ಕರೋನಾ ವಾರಿಯರ್ಸ್‌ಗಳಲ್ಲಿ ಕರೋನಾ ಸೋಂಕು ಪತ್ತೆ
ರಾಜ್ಯ

ಕರೋನಾ ವಾರಿಯರ್ಸ್‌ಗಳಲ್ಲಿ ಕರೋನಾ ಸೋಂಕು ಪತ್ತೆ

ಪೋಲೀಸ್ ಸಿಬ್ಬಂದಿಯಲ್ಲಿ ಕರೋನಾ ಕಂಡುಬಂದ ಹಿನ್ನಲೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದ ಠಾಣೆಯ ಸಿಬ್ಬಂದಿಗಳನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ

ಪ್ರತಿಧ್ವನಿ ವರದಿ

ಕರೋನಾ ವಾರಿಯರ್ಸ್‌ನಲ್ಲೂ ಕರೋನಾ ಸೊಂಕು ಕಂಡು ಬರುತ್ತಿದ್ದು, ದಾವಣಗೆರೆಯಲ್ಲಿ ಸಂಚಾರಿ ಪೋಲಿಸ್‌ ಠಾಣೆಯ ಸಿಬ್ಬಂದಿಯಲ್ಲಿ ಕರೋನಾ ಪಾಸಿಟಿವ್‌ ಪತ್ತೆಯಾಗಿದೆ. ಪೋಲೀಸ್‌ ಸಿಬ್ಬಂದಿಯಲ್ಲಿ ಕರೋನಾ ಕಂಡುಬಂದ ಹಿನ್ನಲೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದ ಠಾಣೆಯ ಸಿಬ್ಬಂದಿಗಳನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಕಂಟೈನ್‌ಮೆಂಟ್‌ ಝೋನ್‌ನಲ್ಲಿ ವಾಸಿಸುತ್ತಿದ್ದ ಸಂಬಂಧಪಟ್ಟ ಪೋಲಿಸ್‌ ಸಿಬ್ಬಂದಿಯ ಕುಟುಂಬವನ್ನೂ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಈ ಹಿಂದೆ ಪಾಷಾ ನಗರದ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್‌ನಲ್ಲಿಯೂ ಕರೋನಾ ಪಾಸಿಟಿವ್‌ ಪತ್ತೆಯಾಗಿತ್ತು. ಕರೋನಾ ವಾರಿಯರ್ಸ್‌ಗಳಲ್ಲೂ ಕರೋನಾ ಸೋಂಕು ಕಂಡು ಬರುತ್ತಿರುವುದು ನಿಜಕ್ಕೂ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ದಕ್ಷಿಣ ಕನ್ನಡದಲ್ಲಿ ಕರೋನಾ ಸೋಂಕಿಗೆ ಐದನೇ ಬಲಿ

ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕರೋನಾ ರೋಗಿ ಸಂಖ್ಯೆ P-507 ಇಂದು ಮೃತಪಟ್ಟಿದ್ದಾರೆ. ಒಟ್ಟು ದಕ್ಷಿಣ ಕನ್ನಡದಲ್ಲಿ ಕರೋನಾದಿಂದಾಗಿ ಅಸು ನೀಗಿದವರ ಸಂಖ್ಯೆ ಐದಕ್ಕೇರಿದ್ದಾರೆ. 80 ವರ್ಷ ವಯಸ್ಸಿನ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

Click here Support Free Press and Independent Journalism

Pratidhvani
www.pratidhvani.com