ಸಚಿವ ಸಿ ಟಿ ರವಿಗೆ ತಗುಲಿದ ಕರೋನಾ ಸೋಂಕು
ರಾಜ್ಯ

ಸಚಿವ ಸಿ ಟಿ ರವಿಗೆ ತಗುಲಿದ ಕರೋನಾ ಸೋಂಕು

ಶುಕ್ರವಾರ ತಡರಾತ್ರಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ಸಚಿವರು ಮುಂಜಾಗ್ರತಾ ಕ್ರಮವಾಗಿ ಕರೋನಾ ಪರೀಕ್ಷೆ ನಡೆಸಿದ್ದರು. ಶನಿವಾರ ಸಂಜೆ‌‌ ಬಂದ ಪರೀಕ್ಷಾ ವರದಿಯಲ್ಲಿ ಕರೋನಾ ಪಾಸಿಟಿವ್ ದೃಢಪಟ್ಟಿದೆ.

ಪ್ರತಿಧ್ವನಿ ವರದಿ

ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ ಟಿ ರವಿಯರಿಗೆ ಕರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಶುಕ್ರವಾರ ತಡರಾತ್ರಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ಸಚಿವರು ಮುಂಜಾಗ್ರತಾ ಕ್ರಮವಾಗಿ ಕರೋನಾ ಪರೀಕ್ಷೆ ನಡೆಸಿದ್ದರು.

ಶನಿವಾರ ಸಂಜೆ‌‌ ಬಂದ ಪರೀಕ್ಷಾ ವರದಿಯಲ್ಲಿ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಸಚಿವ ಸಿ.ಟಿ ರವಿಯವರನ್ನು ಚಿಕ್ಕಮಗಳೂರಿನ ರಾಮನಹಳ್ಳಿಯ ಗೆಸ್ಟ್ ಹೌಸ್ ನಲ್ಲಿ ಹೋಂ ಕ್ವಾರೆಂಟೈನ್‌‌ನಲ್ಲಿರಿಸಲಾಗಿದೆ.

ಕಳೆದ ವಾರ ಚಿಕ್ಕಮಗಳೂರು,ಮೂಡಿಗೆರೆ ಹಾಗೂ ಮುಳ್ಳಯ್ಯನಗಿರಿ ಸೇರಿದಂತೆ ಹಲವು ಪ್ರವಾಸಿತಾಣಗಳಿಗೆ ಭೇಟಿಕೊಟ್ಟ ಸಚಿವ ಸಿ.ಟಿ ರವಿ, ಅಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮುಂತಾದ ಕರೋನಾ ಮುನ್ನೆಚ್ಚರಿಕಾ ಕ್ರಮಗಳಲ್ಲಿ ರಾಜಿ ಮಾಡಿಕೊಂಡಿರುವುದು ಭಾರೀ ವಿವಾದ ಸೃಷ್ಟಿಸಿತ್ತು.

Click here to follow us on Facebook , Twitter, YouTube, Telegram

Pratidhvani
www.pratidhvani.com