ಕೋವಿಡ್-19:‌ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ
ರಾಜ್ಯ

ಕೋವಿಡ್-19:‌ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ

ರಾಜ್ಯದಲ್ಲಿ ಸಕ್ರಿಯವಾಗಿರುವ 474 ಪ್ರಕರಣಗಳಲ್ಲಿ 464 ಮಂದಿ ಸೋಂಕಿತರು ಕರೋನಾ ಪೀಡಿತರಿಗೆ ಮೀಸಲಿಟ್ಟ ಸಾಮಾನ್ಯ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.

ಪ್ರತಿಧ್ವನಿ ವರದಿ

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 34 ಹೊಸ ಕೋವಿಡ್‌ ಪ್ರಕರಣಗಳು ಕಂಡುಬಂದಿದ್ದು ಇದರಿಂದಾಗಿ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 959 ಕ್ಕೇರಿದೆ. ಇಂದು ಇಬ್ಬರು ಕರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡದಲ್ಲಿ ರೋಗಿ ಸಂಖ್ಯೆ ಪ-536 ಮತ್ತು ಕಲಬುರಗಿಯಲ್ಲಿ ರೋಗಿ ಸಂಖ್ಯೆ ಪಿ-927 ಅಸುನೀಗಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದಾಗಿ ಅಸುನೀಗಿದವರ ಸಂಖ್ಯೆ 33 ತಲುಪಿದೆ. ಇದುವರೆಗೂ 451 ಸೋಂಕಿತರು ರೋಗದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಸಕ್ರಿಯವಾಗಿರುವ 474 ಪ್ರಕರಣಗಳಲ್ಲಿ 464 ಮಂದಿ ಸೋಂಕಿತರು ಕರೋನಾ ಪೀಡಿತರಿಗೆ ಮೀಸಲಿಟ್ಟ ಸಾಮಾನ್ಯ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.

ಬೀದರಿನಲ್ಲಿ 12 ಪ್ರಕರಣಗಳು ಪತ್ತೆಯಾಗಿದ್ದು ಕಲಬುರಗಿಯಲ್ಲಿ 8 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ, ಉತ್ತರಕನ್ನಡ, ದಾವಣಗೆರೆ ಹಾಗೂ ವಿಜಯಪುರದಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಮತ್ತು ಬಳ್ಳಾರಿಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿದ ಕೋವಿಡ್‌-19 ಅಂಕಿ ಅಂಶಗಳ ಪ್ರಕಟನೆಯಲ್ಲಿ ತಿಳಿಸಿದೆ.

5_6188151758674461034.pdf
Preview

Click here Support Free Press and Independent Journalism

Pratidhvani
www.pratidhvani.com