ಕೋವಿಡ್-19: ಹಾಸಿಗೆ ಅಲಭ್ಯ; ಸಹಾಯವಾಣಿ ತೆರೆದ ಸರ್ಕಾರ
ರಾಜ್ಯ

ಕೋವಿಡ್-19: ಹಾಸಿಗೆ ಅಲಭ್ಯ; ಸಹಾಯವಾಣಿ ತೆರೆದ ಸರ್ಕಾರ

ಶುಕ್ರವಾರ 6 ಕರೋನಾ ರೋಗಿಗಳು ಹಾಸಿಗೆ ಅಲಭ್ಯದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದು, ಇನ್ನು ಮುಂದೆ ಹೀಗಾಗದಂತೆ ಸರ್ಕಾರ ಎಚ್ಚೆತ್ತಂತೆ ಭಾಸವಾಗುತ್ತಿದೆ. ಈ ಸಂಬಂಧ ಹೊಸ ಆದೇಶ ಹೊರಡಿಸಿರುವ ಕರ್ನಾಟಕ ಸರ್ಕಾರ ಕರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸದಂತೆ ಹೇಳಿದೆ.

ಪ್ರತಿಧ್ವನಿ ವರದಿ

ಕರೋನಾ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿರುವ ಪ್ರಕರಣ ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿದೆ. ದಿನವೊಂದಕ್ಕೆ ಸಾವಿರದಷ್ಟು ಹೊಸ ಕರೋನಾ ಪ್ರಕರಣಗಳು ಪತ್ತೆಯಾಗುತ್ತಿರುವ ಬೆಂಗಳೂರಿನಲ್ಲಿ ಚಿಕಿತ್ಸೆ ಎಲ್ಲರಿಗೂ ತಲುಪಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

ಶುಕ್ರವಾರ 6 ಕರೋನಾ ರೋಗಿಗಳು ಹಾಸಿಗೆ ಅಲಭ್ಯದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದು, ಇನ್ನು ಮುಂದೆ ಹೀಗಾಗದಂತೆ ಸರ್ಕಾರ ಎಚ್ಚೆತ್ತಂತೆ ಭಾಸವಾಗುತ್ತಿದೆ. ಈ ಸಂಬಂಧ ಹೊಸ ಆದೇಶ ಹೊರಡಿಸಿರುವ ಕರ್ನಾಟಕ ಸರ್ಕಾರ ಕರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸದಂತೆ ಹೇಳಿದೆ. ಯಾವುದಾದರೂ ಕರೋನಾ ಕೇರ್‌ ಸೆಂಟರ್‌ನಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಹಾಸಿಗೆ ನಿರಾಕರಿಸಲ್ಪಟ್ಟರೆ 1912 ಉಚಿತ ಸಹಾಯವಾಣಿಗೆ ಕರೆ ಮಾಡುವಂತೆ ಆದೇಶದಲ್ಲಿ ಹೇಳಿದೆ.

ಉಸಿರಾಟ ತೊಂದರೆ ಉಂಟಾದವರನ್ನು ಕೋವಿಡ್‌ ಕೇರ್‌ ಸೆಂಟರ್‌ ಅಥವಾ ಆಸ್ಪತ್ರೆಗೆ ತಕ್ಷಣ ದಾಖಲಿಸಬೇಕೆಂದು ಹೇಳಿರುವ ಸರ್ಕಾರ, ಸುರಕ್ಷಾ ಕವಚ 108 ಆಂಬ್ಯುಲೆನ್ಸ್‌ಗಳು ಕರೋನಾ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಆಸ್ಪತ್ರೆಗಳಿಗೆ ತಲುಪಿಸಲು ಸದಾ ಲಭ್ಯವಿರುವುದಾಗಿ ಹೇಳಿದೆ. ಯಾವುದೇ ವ್ಯಕ್ತಿ ಉಸಿರಾಟ ಸಂಬಂಧಿತ ತೊಂದರೆ ಬಗ್ಗೆ 108 ಗೆ ಕರೆ ಮಾಡಿದರೆ BBMP ಹಾಸಿಗೆ ದೊರೆಕಿಸುವ ತಂಡವನ್ನು ಸಂಪರ್ಕಿಸಬೇಕೆಂದು, ಅವರು ಸೂಚಿಸುವ ಕೇಂದ್ರಕ್ಕೆ ರೋಗಿಗಳನ್ನು ಕರೆದೊಯ್ಯುವಂತೆ ಆಂಬ್ಯುಲೆನ್ಸ್‌ ನಿರ್ವಾಹಕರಿಗೆ ಸೂಚಿಸಲಾಗಿದೆ.

ಉಸಿರಾಟ ತೊಂದರೆ ಇರುವ ರೋಗಿಗಳ ಗಂಟಲು ದ್ರವ ಪರೀಕ್ಷೆ ನಡೆಸಿ ಕರೋನಾ ಪಾಸಿಟಿವ್‌ ಕಂಡುಬಂದರೆ ತಕ್ಷಣವೇ ಚಿಕಿತ್ಸೆಗೆ ಒಳಪಡಿಸಬೇಕೆಂದು ಆದೇಶ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

5_6053374108672983367.pdf
Preview

Click here to follow us on Facebook , Twitter, YouTube, Telegram

Pratidhvani
www.pratidhvani.com