ಮೇ 22ರಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ.!
ರಾಜ್ಯ

ಮೇ 22ರಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ.!

ಪ್ರಾರಂಭಿಕವಾಗಿ ಮೈಸೂರು ಬೆಂಗಳೂರು ನಡುವೆ ಮಾತ್ರ ರೈಲ್ವೆ ಸೇವೆ ಆರಂಭವಾಗಲಿದೆ. ಬುಕ್ಕಿಂಗ್ ಮಾತ್ರ ಅವಕಾಶ ಇರುತ್ತದೆ. ಒಂದು ರೈಲಿನಲ್ಲಿ 14 ಕೋಚ್, ಒಂದು ಬೋಗಿಯಲ್ಲಿ 106 ಜನರಿಗೆ ಅವಕಾಶವಿರುತ್ತದೆ. ಕೇವಲ ರಿಸರ್ವ್ ಪ್ರಯಾಣಿಕರಿಗೆ ಮಾತ್ರ ಅವಕಾಶ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.

ಪ್ರತಿಧ್ವನಿ ವರದಿ

ಮೇ 22ರಿಂದ ಭಾನುವಾರ ಹೊರತುಪಡಿಸಿ ಪ್ರತಿದಿನವೂ ಮೈಸೂರು-ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. ಆದರೆ, ನಿಲ್ದಾಣದಲ್ಲಿ ಟಿಕೆಟ್‌ ವಿತರಣೆ ವ್ಯವಸ್ಥೆ ಇರೋದಿಲ್ಲ. ಸಾರ್ವಜನಿಕರು ಆನ್‌ಲೈನ್‌ ಮೂಲಕವೇ ಟಿಕೆಟ್ ಪಡೆಯ ಬೇಕಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು-ಮೈಸೂರು ವಿಶೇಷ ರೈಲು ಗಾಡಿ ಸಂಖ್ಯೆ 06503/06504 ಪ್ರತಿ ದಿನ ಬೆಳಿಗ್ಗೆ 9.20ಕ್ಕೆ ಬೆಂಗಳೂರು ಬಿಡಲಿದೆ. ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಲಿದೆ. ಇದೇ ರೈಲು ಪ್ರತಿ ದಿನ ಮಧ್ಯಾಹ್ನ 1.45ಕ್ಕೆ ಮೈಸೂರು ಬಿಟ್ಟು ಬೆಂಗಳೂರನ್ನು ಸಂಜೆ 5 ಗಂಟೆಗೆ ತಲುಪಲಿದೆ. ಬೆಂಗಳೂರು ಹಾಗೂ ಮೈಸೂರಿನ ನಡುವೆ ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿಗಳಲ್ಲಿ ರೈಲು ನಿಲುಗಡೆ ವ್ಯವಸ್ಥೆ ಇರಲಿದೆ.

ಲಾಕ್‌ ಡೌನ್‌ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲ್ವೇ ಸೇವೆ ಇದೀಗ ಪ್ರಾರಂಭಿಕವಾಗಿ ಮೈಸೂರು ಬೆಂಗಳೂರು ನಡುವೆ ಮಾತ್ರ ರೈಲ್ವೆ ಸೇವೆ ಆರಂಭವಾಗಲಿದೆ. ಬುಕ್ಕಿಂಗ್ ಮಾತ್ರ ಅವಕಾಶ ಇರುತ್ತದೆ. ಒಂದು ರೈಲಿನಲ್ಲಿ 14 ಕೋಚ್, ಒಂದು ಬೋಗಿಯಲ್ಲಿ 106 ಜನರಿಗೆ ಅವಕಾಶವಿರುತ್ತದೆ. ಕೇವಲ ರಿಸರ್ವ್ ಪ್ರಯಾಣಿಕರಿಗೆ ಮಾತ್ರ ಅವಕಾಶ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.

ರೈಲು ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿದರು. ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡಿರುವ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿದರು. ಸಂಸದ ಪ್ರತಾಪ್ ಸಿಂಹ, ರೈಲ್ವೆ ಡಿಜಿಎಂ ಅಪರ್ಣಾ ಗರ್ಗ್ ಕೂಡ ಸಾಥ್ ನೀಡಿದರು. ಇದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿದೆ.

Click here Support Free Press and Independent Journalism

Pratidhvani
www.pratidhvani.com