ಕರ್ನಾಟಕ: 60 ಸಾವಿರದ ಗಡಿ ದಾಟಿದ ಕರೋನಾ ಪ್ರಕರಣಗಳ ಸಂಖ್ಯೆ
ರಾಜ್ಯ

ಕರ್ನಾಟಕ: 60 ಸಾವಿರದ ಗಡಿ ದಾಟಿದ ಕರೋನಾ ಪ್ರಕರಣಗಳ ಸಂಖ್ಯೆ

ಪ್ರಸ್ತುತ ರಾಜ್ಯದಲ್ಲಿ 39,370 ಸಕ್ರಿಯ ಪ್ರಕರಣಗಳಿವೆ. 579 ಮಂದಿ ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ಸೋಂಕಿಗೆ ಇನ್ನೂ 91 ಮಂದಿ ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1331.

ಪ್ರತಿಧ್ವನಿ ವರದಿ

ರಾಜ್ಯ ಸರ್ಕಾರದ ನಿಯಂತ್ರಣದಿಂದ ಕರೋನಾ ಸೋಂಕು ಸಂಪೂರ್ಣ ಕೈ ತಪ್ಪಿ ಹೋಗಿದೆ. ದಿನವೊಂದಕ್ಕೆ 4 ಸಾವಿರದಂತೆ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗುತ್ತಿದೆ. ಬೆಂಗಳೂರು ನಗರವೊಂದರಲ್ಲೇ ದಿನಕ್ಕೆ 2 ಸಾವಿರದಂತೆ ಪ್ರಕರಣಗಳು ದಾಖಲೆಯಾಗುತ್ತಿವೆ. ಕರೋನಾ ಹೆಚ್ಚಿದ್ದ ಗುಜರಾತ್‌ ರಾಜ್ಯವನ್ನು ಮೀರಿ ಕರ್ನಾಟಕದ ಪ್ರಕರಣಗಳ ಸಂಖ್ಯೆ ಏರುತ್ತಿವೆ.

ಕರ್ನಾಟಕ ಆರೋಗ್ಯ ಇಲಾಖೆ ಇಂದು ಸಂಜೆ ಹೊರಡಿಸಿರುವ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಕಳೆದ 24 ತಾಸುಗಳಲ್ಲಿ 4,120 ಹೊಸ ಕರೋನಾ ಪ್ರಕರಣಗಳು ಕಂಡುಬಂದಿವೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 63,772 ತಲುಪಿದೆ. ಅದೇ ವೇಳೆ ರಾಜ್ಯದಲ್ಲಿ 1290 ಮಂದಿ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೂ 23,065 ಕರೋನಾ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಸ್ತುತ ರಾಜ್ಯದಲ್ಲಿ 39,370 ಸಕ್ರಿಯ ಪ್ರಕರಣಗಳಿವೆ. 579 ಮಂದಿ ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ಸೋಂಕಿಗೆ ಇನ್ನೂ 91 ಮಂದಿ ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1331.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2156 ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 31,777 ತಲುಪಿದೆ. ಬೆಂಗಳೂರು ಒಂದರಲ್ಲೇ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಕರೋನಾ ಸೋಂಕಿತರ ಅರ್ಧದಷ್ಟು ಸೋಂಕಿತರು ದಾಖಲಾಗಿದ್ದಾರೆ. ನಗರದಲ್ಲಿ ಇದುವರೆಗೂ ಕರೋನಾ ಸಂಬಂಧಿತ 667 ಮಂದಿ ಮೃತಪಟ್ಟಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com