ಹೊಸ ವಿವಾದ ಹುಟ್ಟು ಹಾಕಿದ ನಿರಾಣಿ- ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಧರ್ಮದ ಚರ್ಚೆ
ರಾಜ್ಯ

ಹೊಸ ವಿವಾದ ಹುಟ್ಟು ಹಾಕಿದ ನಿರಾಣಿ- ಮತ್ತೆ ಮುನ್ನೆಲೆಗೆ ಬಂದ ಪ್ರತ್ಯೇಕ ಧರ್ಮದ ಚರ್ಚೆ

ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಹೆಸರು ಇಂದು ಬೆಳ್ಳಂಬೆಳಗ್ಗೆ ಭಾರೀ ಸದ್ದು ಮಾಡಿತ್ತು. ಬಿಜೆಪಿ ಶಾಸಕ ಮುರುಗೇಶ ನಿರಾಣಿ ಹಿಂದೂ ಧರ್ಮವನ್ನೇ ಅವಹೇಳನ ಮಾಡುವ ರೀತಿಯಲ್ಲಿ ಮಾಧ್ಯಮ ಗ್ರೂಪ್‌ಗೆ ಸಂದೇಶ ರವಾನಿಸಿದ್ದರು. ಮುರುಗೇಶ ನಿರಾಣಿ ಒಂದು ಎರಡು ದೇವರುಗಳಿಗೆ ಅವಮಾನ ಮಾಡಿರಲಿಲ್ಲ. ಪ್ರತಿಯೊಂದು ದೇವರ ಬಗ್ಗೆಯೂ ಅಸಹ್ಯವಾಗಿ ಸಂದೇಶ ಬರೆದಿದ್ದರು.

ಕೃಷ್ಣಮಣಿ

ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮ ಎನ್ನುವುದು ಹಾಟ್‌ ಕೇಕ್‌ ರೀತಿ ಸೇಲ್‌ ಆಗುವ ಸರಕಾಗಿತ್ತು. ಕಾಂಗ್ರೆಸ್‌ ಪಾಲಿಗೆ ನುಂಗಲು ಆಗದೆ ಹೊರಕ್ಕೆ ಉಗಿಯಲೂ ಆಗದಂತಾ ಬಿಸಿ ತುಪ್ಪ ಆಗಿತ್ತು. ಸಿದ್ದರಾಮಯ್ಯ ಹಿಂದೂ ಧರ್ಮವನ್ನು ವಿಭಜನೆ ಮಾಡಲು ಮುಂದಾಗಿದ್ದಾರೆ ಎಂದು ರಾಜ್ಯಾದ್ಯಂತ ಬಿಜೆಪಿ ಪ್ರಚಾರ ಮಾಡಿತ್ತು. ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಂಬಿಸುವಲ್ಲಿ ಯಶಸ್ವಿಯೂ ಆಗಿತ್ತು. ಅದರ ಪರಿಣಾಮವೇ ಕಾಂಗ್ರೆಸ್‌ ಚುನಾವಣೆಯಲ್ಲಿ ಸೋಲುವುದಕ್ಕೆ ಕಾರಣವಾಗಿತ್ತು. ಬಿಜೆಪಿ ಸರ್ಕಾರ ರಚನೆಯತ್ತ ದಾಪುಗಾಲು ಹಾಕುವಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಇದೀಗ ಬಿಜೆಪಿ ನಾಯಕರೇ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಮುನ್ನಡೆಯಲ್ಲಿ ಇದ್ದರೇ ಎನ್ನುವ ಅನುಮಾನ ಶುರುವಾಗಿದೆ. ಅದಕ್ಕೆ ನಿಖರ ಕಾರಣವೂ ಇದೆ.

ಬಿಜೆಪಿಯ ಮಾಜಿ ಸಚಿವ ಹಾಲಿ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಹೆಸರು ಇಂದು ಬೆಳ್ಳಂಬೆಳಗ್ಗೆ ಭಾರೀ ಸದ್ದು ಮಾಡಿತ್ತು. ಬಿಜೆಪಿ ಶಾಸಕ ಮುರುಗೇಶ ನಿರಾಣಿ ಹಿಂದೂ ಧರ್ಮವನ್ನೇ ಅವಹೇಳನ ಮಾಡುವ ರೀತಿಯಲ್ಲಿ ಮಾಧ್ಯಮ ಗ್ರೂಪ್‌ಗೆ ಸಂದೇಶ ರವಾನಿಸಿದ್ದರು. ಮುರುಗೇಶ ನಿರಾಣಿ ಒಂದು ಎರಡು ದೇವರುಗಳಿಗೆ ಅವಮಾನ ಮಾಡಿರಲಿಲ್ಲ. ಪ್ರತಿಯೊಂದು ದೇವರ ಬಗ್ಗೆಯೂ ಅಸಹ್ಯವಾಗಿ ಸಂದೇಶ ಬರೆದಿದ್ದರು. ಹಿಂದೂ ಧರ್ಮದ ಯಾವ ದೇವರನ್ನೂ ಬಿಡದೆ ವಾಗ್ದಾಳಿ ನಡೆಸಿದ್ದರು. ಈ ಸಂದೇಶ ವಾಟ್ಸಪ್‌ಗೆ ಗ್ರೂಪ್‌ಗೆ ಬರುತ್ತಿದ್ದ ಹಾಗೆ ಸಚಿವ ಸುರೇಶ್‌ ಕುಮಾರ್‌ ಗ್ರೂಪ್‌ನಿಂದ ಎಕ್ಸಿಟ್‌ ಆಗಿದ್ದರು. ಬಳಿಕ ಮುರುಗೇಶ್‌ ನಿರಾಣಿ ಕೂಡ ಗ್ರೂಪ್‌ನಿಂದ ಎಕ್ಸಿಟ್‌ ಆದರು. ಆದರೆ ಈ ಸಂದೇಶಕ್ಕೂ ಮುರುಗೇಶ್‌ ನಿರಾಣಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲಿಸುವುದಕ್ಕೂ ಸಂಬಂಧ ಇದೆಯಾ ಎನ್ನುವ ಅನುಮಾನ ಕಾಡಬಹುದು. ಆದರೆ, ಸಂಬಂಧ ಇದೆ.

ಮಾಧ್ಯಮಗಳಲ್ಲಿ ಒಂದು ಭಾಗ ಮಾತ್ರವೇ ಪ್ರಚಾರ ಆಗಿದ್ದು. ಇನ್ನೊಂದು ಭಾಗ ಮಾತ್ರ ಹಾಗೆಯೇ ಮುಚ್ಚಿ ಹೋಗಿದೆ. ಆ ಗ್ರೂಪ್‌ನ ಮೊದಲ ಭಾಗದಲ್ಲಿ ಮೂರ್ತಿಯನ್ನಿಟ್ಟು ಪೂಜಿಸುವ ಎಲ್ಲಾ ದೇವರುಗಳ ಬಗೆಗೂ ಅವಾಚ್ಯ ಶಬ್ಧಗಳನ್ನು ಬಳಸಲಾಗಿತ್ತು. ಆದರೆ, ಇನ್ನರ್ಧ ಭಾಗದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪಕನಾಗಿರುವ ಬಸವಣ್ಣನ ಬಗ್ಗೆ ಬರೆಯಲಾಗಿದೆ.

ವಿಶ್ವಗುರು ಅಪ್ಪ ಬಸವಣ್ಣ ಸೂಳೆಯನ್ನು ತಾಯಿಯಾಗಿ ಕಂಡ ಜಗತ್ತಿನ ಏಕೈಕ ದಾರ್ಶನಿಕರು. ದಯವೇ ಧರ್ಮವೆಂದರು. ಕಾಯಕವೇ ಕೈಲಾಸ ಎಂದರು. ಸ್ತ್ರೀಯರಿಗೆ ಗೌರವ, ಸಮಾನತೆ ತಂದರು, ಸ್ತ್ರೀ ಸೂತಕತೆಗೆ ವಿರೋಧಿಸಿದರು. ಸಕಲರೂ ಸಮಾನರೆಂದರು. ದೇಹವೇ ದೇಗುಲವೆಂದರು. ದಾಸೋಹದ ಹರಿಕಾರರು. ಕರಸ್ಥಲದಲ್ಲಿ ಚುಳುಕಾಗಿರಿಸಿದ ಇಷ್ಠಲಿಂಗದ ಪರಿಕಲ್ಪನೆಯಲ್ಲಿ ಬ್ರಹ್ಮಾಂಡವನ್ನೇ ಪೂಜಿಸಿ ವಿಶ್ವವೈಶಾಲ್ಯತೆಯನ್ನು ಜಗಕೆ ತೋರಿಸಿದವರು. ಅನುಭವ ಮಂಟಪದ ಸೃಷ್ಟಿಕರ್ತರು. ಶರಣು ಶರಣಾರ್ಥಿ ಎಂದರು. ಸಕಲ ಜೀವಾತ್ಮರಿಗೂ ಲೇಸಾಗಲೆಂದರು, ಮೂಢನಂಬಿಕೆ, ಪವಾಡ, ಕಂದಾಚಾರ, ಉಚ್ಛ ನೀಚ ಎನ್ನುವ ನಿಯಮ ವಿರೋಧಿಸಿದ ಧೀಮಂತ ಧೀರರು, ಜಗದ ಪ್ರಥಮ ಪ್ರಧಾನ ಮಂತ್ರಿಗಳು, ಸರಳತೆಯ ಮಹಾನ್‌ ಬುದ್ದಿವಂತ ವಚನ ಸಾಹಿತ್ಯಜ್ಞರು, ಅರ್ಥಶಾಸ್ತ್ರಜ್ಞರು, ಉಣಲು ಕಲಿಸಿದವರು, ಉಡಲು ಕಲಿಸಿದವರು, ಪ್ರಾಮಾಣಿಕ ದುಡಿಮೆಯೇ ನಾಡಿನ ಸಂಪತ್ ಅಭಿವೃದ್ದಿ ಎಂದವರು, ಗುರು ಲಿಂಗ ಜಂಗಮ ಷಟ್ ಸ್ಥಲ ಅಷ್ಠಾವರಣ ಅನೇಕ ಪ್ರಥಮಗಳ ಜನಕರು, ಪ್ರಜಾಸತ್ತಾತ್ಮಕ ಲಿಂಗಾಯತ ಧರ್ಮ ಸಂಸ್ಥಾಪಕರೂ ಆದ ವಿಶ್ವಗರು ಬಸವಣ್ಣನವರು ಎಂದು ಬರೆಯಲಾಗಿತ್ತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಲಿಂಗಾಯತ ಧರ್ಮದ ಪ್ರಮುಖ ಅಜೆಂಡ ಅಸಲಿಗೆ ಮೂರ್ತಿ ಪೂಜೆಯನ್ನು ವಿರೋಧಿವುದೇ ಆಗಿದೆ. ಬಸವಣ್ಣ ಲಿಂಗ ಪೂಜೆ ಮಾಡುವಂತೆ ಹೇಳಿದ್ದರೂ ಆದರೂ ಹಿಂದೂ ಧರ್ಮ ನಮ್ಮ ಮೇಲೆ ಪ್ರಭಾವ ಬೀರುವ ಮೂಲಕ ಮತ್ತೆ ಮೂರ್ತಿ ಪೂಜೆ ಮಾಡುವಂತೆ ಅನಿವಾರ್ಯತೆ ಸೃಷ್ಟಿಸಿದರು. ಹಿಂದೂ ಧರ್ಮದಿಂದ ಹೊರ ಹೋಗಿದ್ದ ಲಿಂಗಾಯಿತರನ್ನು ಸೆಳೆದುಕೊಳ್ಳುವಲ್ಲಿ ಹಿಂದೂ ಧರ್ಮ ಯಶಸ್ವಿಯಾಗಿತ್ತು ಎನ್ನುವ ಆರೋಪವಿದೆ. ಅದೇ ಕಾರಣಕ್ಕಾಗಿ ನಮಗೆ ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮ ಬೇಕಿದೆ ಎಂದು ಪ್ರತಿಪಾದಿಸುತ್ತಿದ್ದರು. ಈ ಸಂದೇಶವೂ ಅದೇ ಅಜೆಂಡಾವನ್ನು ಪ್ರತಿಪಾದಿಸುತ್ತಿದೆ. ಈ ಸಂದೇಶವನ್ನು ಬೇರೆ ಗ್ರೂಪ್‌ಗಳಿಗೆ ಕಳುಹಿಸಲು ಹೋದಾಗ ಅಚಾತುರ್ಯವಾಗಿ ಮಾಧ್ಯಮಗಳ ಗ್ರೂಪ್‌ಗೆ ಬಂದು ಅನರ್ಥವಾಗಿದೆ.

ಈ ಮೇಸೇಜ್‌ನಲ್ಲಿ ಹಿಂದೂ ದೇವರಿಗೆ ಅವಮಾನ ಮಾಡಿ ಕೇವಲ ಲಿಂಗಾಯತ ಧರ್ಮವನ್ನ ಸ್ಥಾಪಿಸಿದ ಬಸವಣ್ಣನ ಬಗ್ಗೆ ಮಾತ್ರ ಉತ್ತಮ ಮಾತುಗಳು ಇವೆ. ಹೀಗೆ ಇರುವ ಸಂದೇಶವನ್ನು ಬೇರೊಂದು ಗ್ರೂಪ್‌ಗೆ ಕಳುಹಿಸಲು ಮುಂದಾಗಿದ್ದಾರೆ ಎಂದರೆ ಆ ಸಂದೇಶಕ್ಕೆ ಸಮ್ಮತಿ ಇದೆ ಎಂದೇ ಅರ್ಥ. ಅಂದರೆ ಪ್ರತ್ಯೇಕ ಲಿಂಗಾಯತ ಧರ್ಮವನ್ನು ಬಹಿರಂಗವಾಗಿ ಬಿಜೆಪಿ ವಿರೋಧಿಸಿತ್ತು. ಆದರೂ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಂಬಲವಾಗಿದ್ದಾರೆ ಎನ್ನುವುದು ಅರ್ಥವಾಗುತ್ತಿದೆ.

ನಿರಾಣಿ ವರಸೆಗೆ ಸಿದ್ದು ಗುದ್ದು..!

ಮಾಜಿ ಸಚಿವ ಮುರುಗೇಶ ನಿರಾಣಿ ಹಿಂದೂ ದೇವರುಗಳನ್ನು ಅಪಮಾನಗೊಳಿಸಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಅಧಿಕಾರ ಹಣ ಜಾಸ್ತಿ ಆದಾಗ ಇಂಥಹ ಮಾತುಗಳು ಬರುತ್ತವೆ. ನಿರಾಣಿಯವರ ಕೃತ್ಯ ಉದ್ದಟತನದ ಪರಮಾವಧಿ. ಮೊದಲು ದೇವರಲ್ಲಿ ನಂಬಿಕೆ ಇದೆಯಾ..? ಇಲ್ವಾ..? ಎಂಬ ಬಗ್ಗೆ ಹೇಳಲಿ. ದೇವರಿದ್ದಾನೆ ಎಂಬುವುದು ಸರ್ವ ವಿಧಿತ. ದೇವರಿದ್ದಾನೆ ಯಾರು ದೇವರ ಬಗ್ಗೆ ನಂಬಿಕೆ ಇಟ್ಟುಕೊಂಡಿರುತ್ತಾರೋ ಅವರನ್ನ ಅವಹೇಳನ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮುರುಗೇಶ್‌ ನಿರಾಣಿ ಲಿಂಗಾಯತ ಹೋರಾಟಗಾರರ ಅಥವಾ ಲಿಂಗಾಯತರ ಗ್ರೂಪ್‌ಗೆ ಕಳುಹಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಆ ಬಳಿಕ ಅದರಿಂದ ಹೊರ ಬರುವ ರೀತಿಯಲ್ಲೂ ಎಡವಿದ್ದಾರೆ. ಪತ್ರಿಕಾ ಹೇಳಿಕೆ ಹಾಗೂ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಬೇರೆ ಬೇರೆ ಅಭಿಪ್ರಾಯ ಹೇಳಿಕೆ ಕೊಟ್ಟು ಉದ್ದೇಶ ಪೂರ್ವಕವಾಗಿಯೇ ಸಂದೇಶ ರವಾನಿಸಿದರೇ ಎನ್ನುವ ಅನುಮಾನ ಮೂಡುವಂತೆ ಮಾಡಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com