ಕೋವಿಡ್-19; ರಾಜ್ಯದ ಸೋಂಕಿತರ ಸಂಖ್ಯೆ 36,216
ರಾಜ್ಯ

ಕೋವಿಡ್-19; ರಾಜ್ಯದ ಸೋಂಕಿತರ ಸಂಖ್ಯೆ 36,216

ಈವರೆಗೆ 14,716 ಸೋಂಕಿತರು ಗುಣಮುಖರಾಗಿದ್ದು, 20,883 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿಧ್ವನಿ ವರದಿ

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 2798 ವ್ಯಕ್ತಿಗಳಿಗೆ ಕೋವಿಡ್‌-19 ಸೋಂಕು ಇರುವುದು ಪತ್ತೆಯಾಗಿದೆ. ಕೇವಲ ಬೆಂಗಳೂರು ಒಂದಲ್ಲೇ 1533 ಜನರಲ್ಲಿ ಸೋಂಕು ಇರುವುದು ತಿಳಿದುಬಂದಿದೆ. ಕರ್ನಾಟಕದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 36,216 ಕ್ಕೇರಿದೆ.

ಈವರೆಗೆ 14,716 ಸೋಂಕಿತರು ಗುಣಮುಖರಾಗಿದ್ದು, 20,883 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ವೈರಸ್‌ ರಾಜ್ಯದಲ್ಲಿ 613 ಜನರನ್ನು ಬಲಿ ಪಡೆದಿದ್ದರೆ, 504 ಮಂದಿಯನ್ನು ಐಸಿಯುನಲ್ಲಿ ದಾಖಲಿಸಲಾಗಿದೆ.

ಇಂದು ಬೆಂಗಳೂರಿನ ನಂತರ ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ಅಂದರೆ 186 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿರುವ ಒಟ್ಟು ಸೋಂಕಿತರ ಸಂಖ್ಯೆ 12793 ಕ್ಕೇರಿದೆ. ಉಳಿದೆಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅತೀ ಹೆಚ್ಚು ಸಾವುಗಳು (229) ದಾಖಲಾಗಿವೆ.

ರಾಜ್ಯ ರಾಜಧಾನಿಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ವಿಧಿಸುವುದಾಗಿ ಸರ್ಕಾರ ತೀರ್ಮಾನ ಕೈಗೊಂಡಿದೆ.

5_6075380528960241902.pdf
Preview

Click here to follow us on Facebook , Twitter, YouTube, Telegram

Pratidhvani
www.pratidhvani.com