ಕರ್ನಾಟಕ: 24 ಗಂಟೆಗಳಲ್ಲಿ 149 ಕರೋನಾ ಸೋಂಕು ಪತ್ತೆ
ರಾಜ್ಯ

ಕರ್ನಾಟಕ: 24 ಗಂಟೆಗಳಲ್ಲಿ 149 ಕರೋನಾ ಸೋಂಕು ಪತ್ತೆ

ಇದು ಈವರೆಗೆ ಕರ್ನಾಟಕದಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ಹೆಚ್ಚು ಹೀಗಾಗಿ, ಕರ್ನಾಟಕದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1395ಕ್ಕೇರಿದೆ.

ಪ್ರತಿಧ್ವನಿ ವರದಿ

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 149 ವ್ಯಕ್ತಿಗಳಿಗೆ ಕೋವಿಡ್‌-19 ಸೋಂಕು ಇರುವುದು ಪತ್ತೆಯಾಗಿದೆ. ಇದು ಈವರೆಗೆ ಕರ್ನಾಟಕದಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ಹೆಚ್ಚು ಹೀಗಾಗಿ, ಕರ್ನಾಟಕದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1395ಕ್ಕೇರಿದೆ.

ಈವರೆಗೆ 543 ಸೋಂಕಿತರು ಗುಣಮುಖರಾಗಿದ್ದು, 811 ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ವೈರಸ್‌ ರಾಜ್ಯದಲ್ಲಿ 40 ಜನರನ್ನು ಬಲಿ ಪಡೆದಿದ್ದರೆ, ಆರು ಮಂದಿಯನ್ನು ಐಸಿಯುನಲ್ಲಿ ದಾಖಲಿಸಲಾಗಿದೆ.

ಇಂದು ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 71 ಪ್ರಕರಣಗಳು ಪತ್ತೆಯಾಗಿದ್ದು, ದಾವಣಗೆರೆಯಲ್ಲಿ 22 ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದಂತೆ ಕಲಬುರಗಿಯಲ್ಲಿ 13, ಶಿವಮೊಗ್ಗ 10, ಬೆಂಗಳುರು ನಗರ 6, ಚಿಕ್ಕಮಗಳೂರು ಮತ್ತು ಬಾಗಲಕೋಟೆಯಲ್ಲಿ 5, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ 4, ಹಾಸನ 3 ಹಾಗೂ ವಿಜಯಪುರ, ಬೀದರ್‌, ಗದಗ, ಯಾದಗಿರಿ, ರಾಯಚೂರು ಮತ್ತು ಚಿತ್ರದುರ್ಗದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆಯೆಂದು ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Media Bulletin Covid 19_5.pdf
Preview

Click here Support Free Press and Independent Journalism

Pratidhvani
www.pratidhvani.com