ಗದಗ ಜಿಲ್ಲೆಯ ರೋಣದಲ್ಲಿ ಹಳದಿ ಕತ್ತುಪಟ್ಟಿಯ ತೋಳದ ಹಾವು ಪತ್ತೆ
ರಾಜ್ಯ

ಗದಗ ಜಿಲ್ಲೆಯ ರೋಣದಲ್ಲಿ ಹಳದಿ ಕತ್ತುಪಟ್ಟಿಯ ತೋಳದ ಹಾವು ಪತ್ತೆ

ತೋಳದ ಹಾವು ಕೆಲವು ಪ್ರದೇಶಗಳಲ್ಲಿ ಸಾಮಾನ್ಯ, ಆದರೆ ಹಳದಿ ಕತ್ತು ಪಟ್ಟಿಯ ತೋಳದ ಹಾವು ಗದಗ್ ನ ರೋಣದಂತಹ ಬಿಸಿಲೂರಿನಲ್ಲಿ ಪತ್ತೆಯಾಗಿದ್ದು, ಸಂಶೋಧಕರಲ್ಲಿ ಅಚ್ಚರಿ ಮೂಡಿಸಿದೆ. ಇದು ನಡೆದಿದ್ದು ರೋಣ ಪಟ್ಟಣದ ಹೊರವಲಯದಲ್ಲಿ. ಈ ತರಹದ ಹಾವುಗಳು ಮೊದಲು ಇಲ್ಲಿ ಕಂಡು ಬಂದಿಲ್ಲ. ಇದು ಮೊದಲಿಗೆ ಕಂಡು ಬಂದಿದ್ದು ಶಿವಪೇಟೆಯ ತೋಟದಲ್ಲಿ.

ಕೆ. ಶ್ರೀಕಾಂತ್

ತೋಳದ ಹಾವು ಕೆಲವು ಪ್ರದೇಶಗಳಲ್ಲಿ ಸಾಮಾನ್ಯ, ಆದರೆ ಹಳದಿ ಕತ್ತು ಪಟ್ಟಿಯ ತೋಳದ ಹಾವು ಗದಗ್ ನ ರೋಣದಂತಹ ಬಿಸಿಲೂರಿನಲ್ಲಿ ಪತ್ತೆಯಾಗಿದ್ದು, ಸಂಶೋಧಕರಲ್ಲಿ ಅಚ್ಚರಿ ಮೂಡಿಸಿದೆ. ಇದು ನಡೆದಿದ್ದು ರೋಣ ಪಟ್ಟಣದ ಹೊರವಲಯದಲ್ಲಿ. ಈ ತರಹದ ಹಾವುಗಳು ಮೊದಲು ಇಲ್ಲಿ ಕಂಡು ಬಂದಿಲ್ಲ. ಇದು ಮೊದಲಿಗೆ ಕಂಡು ಬಂದಿದ್ದು ಶಿವಪೇಟೆಯ ತೋಟದಲ್ಲಿ.

ಸಂಶೋಧಕ ಮಂಜುನಾಥ ನಾಯಕ ಹುಡುಕುತ್ತಿದ್ದುದು ಬೇರೆ ಏನೋ ಆದರೆ ಈ ಹಳದಿ ಕತ್ತು ಪಟ್ಟಿ ಹಾವು ಗೋಚರಿಸಿದಾಗ ಅವರೂ ಆಶ್ವರ್ಯ ಪಟ್ಟರು ಮತ್ತು ಸುಪ್ರಸಿದ್ಧ ಸಂಶೋಧಕರಿಗೆ ಅದರ ಫೋಟೊ ಕಳುಹಿಸಿದರು. ಈ ವಿಷಯವನ್ನು ಸಂಶೋಧಕರಲ್ಲಿ ಹಂಚಿಕೊಂಡಾಗ ಅವರೆಲ್ಲ ಅದನ್ನು ಡಾಕ್ಯುಮೆಂಟ್ ಮಾಡಿ ಎಂದು ಸಲಹೆ ನೀಡಿದರು.

ಆ ಕತೆಯನ್ನು ಮಂಜುನಾಥ ಹೇಳಿದ್ದು ಹೀಗೆ:

“ದಿನಾಂಕ 25.06.2020ರ ರಾತ್ರಿ 11:00ಗಂಟೆಗೆ ಎಂದಿನಂತೆ ನಾನು ನನ್ನ ಕೈತೋಟದಲ್ಲಿ ಕಪ್ಪೆ, ಹಲ್ಲಿ ಮತ್ತು ಜೇಡಗಳ ವೀಕ್ಷಣೆ ಮಾಡುತ್ತಿರುವಾಗ ತೋಳದ ಹಾವೊಂದು ಗೋಚರಿಸಿತು. ಅದರ ಕತ್ತಿನ ಪಟ್ಟಿಯ ಸಾಮಾನ್ಯ ತೋಳದ-ಹಾವಿಗಿಂತ ಭಿನ್ನವಾಗಿದ್ದನ್ನು ಗಮನಿಸಿ ಕುತೂಹಲದಿಂದ ನನ್ನ ಟಾರ್ಚನಿಂದ ಅದರ ಮೇಲೆ ಬೆಳಕನ್ನು ಬಿಟ್ಟು ಗಮನಿಸಿದೆ. ಅದರ ಕತ್ತಿನ ಮೇಲೆ ಹಳದಿ ಪಟ್ಟಿಯು ಸ್ಪಷ್ಟವಾಗಿ ಇರುವುದನ್ನು ಗಮನಿಸಿ ಛಾಯಚಿತ್ರಿಕರಿಸಿದೆ. ಇದು ಹಳದಿ ಕತ್ತುಪಟ್ಟಿಯ ತೋಳದ ಹಾವೆಂದು ಖಚಿತವಾಯಿತು. ಇದು ಕೂಲುಬ್ರಿಡೆ ಕುಟುಂಬಕ್ಕೆ ಸೇರಿದ ವಿಷರಹಿತ ಹಾವಾಗಿದ್ದು ವೈಜ್ಞಾಕವಾಗಿ ಲೈಕೋಡಾನ್ ಪ್ಲಾವಿಕೊಲಿಸ್ ಎನ್ನುವರು. ಈ ಜಾತಿಯ ಹಾವು ಸಂಪೂರ್ಣ ನಿಶಾಚರಿಯಾಗಿದ್ದು ಹಗಲು ಸಮಯದಲ್ಲಿ ಗೊಚರಿಸುವುದು ತೀರಾ ವಿರಳ. ಇದರ ಪ್ರಮುಖ ಆಹಾರ ಹಲ್ಲಿ ಮತ್ತು ಹಾವುರಾಣಿ. ಇದು ಅಂದಾಜು 40-46 ಸೆ.ಮಿ ಉದ್ದವಿದ್ದು ಈ ಜಾತಿಯ ಎರಡು ಹಾವುಗಳು ಇದೆ ವಾರದಲ್ಲಿ ರಾತ್ರಿ ಸಮಯದಲ್ಲಿ ಗೋಚರಿಸಿವೆ.

ಸಾಮಾನ್ಯವಾಗಿ ಹಳದಿ ಕತ್ತುಪಟ್ಟಿಯ ತೋಳದ ಹಾವು ಶುಷ್ಕ ಕಾಡಿನ ಬೆಟ್ಟಗಳ ಆವಸದಲ್ಲಿ ಹಂಚಿಕೆಯಾಗಿದ್ದು ಈ ಪ್ರಭೇದದ ಹಾವುಗಳೆಲ್ಲದರ ದೇಹದ ಮೇಲೆ ಹಳದಿ ಅಥವಾ ಬಿಳಿ ಪಟ್ಟಿಗಳಿರುತ್ತವೆ ಆದರೆ ಈ ಜಾತಿಯ ಹಾವಿನ ದೇಹದ ಮೇಲೆ ಕತ್ತನ್ನು ಹೊರತು ಪಡಿಸಿ ಯಾವುದೆ ಪಟ್ಟಿಗಳಿರುವುದಿಲ್ಲ. ಇದು ವಿಶ್ರಮಿಸುವಾಗ ತನ್ನದೇಹವನ್ನು ಸುರಳಿಯಾಕರದಲ್ಲಿ ಸುತ್ತಿಕೊಳ್ಳುತ್ತದೆ. ದಕ್ಷಿಣ ಭಾರತದ ಕಲ್ಲು ಬಂಡೆಗಳಿಂದ ಕೂಡಿದ ಬೆಟ್ಟಗಳ ಶುಷ್ಕ ಕಾಡು ಇವುಗಳ ಆವಾಸ. ಕರ್ನಾಟದಲ್ಲಿ ಇಲ್ಲಿವರೆಗೆ ಬಳ್ಳಾರಿ, ರಾಮನಗರ ಮತ್ತು ಬೆಂಗಳೂರಿನಲ್ಲಿಯು ಸಹ ದಾಖಲೆಯಾಗಿದ್ದು ಗದಗ ಜಿಲ್ಲೆಯಲ್ಲಿ ಇದೆ ಪ್ರಥಮ ಬಾರಿಗೆ ಈ ಅಪರೂಪದ ಹಾವಿನ ಇರುವಿಕೆಯನ್ನು ದಾಖಲಿಸಲಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡ, ಕಾಲಕಾಲೇಶ್ವರ ಮತ್ತು ಶಾಂತಗೇರಿ ಬೆಟ್ಟಗಳಲ್ಲಿ ಈ ಜಾತಿಯ ಹಾವುಗಳ ಆವಾಸವಿದ್ದು ಇಲ್ಲಿಂದ ನೈಸರ್ಗಿಕ ಬೆಟ್ಟಗುಡ್ಡಗಳಿರದ ರೋಣ ಪಟ್ಟಣದಲ್ಲಿ ಟಿಪ್ಪರ ಮತ್ತು ಲಾರಿಗಳಲ್ಲಿ ಮಣ್ಣು ಸಾಗಿಸುವ ಸಂದರ್ಭದಲ್ಲಿ ಈ ಹಾವು ಇಲ್ಲಿ ಹಂಚಿಕೆಯಾಗಿದೆ ಎಂಬುದು ಪ್ರಾಥಮಿಕ ಸಂಶೋಧನೆಯ ಊಹೆ, ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗಿದೆ”.

ಜಯಪ್ರಕಾಶ ಬಳಗಾನೂರ, ಇನ್ನೋರ್ವ ವನ್ಯ ಜೀವಿ ಸಂಶೋಧಕರ ಪ್ರಕಾರ, “ಹಳದಿ ಕತ್ತುಪಟ್ಟಿಯ ಹಾವು ರೋಣದಂತಹ ಪರಿಸರದಲ್ಲಿ ಕಂಡುಬರುವುದು ವಿರಳಾತಿ ವಿರಳ. ಇದು ಕಂಡು ಬಂದಿದ್ದು ಅನೇಕ ಸಂಶೋಧಕರಿಗೂ ಅಚ್ಚರಿ ಮೂಡಿಸಿದೆ. ಈ ತರಹದ ಸರೀಸೃಪಗಳು ಬೇರೆಡೆಯಿಂದ ಬಂದಿವೆ ಎಂಬುದನ್ನು ಊಹಿಸಲಾಗಿದೆ ಹಾಗೂ ಇದರ ಬಗ್ಗೆ ಅಧ್ಯಯನ್ನು ಮುಂದುವರಸಲಾಗಿದೆ. ಶಿರಸಿ, ಧಾರವಾಡ ಹಾಗೂ ಇನ್ನಿತರೆ ಪ್ರದೇಶಗಳಿಂದ ಸಂಶೋಧಕರು ಬರುತ್ತಿದ್ದಾರೆ”.

Click here to follow us on Facebook , Twitter, YouTube, Telegram

Pratidhvani
www.pratidhvani.com