“ನಮೋ ವೈರಸ್” ಫೇಸ್ಬುಕ್ ಪೋಸ್ಟ್; ಕನ್ನಡ ಸಂಘಟನೆಯ ಜಿಲ್ಲಾಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಿದ ಪೋಲಿಸರು
ರಾಜ್ಯ

“ನಮೋ ವೈರಸ್” ಫೇಸ್ಬುಕ್ ಪೋಸ್ಟ್; ಕನ್ನಡ ಸಂಘಟನೆಯ ಜಿಲ್ಲಾಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಿದ ಪೋಲಿಸರು

ಗುಜರಾತಲ್ಲಿ ನಡೆದ ನಮಸ್ತೇ ಟ್ರಂಪ್‌ ಕಾರ್ಯಕ್ರಮದಲ್ಲಿ ಭಾಗಿಯಾದ ಶಿವಮೊಗ್ಗದ ಬಿಜೆಪಿ ಕಾರ್ಯಕರ್ತರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈವಾಗ ಇದಕ್ಕೆ ಏನೆಂದು ಹೆಸರಿಡಬೇಕು? “ನಮೋ ವೈರಸ್”? “ಬಿಜೆಪಿ ನಂಜು?” ʼಗುಜರಾತ್‌ ನಂಜು?” ಎಂದು ಫೆಸ್‌ಬುಕ್‌ನಲ್ಲಿ ರಾಘು ದೊಡ್ಡಮನಿ ಎಂಬವರು ಪೋಸ್ಟ್‌ ಮಾಡಿದ್ದರು.

ಪ್ರತಿಧ್ವನಿ ವರದಿ

ಈ ಕುರಿತು ರಾಘು ದೊಡ್ಡಮನಿಯವರ ಮೇಲೆ IPC ಸೆಕ್ಷನ್‌ 153, 505(1)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ವಿದ್ಯಾನಗರ ಪೋಲಿಸರು, ರಾಘು ಅವರನ್ನು ವಿಚಾರಣೆಗೆ ಹಾಜರಾಗಲು ನೋಟೀಸ್‌ ಜಾರಿ ಮಾಡಲಾಗಿದೆಯೆಂದು ದಾವಣಗೆರೆ ಜಿಲ್ಲಾ ಪೋಲಿಸ್‌ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಣಧೀರ ಪಡೆ ದಾವಣಗೆರೆಯ ಜಿಲ್ಲಾಧ್ಯಕ್ಷರಾಗಿರುವ ರಾಘು ದೊಡ್ಡಮನಿ ಕನ್ನಡಪರ ಹೋರಾಟದಲ್ಲಿ ಭಾಗಿಯಾಗಿದ್ದವರು ಅವರ ಮೇಲೆ ಪ್ರಕರಣ ದಾಖಲಿಸಿರುವ ಹಿಂದೆ ರಾಜಕೀಯ ಷಡ್ಯಂತ್ರವಿದೆಯೆಂದು ಕನ್ನಡಪರ ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Admin
Admin

Click here Support Free Press and Independent Journalism

Pratidhvani
www.pratidhvani.com