ಜಿಂಕೆ ಮಾಂಸ ಸಾಗಾಟಕ್ಕೆ ಸರ್ಕಾರಿ ಕೋವಿಡ್-19 ವಿಶೇಷ ಆಂಬುಲೆನ್ಸ್ ಬಳಕೆ.!
ರಾಜ್ಯ

ಜಿಂಕೆ ಮಾಂಸ ಸಾಗಾಟಕ್ಕೆ ಸರ್ಕಾರಿ ಕೋವಿಡ್-19 ವಿಶೇಷ ಆಂಬುಲೆನ್ಸ್ ಬಳಕೆ.!

ಹಲವಾರು ದಿನದಿಂದ ಈ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಸುದ್ದಿ ಅಧಿಕಾರಿಗಳಿಗೆ ಸಿಕ್ಕಿತ್ತಾದರೂ ಸಾಕ್ಷಿ ಸಮೇತ ಇವರನ್ನು ಬಂಧಿಸುವ ಲೆಕ್ಕ ಹಾಕಿಕೊಂಡಿದ್ದರು.

ಪ್ರತಿಧ್ವನಿ ವರದಿ

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರಿ ಕೋವಿಡ್-19‌ ವಿಶೇಷ ಆಂಬುಲೆನ್ಸ್‌ ದುರುಪಯೋಗಿಸಿಕೊಂಡು ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಆಂಬ್ಯುಲೆನ್ಸ್‌ ಚಾಲಕ ಹಾಗೂ ಇಬ್ಬರು ಸ್ಟಾಫ್‌ ನರ್ಸ್‌ಗಳನ್ನು ಬಂಧಿಸಲಾಗಿದೆ.

ಜಿಂಕೆ ಮಾಂಸವನ್ನು ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಾಗಾಟ ಮಾಡುತ್ತಿರುವಾಗ ಅರಣ್ಯ ಅಧಿಕಾರಿಗಳು ಈ ಜಾಲವನ್ನು ಸಾಕ್ಷಿಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಈ ಮಾಂಸವನ್ನು ಹಳ್ಳಿ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಹಲವಾರು ದಿನದಿಂದ ಈ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಸುದ್ದಿ ಅಧಿಕಾರಿಗಳಿಗೆ ಸಿಕ್ಕಿತ್ತಾದರೂ ಸಾಕ್ಷಿ ಸಮೇತ ಇವರನ್ನು ಬಂಧಿಸುವ ಲೆಕ್ಕ ಹಾಕಿಕೊಂಡಿದ್ದರು. ಅರಣ್ಯ ಸಂಚಾರಿದಳ ಡಿಸಿಎಫ್ಓ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಈ ಅಕ್ರಮ ಜಾಲವನ್ನು ಬೇಧಿಸಿದ್ದಾರೆ. ಬಂಧಿತರಿಂದ 5 ಕೆಜಿ ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ.

Click here Support Free Press and Independent Journalism

Pratidhvani
www.pratidhvani.com