಣ ದಾಖಲಾಗಿದೆ.

ಕೋವಿಡ್‌ ಸೋಂಕು ರಾಜ್ಯಕ್ಕೆ ಪ್ರವೇಶಿಸಿದ ನಂತರ ಈವರೆಗೆ ಒಟ್ಟು 11,12,874 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಅವರಲ್ಲಿ 10,02,045 ಜನರಿಗೆ ನೆಗೆಟಿವ್‌ ರಿಸಲ್ಟ್‌ ಬಂದಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com