ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ತೀರ್ಮಾನ- ಡಿಸಿಎಂ ಅಶ್ವಥ್ ನಾರಾಯಣ
ರಾಜ್ಯ

ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ತೀರ್ಮಾನ- ಡಿಸಿಎಂ ಅಶ್ವಥ್ ನಾರಾಯಣ

ಸೆಪ್ಟೆಂಬರ್ ಮೊದಲ‌ ದಿನದಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಮಾಡಲು ತೀರ್ಮಾನ ಮಾಡಲಾಗಿದ್ದು, ಸೆಪ್ಟಂಬರ್‌ನಲ್ಲಿ ಆನ್ ಲೈನ್ ತರಗತಿಗಳು ಶುರುವಾಗುತ್ತವೆ. ಹಾಗೂ ಅಕ್ಟೋಬರ್‌ನಿಂದ ಸಾಮಾನ್ಯ ತರಗತಿಗಳು ಆರಂಭವಾಗಲಿವೆ ಎಂದು ಡಿಸಿಎಂ ಅಶ್ವಥ್‌ ನಾರಾಯಣ ಹೇಳಿದ್ದಾರೆ.

ಕೃಷ್ಣಮಣಿ

ಕರೋನಾ ಸಂಕಷ್ಟಕ್ಕೆ ಸಿಲುಕಿ ಶೈಕ್ಷಣಿಕ ವರ್ಷ ಮುಗಿಸದೇ ರಜೆಗೆ ತೆರಳಿದ್ದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಗದಿಯಾಗಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣದಲ್ಲಿ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಆದರೂ 50 ಸಾವಿರ ಆನ್ಲೈನ್ (ONLINE) ಕ್ಲಾಸ್ ಮಾಡಿದ್ದು, ವೀಡಿಯೋ ಕಂಟೆಂಟ್ ಕೊಟ್ಟಿದ್ದೇವೆ. ವಿದ್ಯಾ ಸಂಸ್ಥೆಗಳು ಕೂಡ ಶಕ್ತಿಮೀರಿ ಕೆಲಸ ಮಾಡಿವೆ. ಡಿಪ್ಲೋಮಾ, ಇಂಜಿನಿಯರ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ವಿಶ್ವವಿದ್ಯಾಲಯಗಳ ಪರೀಕ್ಷೆ ಬರೆಯಬೇಕಾಗುತ್ತದೆ. ಉಳಿದವರಿಗೆ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಅಂತಿಮ ಪರೀಕ್ಷೆ ಜೊತೆಗೆ ಬ್ಯಾಕ್ ಲಾಗ್ ಪರೀಕ್ಷೆಗೂ ಅವಕಾಶ ಕಲ್ಪಿಸಲಾಗಿದ್ದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟಂಬರ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಪರೀಕ್ಷೆ ಮಾಡಲು ಅವಕಾಶ ನೀಡಲಾಗಿದೆ. 1, 2 ಇಂಜಿನಿಯರಿಂಗ್, ಡಿಪ್ಲೊಮಾ, ಪದವಿ ವರ್ಷದ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಅವರ ಸುರಕ್ಷತೆ‌ ದೃಷ್ಟಿಯಲ್ಲಿ ಇಟ್ಟುಕೊಂಡು, ಪರೀಕ್ಷೆ ರದ್ದು ಮಾಡುತ್ತಿದ್ದೇವೆ. ‌ಅವರ ಇಂಟರನಲ್ ಅಸ್ಸೆಸ್ಮೆಂಟ್ ಆಧರಿಸಿ ಮತ್ತು ಹಿಂದಿನ ಅವರ ಪರೀಕ್ಷೆ ಫಲಿತಾಂಶ ನೋಡಿಕೊಂಡು ಮುಂದಿನ ವರ್ಷಕ್ಕೆ ತೇರ್ಗಡೆಗೊಳಿಸಲಾಗುತ್ತದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.

ಸೆಪ್ಟೆಂಬರ್ ಮೊದಲ‌ ದಿನದಿಂದ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಮಾಡಲು ತೀರ್ಮಾನ ಮಾಡಲಾಗಿದ್ದು, ಸೆಪ್ಟಂಬರ್‌ನಲ್ಲಿ ಆನ್ ಲೈನ್ ತರಗತಿಗಳು ಶುರುವಾಗುತ್ತವೆ. ಹಾಗೂ ಅಕ್ಟೋಬರ್‌ನಿಂದ ಸಾಮಾನ್ಯ ತರಗತಿಗಳು ಆರಂಭವಾಗಲಿವೆ ಎಂದಿದ್ದಾರೆ. ಫೈನಲ್ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ಆನ್ಲೈನ್ (ONLINE) ತರಗತಿ ಮಾಡಲು ಅವಕಾಶ ಕೊಟ್ಟಿದ್ದೇವೆ. ಹಾಗೂ ತರಗತಿ ಮಾಡಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿರುರುವ ಡಿಸಿಎಂ, ಸಿಇಟಿ ಪರೀಕ್ಷೆ ಜುಲೈ 30 ಮತ್ತು 31 ಕ್ಕೆ ನಿಗದಿಯಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲದೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇನ್ನು PGCET (Karnataka Post Graduate Common Entrance Test) ಆಗಸ್ಟ್ 8 ಮತ್ತು 9 ರಂದು ನಿಗದಿಯಂತೆ ನಡೆಯಲಿದ್ದು, ಡಿಪ್ಲೋಮಾ ಸಿಇಟಿ ಆಗಸ್ಟ್ 9 ಕ್ಕೆ ನಡೆಯುತ್ತದೆ. ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಖಚಿತಪಡಿಸಿದ್ದಾರೆ.

ಸಿಇಟಿ ಪರೀಕ್ಷೆಗೂ ಸಹಾಯವಾಣಿ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಕುಲಪತಿಗಳು, ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ. ರಾಜ್ಯಪಾಲರ ಅನುಮತಿ ಹಾಗೂ ಯುಜಿಸಿ ಸಲಹೆ ಪಡೆದು ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಪ್ರತಿ ವಿವಿಯಲ್ಲೂ ಸಹಾಯವಾಣಿ ಪ್ರಾರಂಭ ಮಾಡುತ್ತೇವೆ. ಅಗತ್ಯ ಮಾಹಿತಿ ಸಂಗ್ರಹ ಮಾಡಲು. ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಲು ಸಹಾಯವಾಣಿ ಸಹಕಾರಿಯಾಗಲಿದೆ ಎಂದಿದ್ದಾರೆ. ಕೋವಿಡ್- 19 ಇಡೀ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಿದೆ. ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿ ಜೊತೆಗೆ ಅವರ ಭವಿಷ್ಯದ ಬಗ್ಗೆಯೂ ನಿರ್ಧರಿಸುವ ಸವಾಲು ಸರ್ಕಾರದ ಮುಂದಿತ್ತು. ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಯೂ ಕರೋನಾ ಸಂಕಷ್ಟದ ನಡುವೆ ನಡೆಸಲಾಗಿದೆ. ಅದರಿಂದ ಎಷ್ಟು ಜನರಿಗೆ ಸೋಂಕು ಬಂದಿದೆ ಎನ್ನುವ ಲೆಕ್ಕಾಚಾರ ಸರ್ಕಾರಕ್ಕೆ ಸಿಕ್ಕರೂ ಅದನ್ನು ಬಹಿರಂಗ ಮಾಡುವುದಿಲ್ಲ. ಆದರೆ ಪದವಿ ಪರೀಕ್ಷೆಗಳಿಂದ ಅಷ್ಟು ಸಮಸ್ಯೆ ಆಗುವುದಿಲ್ಲ ಎನ್ನುಬಹುದಾಗಿದೆ. ಕಾರಣವೇನೆಂದರೆ ಪದವಿ ವಿದ್ಯಾರ್ಥಿಗಳು ಜವಾಬ್ದಾರಿ ಹೊಂದಿರುತ್ತಾರೆ. ಆದರೆ ಶೈಕ್ಷಣಿಕ ವರ್ಷ ಆರಂಭದ ಬಗ್ಗೆ ಸಾಕಷ್ಟು ಗೊಂದಲವಿದೆ. ಯಾಕೆಂದರೆ ಈ ವರ್ಷಾಂತ್ಯಕ್ಕೆ ಕರೋನಾ ಸೋಂಕು ಉಲ್ಬಣವಾಗಲಿದೆ ಎನ್ನುವ ವರದಿಗಳು ಬರುತ್ತಿರುವಾಗಲೇ ಶೈಕ್ಷಣಿಕ ವರ್ಷ ಆರಂಭ ಮಾಡುತ್ತೇವೆ ಎಂದು ಘೋಷಣೆ ಮಾಡಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕವನ್ನು ಉಂಟು ಮಾಡುವಂತಿದೆ. ಆಗಸ್ಟ್ ಅಂತ್ಯದಲ್ಲಿ ಸೋಂಕಿನ ಲೆಕ್ಕಾಚಾರಗಳನ್ನು ನೋಡಿಕೊಂಡು ಸೆಪ್ಟಂಬರ್‌ನಲ್ಲಿ ಆನ್ಲೈನ್ (ONLINE) ತರಗತಿ ಆರಂಭಿಸಿ ಆ ಬಳಿಕ ಸೋಂಕಿನ ಪ್ರಮಾಣ ಇಳಿಕೆಯಾದರೆ ಅಕ್ಟೋಬರ್ನಲ್ಲಿ ರೆಗ್ಯುಲರ್ ತರಗತಿಯನ್ನು ನಡೆಸಲಾಗುವುದು ಎಂದು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಸೋಂಕಿನ ಪ್ರಮಾಣ ಇಳಿಕೆಯಾದರೆ ಕಾಲೇಜಲ್ಲಿ ತರಗತಿ, ಇಲ್ಲದಿದ್ದರೆ ಆನ್ಲೈನ್ (ONLINE) ತರಗತಿ ಅಷ್ಟೆ ಸೀಮಿತವಾಗಲಿದೆ. ಮುಂದಿನ ವರ್ಷದಿಂದ ಸೆಮಿಸ್ಟರ್ ಕೂಡ ರದ್ದಾಗುವ ಸಾಧ್ಯತೆಯಿದ್ದು, ವಾರ್ಷಿಕ ಪರೀಕ್ಷೆ ಮತ್ತೆ ಜಾರಿಯಾಗುವ ಸಂಭವವಿದೆ ಎನ್ನಲಾಗಿದೆ.

Govt GO.pdf.pdf
Preview

Click here to follow us on Facebook , Twitter, YouTube, Telegram

Pratidhvani
www.pratidhvani.com