ಸುಳ್ಳು ಸುದ್ದಿ ಪ್ರಕಟಣೆ: ಡೆಕ್ಕನ್ ಹೆರಾಲ್ಡ್ ಸ್ಪಷ್ಟೀಕರಣ
ರಾಜ್ಯ

ಸುಳ್ಳು ಸುದ್ದಿ ಪ್ರಕಟಣೆ: ಡೆಕ್ಕನ್ ಹೆರಾಲ್ಡ್ ಸ್ಪಷ್ಟೀಕರಣ

ಟ್ವಿಟರಿನಲ್ಲಿ ಈ ಕುರಿತು ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ ನೆಟ್ಟಿಗರು ಸುಳ್ಳು ಮಾಹಿತಿ ವರದಿ ಮಾಡಿದ್ದ ಪತ್ರಿಕೆಗಳನ್ನು ಟೀಕಿಸಿದ್ದರು. ಈ ಕುರಿತು “ಪ್ರತಿಧ್ವನಿ” ವಿಸ್ತೃತ ವರದಿ ತಯಾರಿಸಿತ್ತು.

ಫೈಝ್

ಭಟ್ಕಳದ ಬಾಲಕಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾದ ಕುರಿತು ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸುಳ್ಳು ಮಾಹಿತಿ ವರದಿ ಮಾಡಿತ್ತು. ವಾಸ್ತವಕ್ಕೆ ದೂರವಿದ್ದ ಡೆಕ್ಕನ್ ಹೆರಾಲ್ಡ್ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಎಡೆಮಾಡಿತ್ತು.

ಟ್ವಿಟರಿನಲ್ಲಿ ಈ ಕುರಿತು ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ ನೆಟ್ಟಿಗರು ಸುಳ್ಳು ಮಾಹಿತಿ ವರದಿ ಮಾಡಿದ್ದ ಪತ್ರಿಕೆಗಳನ್ನು ಟೀಕಿಸಿದ್ದರು. ಈ ಕುರಿತು “ಪ್ರತಿಧ್ವನಿ” ವಿಸ್ಕೃತ ವರದಿ ತಯಾರಿಸಿತ್ತು. ಪ್ರತಿಧ್ವನಿ ವರದಿ ಮಾಡಿದ ಬೆನ್ನಿಗೆ ಡೆಕ್ಕನ್ ಹೆರಾಲ್ಡ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸ್ಪಷ್ಟೀಕರಣ ನೀಡಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಭಟ್ಕಳದ ಹುಡುಗಿಯ ಕುರಿತು ತನ್ನ ಹಾಗೂ ಉಳಿದ ವೃತ್ತ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯು ಸತ್ಯಕ್ಕೆ ದೂರವಾಗಿತ್ತೆಂದು ಪರೋಕ್ಷವಾಗಿ ಒಪ್ಪಿಕೊಂಡಿದೆ. ಅಲ್ಲದೆ ಆಸ್ಪತ್ರೆಯ ಅಧಿಕೃತ ಹೇಳಿಕೆಯನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಟ್ವಿಟರ್ ಹ್ಯಾಷ್ಟ್ಯಾಗ್ ಟ್ರೆಂಡ್ ಶುರುಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಟ್ರೆಂಡ್ ಸೆಟರ್ಸ್ ಇಂಡಿಯಾದ ಇಮ್ರಾನ್ ಖಾನ್ “ಡೆಕ್ಕನ್ ಹೆರಾಲ್ಡ್ ಸಂಪಾದಕರು ನಮ್ಮನ್ನು ಸಂಪರ್ಕಿಸಿದ್ದಾರೆ, ಧೃಢೀಕರಿಸದ ಮಾಹಿತಿಯನ್ನು ವರದಿ ಮಾಡಿದಕ್ಕಾಗಿ ವರದಿಗಾರನನ್ನು ಕೆಲಸದಿಂದ ವಜಾ ಮಾಡುತ್ತಿದ್ದೇವೆ ಎಂದಿದ್ದಾರೆ. ಪ್ರಜಾವಾಣಿ, ವಿಜಯವಾಣಿ ಮತ್ತು ಸ್ಥಳೀಯ ಸುದ್ದಿ ಪತ್ರಿಕೆಗಳ ಪ್ರತಿಕ್ರಿಯೆ ಇನ್ನೂ ಬಂದಿಲ್ಲ, ನಾವು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ನಮ್ಮ ಅಭಿಯಾನಕ್ಕಾಗಿ ಕೈ ಜೋಡಿಸಿದವರಿಗೆಲ್ಲರಿಗೂ ದನ್ಯವಾದಗಳು” ಎಂದು ಹೇಳಿದ್ದಾರೆ.

Click here Support Free Press and Independent Journalism

Pratidhvani
www.pratidhvani.com