ಜುಲೈ ತಿಂಗಳ ಅಂತ್ಯಕ್ಕೆ CET ಪರೀಕ್ಷೆ ನಿಗದಿ
ರಾಜ್ಯ

ಜುಲೈ ತಿಂಗಳ ಅಂತ್ಯಕ್ಕೆ CET ಪರೀಕ್ಷೆ ನಿಗದಿ

ಲಾಕ್‌ಡೌನ್‌ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ CET ಪರೀಕ್ಷೆಗಳಿಗೆ ಕೊನೆಗೂ ದಿನಾಂಕ ನಿಗದಿ ಪಡಿಸಲಾಗಿದೆ.

ಪ್ರತಿಧ್ವನಿ ವರದಿ

ಕರ್ನಾಟಕದಲ್ಲಿ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು (CET) ಜುಲೈ 30 ಮತ್ತು 31 ರಂದು ನಡೆಸಲಾಗುವುದೆಂದು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. C N ಅಶ್ವಥ್‌ ನಾರಾಯಣ್‌ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ.

ಎಪ್ರಿಲ್‌ 22 ರಿಂದ ಎಪ್ರಿಲ್ 24 ರವರೆಗೆ ನಿಗದಿ ಪಡಿಸಲಾಗಿದ್ದ CET ಪರೀಕ್ಷೆಗಳನ್ನು ಲಾಕ್‌ಡೌನ್‌ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಪರೀಕ್ಷೆಗಳಿಗೆ ಸುಮಾರು 1.9 ಲಕ್ಷ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದರು. ಕರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದೆಂದು ದಿ ಹಿಂದು ವರದಿ ಮಾಡಿದೆ.

ಬುಧವಾರ ಪತ್ರಿಕಾಗೋಷ್ಟಿ ನಡೆಸಿದ, ಉಪಮುಖ್ಯಮಂತ್ರಿಯೂ ಆಗಿರುವ ಅಶ್ವಥ್‌ ನಾರಾಯಣ್‌ ಈ ಬಾರಿ ಶೈಕ್ಷಣಿಕ ವರ್ಷವು ಸೆಪ್ಟೆಂಬರ್‌ ತಿಂಗಳ ಮೊದಲ ವಾರದಲ್ಲಿ ಶುರುವಾಗಲಿದೆ ಎಂದಿದ್ದಾರೆ.

Click here Support Free Press and Independent Journalism

Pratidhvani
www.pratidhvani.com