ಲಾಕ್‌ಡೌನ್‌ನಲ್ಲಿ ಎಲೆಮರೆಯ ಕಾಯಿಯಂತೆ ಉಳಿದ ಅಂಚೆ ಇಲಾಖೆ
ರಾಜ್ಯ

ಲಾಕ್‌ಡೌನ್‌ನಲ್ಲಿ ಎಲೆಮರೆಯ ಕಾಯಿಯಂತೆ ಉಳಿದ ಅಂಚೆ ಇಲಾಖೆ

ಲಾಕ್‌ಡೌನ್‌ ಸಮಯದಲ್ಲಿ ಅಂಚೆ ಇಲಾಖೆಯ ಕಾರ್ಯಕ್ಷಮತೆ ಎಷ್ಟಿತ್ತೆಂದರೆ, 9ಕೆಜಿಗಳ ಔಷಧಿಗಳನ್ನು ಕೇವಲ 24 ಗಂಟೆಗಳಲ್ಲಿ ಮಂಗಳೂರಿನಿಂದ ಬೆಳಗಾವಿಯ ಅಥಣಿಗೆ ತಲುಪಿಸಿದ್ದಾರೆ. ಶಿರಸಿಯಲ್ಲಿನ ಕ್ಯಾನ್ಸರ್ ರೋಗಿಯೊಬ್ಬರಿಗೆ ರಾತ್ರಿ ಸುಮಾರು 9.30ರವೇಳೆಗೆ ಅತ್ಯಗತ್ಯವಾದ ಔಷದಿಯನ್ನು ತಲುಪಿಸಿದ್ದಾರೆ.

ಲಾಯ್ಡ್‌ ಡಾಯಸ್

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾದ ಎಲ್ಲರಿಗೂ ಆಪದ್ಬಾಂದವರಂತೆ ಭಾಸವಾಗಿದ್ದು ಕರೋನಾ ವಾರಿಯರ್ಸ್‌. ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕುರಿತಂತೆ ದಿನವೊಂದಕ್ಕೆ ಹಲವಾರು ಸುದ್ದಿಗಳು ಪ್ರಕಟಗೊಂಡವು. ಆದರೆ, ಸದ್ದಿಲ್ಲದೇ, ಕರೋನಾ ವಾರಿಯರ್ಸ್‌ಗಳಾಗಿ ಶ್ರಮ ಪಡುತ್ತಿರುವ ಅಂಚೆ ಇಲಾಖೆಯ ಸಿಬ್ಬಂದಿಗಳು ಎಲೆಮರೆಯ ಕಾಯಿಯಂತೆ ಉಳಿದು ಹೋದದ್ದು ನಿಜಕ್ಕೂ ಬೇಸರದ ವಿಚಾರ.

ಕೋವಿಡ್‌-19ನ ಭಯ ಎಲ್ಲೆ ಆವರಿಸಿರುವ ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ನೌಕರರು ಕೂಡಾ ತಮ್ಮ ಜೀವವನ್ನು ಪಣಕ್ಕಿಟ್ಟು ಪಾರ್ಸೆಲ್‌ಗಳನ್ನು ವಿತರಿಸಿದ್ದಾರೆ. ಸರ್ಕಾರಿ ನೌಕರರೆಂದರೆ ಬೆಳಿಗ್ಗೆ 10 ಗಂಟೆಗೆ ಬಂದು ಸಂಜೆ 6ಗಂಟೆಗೆ ವಾಪಾಸ್ಸಾಗುವವರು ಎಂಬ ಅಪವಾದವನ್ನು ತೊಡೆದು ಹಾಕಿ ತಡರಾತ್ರಿಯಲ್ಲೂ ಅಗತ್ಯ ವಸ್ತುಗಳ ವಿತರಣೆಯನ್ನು ಮಾಡಿ ಮಾದರಿ ಎನಿಸಿಕೊಂಡಿದ್ದಾರೆ. 24 ಮಾರ್ಚ್ 2020ರಿಂದ 14 ಮೇ 2020ರವರೆಗೆ ಅಂಚೆ ಇಲಾಖೆಯಿಂದ ಒಟ್ಟು 33,500 ಪಾರ್ಸೆಲ್‌ಗಳ ವಿತರಣೆಯಾಗಿದೆ ಎಂದರೆ ಅದು ಸಾಮಾನ್ಯ ವಿಷಯವಲ್ಲ.

ಕರ್ನಾಟಕದ ಪೋಸ್ಟ್‌ ಮಾಸ್ಟರ್‌ ಜನರಲ್‌ ಚಾರ್ಲ್ಸ್‌ ಲೋಬೋ ಅವರು ಹೇಳುವ ಪ್ರಕಾರ ಲಾಕ್‌ಡೌನ್‌ಗಿಂತ ಮುಂಚೆ ಪ್ರತೀ ದಿನ ಸುಮಾರು 3500ರಷ್ಟು ಪಾರ್ಸೆಲ್‌ಗಳ ವಿತರಣೆಯಾಗುತ್ತಿತ್ತು. ಇವುಗಳಲ್ಲಿ E-Commerce ಪಾರ್ಸೆಲ್‌ಗಳ ಸಂಖ್ಯೆಯೇ ಹೆಚ್ಚಾಗಿರುತ್ತಿತ್ತು. ಆದರೆ, ಲಾಕ್‌ಡೌನ್‌ ನಂತರ E-Commerce ಪಾರ್ಸೆಲ್‌ಗಳು ಸಂಪೂರ್ಣವಾಗಿ ನಿಂತು ಹೋದರೂ, ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳ ಪಾರ್ಸೆಲ್‌ಗಳು ಆ ಸ್ಥಾನವನ್ನು ತುಂಬಿವೆ ಎಂದು ಹೇಳಿದ್ದಾರೆ.

ಕೋವಿಡ್‌ - 19 ವಿರುದ್ದದ ಹೋರಾಟದಲ್ಲಿ ಅತ್ಯಗತ್ಯವಾಗಿರುವ ವೈದ್ಯಕೀಯ ಉಪಕರಣಗಳಾದ ವೆಂಟಿಲೇಟರ್‌ಗಳು, ಗ್ಲೌಸ್‌, ಮಾಸ್ಕ್‌ ಮತ್ತು ಇತರ ಔಷಧಗಳನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ವಿತರಿಸಿದ್ದಾರೆ. ಪ್ರತಿದಿನವೂ ಸುಮಾರು ಒಂದು ಸಾವಿರದಷ್ಟು ವೈದ್ಯಕೀಯ ಉಪಕರಣಗಳನ್ನು ಯಾವುದೇ ತಡವಿಲ್ಲದೇ ವಿತರಿಸುತ್ತಿದ್ದರು ಈ ಕರೋನಾ ವಾರಿಯರ್ಸ್‌. ವೈದ್ಯಕೀಯ ಉಪಕರಣಗಳ ಜೊತೆಗೆ ದಿನವೊಂದಕ್ಕೆ ಸರಾಸರಿಯಾಗಿ ಇವರು ವಿತರಿಸುತ್ತಿದ್ದ ಇತರೆ ಪಾರ್ಸೆಲ್‌ಗಳ ಒಟ್ಟು ಸಂಖ್ಯೆ ಸುಮಾರು 2,500.

ಲಾಕ್‌ಡೌನ್‌ ಆದ ನಂತರ ಮೇ 14ರವರೆಗೆ ಸುಮಾರು 22,500 ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳು ಹಾಗೂ ಸುಮಾರು 11,000ದಷ್ಟು ಇತರೆ ಪಾರ್ಸೆಲ್‌ಗಳನ್ನು ಅಂಚೆ ಇಲಾಖೆಯಿಂದ ವಿತರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಬೆಂಗಳೂರಿನಲ್ಲಿ ವಿತರಿಸಲಾಗಿದೆ. ಸುಮಾರು 10,000ದಷ್ಟು ಔಷಧಿಗಳನ್ನು ಕರ್ನಾಟಕದ ಮೂಲೆ ಮೂಲೆಗೆ ತಲುಪಿಸಲಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ನಾವು ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಹಾಗೂ ವೇಗವಾಗಿ ಪಾರ್ಸೆಲ್‌ಗಳನ್ನು ವಿತರಿಸಿದ್ದೇವೆ

ಚಾರ್ಲ್ಸ್‌ ಲೋಬೋ, ಪೋಸ್ಟ್‌ ಮಾಸ್ಟರ್‌ ಜನರಲ್‌, ಕರ್ನಾಟಕ

ಚಾರ್ಲ್ಸ್‌ ಲೋಬೋ, ಪೋಸ್ಟ್‌ ಮಾಸ್ಟರ್‌ ಜನರಲ್‌, ಕರ್ನಾಟಕ
ಚಾರ್ಲ್ಸ್‌ ಲೋಬೋ, ಪೋಸ್ಟ್‌ ಮಾಸ್ಟರ್‌ ಜನರಲ್‌, ಕರ್ನಾಟಕ

ಲಾಕ್‌ಡೌನ್‌ ಸಮಯದಲ್ಲಿ ಅಂಚೆ ಇಲಾಖೆಯ ಕಾರ್ಯಕ್ಷಮತೆ ಎಷ್ಟಿತ್ತೆಂದರೆ, 9ಕೆಜಿಗಳ ಔಷಧಿಗಳನ್ನು ಕೇವಲ 24 ಗಂಟೆಗಳಲ್ಲಿ ಮಂಗಳೂರಿನಿಂದ ಬೆಳಗಾವಿಯ ಅಥಣಿಗೆ ತಲುಪಿಸಿದ್ದಾರೆ. ಶಿರಸಿಯಲ್ಲಿನ ಕ್ಯಾನ್ಸರ್‌ ರೋಗಿಯೊಬ್ಬರಿಗೆ ರಾತ್ರಿ ಸುಮಾರು 9.30ರವೇಳೆಗೆ ಅತ್ಯಗತ್ಯವಾದ ಔಷದಿಯನ್ನು ತಲುಪಿಸಿದ್ದಾರೆ. ಶಿವಮೊಗ್ಗದಿಂದ ಉಡುಪಿಗೆ ಈವರೆಗೆ 200 ರಕ್ತದ ಬಾಟಲಿಗಳನ್ನು ವಿತರಿಸಲಾಗಿದೆ. ಇವಷ್ಟೇ ಅಲ್ಲದೇ, ಇನ್ನೂ ಹಲವಾರು ರೀತಿಯ ಘಟನೆಗಳಿಗೆ ಅಂಚೆ ಇಲಾಖೆ ಸಾಕ್ಷಿಯಾಗಿದೆ.

9ಕೆಜಿಗಳ ಔಷಧಿಗಳನ್ನು ಕೇವಲ 24 ಗಂಟೆಗಳಲ್ಲಿ ಮಂಗಳೂರಿನಿಂದ ಬೆಳಗಾವಿಯ ಅಥಣಿಗೆ ತಲುಪಿಸಿರುವುದು
9ಕೆಜಿಗಳ ಔಷಧಿಗಳನ್ನು ಕೇವಲ 24 ಗಂಟೆಗಳಲ್ಲಿ ಮಂಗಳೂರಿನಿಂದ ಬೆಳಗಾವಿಯ ಅಥಣಿಗೆ ತಲುಪಿಸಿರುವುದು

ನಿಜವಾಗಿಯೂ, ಇವರ ಕಾರ್ಯಕ್ಷಮತೆಗೆ ಮತ್ತು ದಕ್ಷತೆಗೆ ಸಲಾಂ ಹೇಳಲೇ ಬೇಕು. ಕರೋನಾ ಸೋಂಕು ಹರಡುವ ಭೀತಿಯ ನಡುವೆಯೂ, ಯಾವ ಅಡೆತಡೆಗಳಿಗೂ ಅಂಜದೇ ಕಾರ್ಯ ನಿರ್ವಹಿಸಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ.

Click here Support Free Press and Independent Journalism

Pratidhvani
www.pratidhvani.com